Don't Miss!
- News
Breaking; ಸಾಹಿತಿ, ವಿಮರ್ಶಕ ಕೆ. ವಿ. ತಿರುಮಲೇಶ್ ನಿಧನ
- Technology
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐದು ದಿನ ಕಳೆದರೂ ನಿಲ್ಲದ 'ಭೂಲ್ ಭುಲಯ್ಯ 2' ಓಟ: 5ನೇ ದಿನದ ಕಲೆಕ್ಷನ್ ಎಷ್ಟು?
ನಟ ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ 2' ಚಿತ್ರ ಸಕ್ಸಸ್ ಹಾದಿ ಹಿಡಿದಿದ್ದು, ಎಲ್ಲೆಡೆ ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ. ಈ ಮೂಲಕ ಸತತ ಸೋಲು ಕಂಡಿದ್ದ ಬಾಲಿವುಡ್‌ಗೆ ಈ ಸಿನಿಮಾ ಮೂಲಕ ಕೊಂಚ ರಿಲ್ಯಾಕ್ಸ್ ಸಿಕ್ಕಿದ್ದು, ಮತ್ತೆ ಬಾಲಿವುಡ್ ಸಿನಿಮಾಗಳ ಆರ್ಭಟ ಶುರುವಾಗುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಸಿನಿಮಾಗಳ ಹಾವಳಿಯಿಂದ ಬಾಲಿವುಡ್‌ನ ಸ್ಟಾರ್ ಸಿನಿಮಾಗಳೇ ನೆಲಕಚ್ಚಿದ್ದವು. 'RRR', 'ಕೆಜಿಎಫ್ 2' ಸಿನಿಮಾಗಳ ಆರ್ಭಟ ಆ ಮಟ್ಟಿಗೆ ಇತ್ತು. ಪ್ರೇಕ್ಷಕರು ಕೂಡ ಮುಗಿಬಿದ್ದು ಈ ಸಿನಿಮಾಗಳನ್ನು ನೋಡುತ್ತಿದ್ದರು. ಇದರಿಂದಾಗಿ ಹಿಂದಿ ನಟರ ಚಿತ್ರಗಳು ಮೂಲೆಗುಂಪಾಗಿದ್ದವು.
'ಭೂಲ್
ಭುಲಯ್ಯ
2'
Vs
'ಕೆಜಿಎಫ್
2':
39ನೇ
ದಿನವೂ
ಕಮ್ಮಿಯಾಗಿಲ್ಲ
ರಾಕಿ
ಖದರ್!
ಸದ್ಯ ಈ ಸೋಲಿನ ಬಳಿಕ ಹೊಸ ಗೆಲುವು ಸಿಕ್ಕಿದ್ದು, ಹಿಂದಿ ನಟರ ಸಿನಿಮಾಗಳಿಗೆ ಮತ್ತೆ ಬಾಕ್ಸಾಫೀಸ್ ಓಪನ್ ಆಗಿದೆ. 'ಭೂಲ್ ಭುಲಯ್ಯ 2' ಚಿತ್ರ ಅದ್ಬುತ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸಕ್ಸಸ್ ಆಗಿದೆ. ಅಲ್ಲದೆ ಬಾಕ್ಸಾಫೀಸ್ ಕಲೆಕ್ಷನ್‌ನ್ನು ಭರ್ಜರಿಯಾಗಿಯೇ ಬಾಚಿಕೊಂಡಿದೆ.

ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುತ್ತಿರುವ 'ಭೂಲ್ ಭುಲಯ್ಯ 2'
ಹಾರರ್ ಅಂಡ್ ಕಾಮಿಡಿ ಮಿಶ್ರಣವುಳ್ಳ 'ಭೂಲ್ ಭುಲಯ್ಯ 2' ಚಿತ್ರ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರತಂಡವೂ ಕೂಡ ಸಿನಿಮಾ ರಿಲೀಸ್‌ಗೂ ಮುನ್ನ ಭರ್ಜರಿ ಪ್ರಚಾರ ಮಾಡಿದ್ದರು. ಆ ಪ್ರಚಾರಕ್ಕೆ ಮೋಸವಿಲ್ಲದಂತೆ ಪ್ರೇಕ್ಷಕರು ಚಿತ್ರತಂಡದ ಕೈ ಹಿಡಿದಿದ್ದಾರೆ. ಸಿನಿಮಾ ರಿಲೀಸ್ ಆಗಿ ಐದು ದಿನಗಳು ಕಳೆದರೂ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ನಿನ್ನೆ (ಮೇ 24) ರಂದು ₹9.5 ಕೋಟಿ ಕಲೆಕ್ಷನ್ ಮಾಡಿಕೊಂಡಿರುವ ಸಿನಿಮಾ ಒಟ್ಟಾರೆ ₹75.35 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮುನ್ನುಗ್ಗುತ್ತಿದೆ. ವೀಕ್ ಡೇಸ್‌ನಲ್ಲೂ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಪ್ರೇಕ್ಷಕರು ಸಿನಿಮಾಗೆ ಜೈ ಎಂದಿದ್ದಾರೆ.
ಅಂತೂ
ಬಾಲಿವುಡ್
ಮರ್ಯಾದೆ
ಉಳೀತು:
'ಭೂಲ್
ಭುಲಯ್ಯ
2'
2ನೇ
ದಿನದ
ಕಲೆಕ್ಷನ್
ಸೂಪರ್!

ಈ ವಾರ ₹100 ಕೋಟಿ ದಾಟುತ್ತಾ 'ಭೂಲ್ ಭುಲಯ್ಯ 2'
'ಭೂಲ್ ಭುಲಯ್ಯ 2' ಚಿತ್ರಕ್ಕೆ ಪ್ರೇಕ್ಷಕರು ಅಸ್ತು ಎಂದಿದ್ದು, ಹಲವೆಡೆ ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆ ಕೇವಲ ಐದೇ ದಿನಗಳಲ್ಲಿ ಸಿನಿಮಾದ ಟಿಕೆಟ್ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ. ಬರೋಬ್ಬರಿ 47 ಟಿಕೆಟ್ ಸೇಲ್ ಆಗಿದೆ. ಈಗಲೂ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಹೀಗೆ ಪ್ರದರ್ಶನಗೊಂಡರೆ, ಸಿನಿಮಾ ಈ ವಾರದ ವಿಕೇಂಡ್‌ನಲ್ಲಿ ₹100 ಕೋಟಿ ಕಲೆಕ್ಷನ್ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಒಂದು ವೇಳೆ ₹100 ಕೋಟಿ ಕಲೆಕ್ಷನ್ ಮಾಡಿಕೊಂಡರೆ, ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಅತಿ ವೇಗವಾಗಿ ಗಳಿಕೆ ಮಾಡಿಕೊಂಡ ಮೂರನೇ ಹಿಂದಿ ಚಿತ್ರವಾಗಲಿದೆ. ಈ ಹಿಂದೆ 'ಗಂಗೂಬಾಯಿ ಕಾಠಿಯಾವಾಡಿ' ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಹಿಂದಿ ಬಾಕ್ಸಾಫೀಸ್ ಕಲೆಕ್ಷನ್ ಧೂಳೆಬ್ಬಿಸಿತ್ತು.

'ಭೂಲ್ ಭುಲಯ್ಯ 2' ಚಿತ್ರದಿಂದ ಹೊಸ ಚೈತನ್ಯ
ಬಾಲಿವುಡ್ ಚಿತ್ರೋದ್ಯಮ ಕೊರೊನಾ ಬಳಿಕ ಈ ವರ್ಷದಿಂದ ಕೊಂಚ ಚೇತರಿಕೆ ಕಾಣುತ್ತಿದೆ. ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿದೆ. ಆದರೆ, ವರ್ಷದ ಆರಂಭದಲ್ಲಿ ಹಿಂದಿ ಚಿತ್ರರಂಗ ಭರ್ಜರಿ ಸಿನಿಮಾಗಳನ್ನು ನೀಡುವ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿತ್ತು. ಆದರೆ, ಯಾವಾಗ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಜೋರಾಯ್ತು. ಬಾಲಿವುಡ್‌ನ ಸ್ಟಾರ್ ನಟರ ಸಿನಿಮಾಗಳೇ ಮೂಲೆ ಗುಂಪಾಯ್ತು. ಹಿಂದಿ ಅವತರಣಿಕೆಯ 'ಕೆಜಿಎಫ್ 2' ಚಿತ್ರ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಬಳಿಕ ಸ್ಟಾರ್ ನಟರ ಸಿನಿಮಾಗಳಾದ 'ರನ್ ವೇ 4', 'ಬಚ್ಚನ್ ಪಾಂಡೇ', 'ಹಿರೋಪಂಥಿ' ಸಿನಿಮಾಗಳನ್ನು ಕೇಳುವವರೆ ಇಲ್ಲದಂತಾಯ್ತು. ಬಾಕ್ಸಾಫೀಸ್ ಕಲೆಕ್ಷನ್ ಕೂಡ ಆಗದೇ ಸತತ ಸೋಲು ಕಂಡಿತ್ತು. ಸದ್ಯ ಈ ಸೋಲಿಗೆ ಈಗ ಗೆಲುವು ಸಿಕ್ಕಿದ್ದು, 'ಭೂಲ್ ಭೂಲಯ್ಯ 2' ಬಾಕ್ಸ್‌ಆಫೀಸ್‌ನಲ್ಲಿ ಕಮಾಲ್ ಮಾಡುವ ಮೂಲಕ ಯಶಸ್ಸು ಕಾಣುತ್ತಿದೆ. ಇದು ಬಾಲಿವುಡ್‌ಗೆ ಹೊಸ ಚೇತರಿಕೆ ತಂದುಕೊಟ್ಟಿದೆ.
ಸೋಲು
ಕಂಡ
ಬಾಲಿವುಡ್‌ಗೆ
ರಿಲೀಫ್:
'ಭೂಲ್
ಭುಲಯ್ಯ
2'
ವೀಕೆಂಡ್
ಕಲೆಕ್ಷನ್
ಎಷ್ಟು?

ಹಲವು ಚಿತ್ರಮಂದಿರಗಳಲ್ಲಿ 'ಧಾಕಡ್' ಎತ್ತಂಗಡಿ
ಬಾಲಿವುಡ್‌ನಲ್ಲಿ ಸತತ ಸೋಲಿನ ಬಳಿಕ ಮತ್ತೆ ಕಲೆಕ್ಷನ್ ಮಾಡಿ ಮೇಲೆ ಎತ್ತಲು 'ಭೂಲ್ ಭುಲಯ್ಯ 2' ಹಾಗೂ 'ಧಾಕಡ್' ಚಿತ್ರಗಳು ರಿಲೀಸ್ ಆದವು. ಆದರೆ, ಪ್ರೇಕ್ಷಕರು 'ಭೂಲ್ ಭುಲಯ್ಯ 2' ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದು, ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ, ಕಂಗನಾ ಅಭಿನಯದ 'ಧಾಕಡ್' ಚಿತ್ರ ಮೊದಲ ದಿನವೇ ಕಲೆಕ್ಷನ್ ಮಾಡಿಕೊಳ್ಳುವುದಕ್ಕೆ ತಡಕಾಡಿದೆ. 'ಭೂಲ್ ಭುಲಯ್ಯ 2' ಚಿತ್ರಕ್ಕೆ ಸಿಕ್ಕ ಪ್ರಚಾರ 'ಧಾಕಡ್' ಚಿತ್ರಕ್ಕೆ ಸಿಗದೇ ಇರುವುದು ಕೂಡ 'ಧಾಕಡ್' ಸೋಲಿಗೆ ಕಾರಣ. ಅಲ್ಲದೆ 'ಧಾಕಡ್' ಚಿತ್ರ ಪ್ರೇಕ್ಷಕರನ್ನು ತಲುಪುವಲ್ಲಿ, ರಂಜಿಸುವಲ್ಲಿ ಸೋತಿದೆ. ಹೀಗಾಗಿ ಈ ಎರಡು ಚಿತ್ರ ಒಂದೇ ದಿನ ರಿಲೀಸ್ ಆದರೂ, ಕಂಗನಾ ಚಿತ್ರ ₹1 ಕೋಟಿ ಗಳಿಕೆ ಮಾಡಿಕೊಳ್ಳುವುದಕ್ಕೆ ಹೆಣಗಾಡಿದೆ. ಹೀಗಾಗಿ ಹಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಲ್ಲದ ಕಾರಣ 'ಧಾಕಡ್' ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ.