For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಲ್ಲಿ ಮತ್ತೊಂದು ಕ್ರಿಕೆಟ್ ಆಧರಿತ ಚಿತ್ರ: ಕಾರ್ತಿಕ್ ಆರ್ಯನ್ ನಾಯಕ?

  |

  'ಎಂಎಸ್ ಧೋನಿ' ಸಿನಿಮಾ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರದಿಂದ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೂ ಒಳ್ಳೆಯ ಬ್ರೇಕ್ ಸಿಕ್ತು. ಅದಾದ ಬಳಿಕ ಸಚಿನ್ ತೆಂಡೂಲ್ಕರ್ ಕುರಿತು ಸಿನಿಮಾ ಬಂತು. '83' ಹೆಸರಿನಲ್ಲಿ ವಿಶ್ವಕಪ್ ಗೆದ್ದ ತಂಡದ ಕುರಿತು ಸಿನಿಮಾ ತಯಾರಾಗಿದೆ.

  ಶಾಹೀದ್ ಕಪೂರ್ ನಟನೆಯಲ್ಲಿ 'ಜೆರ್ಸಿ' ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರವೂ ಕ್ರಿಕೆಟ್ ಆಧರಿತ ಕಥೆ ಹೊಂದಿದೆ. ಇದೀಗ, ಬಾಲಿವುಡ್‌ನಲ್ಲಿ ಮತ್ತೊಂದು ಕ್ರಿಕೆಟ್ ಆಧರಿತ ಸಿನಿಮಾ ಬರುವ ಸಾಧ್ಯತೆ ಇದೆ.

  ಹೊಸ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್: ಬೆಲೆ ಎಷ್ಟು ಗೊತ್ತೆ?

  'ಗುಂಜಾನ್ ಸಕ್ಸೇನಾ' ಸಿನಿಮಾ ನಿರ್ದೇಶಕ ಶರಣ್ ಶರ್ಮಾ ಆಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಕ್ರಿಕೆಟರ್ ಆಗಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

  ಕಾರ್ತಿಕ್ ಮತ್ತು ಶರಣ್ ಕಾಂಬಿನೇಷನ್‌ನಲ್ಲಿ ಬರಲಿರುವ ಚಿತ್ರ ಕ್ರಿಕೆಟರ್ ಕಥೆ ಹೊಂದಿದೆ. ಆದರೆ, ಇದು ಬಯೋಪಿಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಕಳೆದ ಎರಡು ತಿಂಗಳಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶರಣ್ ಶರ್ಮಾ ಹಲವು ಭಾರಿ ಭೇಟಿ ಮಾಡಿದ್ದು, ಹೊಸ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

  'ಲವ್ ಆಜ್ ಕಲ್' ಖ್ಯಾತಿಯ ನಟ ಕಾರ್ತಿಕ್ ಬಾಲಿವುಡ್‌ನಲ್ಲಿ ಸದ್ಯ ಹೆಚ್ಚು ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ 'ಧಮಾಕ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. 'ಭೂಲ್ ಭೂಲೈಯಾ 2' ಶೂಟಿಂಗ್ ಆರಂಭಿಸಿದ್ದಾರೆ. 'ದೋಸ್ತಾನ 2' ಚಿತ್ರವೂ ಕೈಯಲ್ಲಿದೆ. ಅಲ್ಲು ಅರ್ಜುನ್ ನಟಿಸಿದ್ದ 'ಅಲಾ ವೈಕುಂಠಪುರಂಲೋ' ಚಿತ್ರದ ಹಿಂದಿ ರೀಮೇಕ್‌ನಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಈ ನಡುವೆ ಶರಣ್ ಶರ್ಮಾ ಜೊತೆ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದಾರೆ.

  English summary
  Bollywood Young actor Kartik Aaryan set to play Cricketer In Sharan Sharma’s Next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X