For Quick Alerts
  ALLOW NOTIFICATIONS  
  For Daily Alerts

  ಬಾಯ್‌ಫ್ರೆಂಡ್‌ ಜೊತೆ ಹೊಸ ವರ್ಷ ಆಚರಿಸಿದ್ರಾ ನಟಿ ಕತ್ರಿನಾ ಕೈಫ್?

  |

  2021ನೇ ವರ್ಷಕ್ಕೆ ಹೆಜ್ಜೆಯಿಟ್ಟಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಹೊಸ ವರ್ಷವನ್ನು ಸ್ವಾಗತಿಸಿದ್ದೇವೆ. ಕೊರೊನಾ ಭೀತಿಯ ನಡುವೆ ಈ ಸಲ ಹೊಸ ವರ್ಷವನ್ನು ಅದ್ಧುರಿಯಾಗಿ ಸೆಲೆಬ್ರೆಟ್ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ಅನೇಕರಿಗೆ ನಿರಾಸೆ ತಂದಿದೆ. ಆದರೆ, ಈ ವಿಚಾರದಲ್ಲಿ ಬಾಲಿವುಡ್‌ಗೆ ಯಾವುದೇ ಬೇಸರ ಆಗಿಲ್ಲ ಬಿಡಿ. ಏಕಂದ್ರೆ, ಬಿಗ್ ಇಂಡಸ್ಟ್ರಿಯ ಬಹುತೇಕರು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

  ಯಾವ ಸೆಲೆಬ್ರಿಟಿಗಳು ಎಲ್ಲೆಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎನ್ನುವ ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ನಿಧಾನವಾಗಿ ಒಂದೊಂದೇ ಫೋಟೋಗಳು ಬಹಿರಂಗವಾಗುತ್ತಿದೆ. ಕತ್ರಿನಾ ಕೈಫ್ ಹೊಸ ವರ್ಷವನ್ನು ತಮ್ಮ ಬಾಯ್‌ಫ್ರೆಂಡ್ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಇಬ್ಬರು ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದು 2021ನೇ ವರ್ಷವನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

  ವಿಕ್ಕಿ ಕೌಶಲ್ ಜೊತೆ ಕತ್ರಿನಾ?

  ವಿಕ್ಕಿ ಕೌಶಲ್ ಜೊತೆ ಕತ್ರಿನಾ?

  ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೋಡಿ ಒಟ್ಟಿಗೆ ಹೊಸ ವರ್ಷ ಆಚರಿಸಿದೆ ಎಂಬ ಕುತೂಹಲ ಹಾಗೂ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಅದಕ್ಕೆ ಕಾರಣ ಈ ಇಬ್ಬರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡಿರವ ರೀತಿ. ಇಬ್ಬರು ಒಂದೇ ರೀತಿಯಾಗಿ, ಒಂದೇ ಅರ್ಥ ನೀಡುವಂತೆ ಹೊಸ ವರ್ಷಕ್ಕೆ ಶುಭಕೋರಿದ್ದಾರೆ.

  ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಗೆಳತಿ ಕತ್ರೀನಾ ಕೈಫ್ ವಿಶ್ ಮಾಡಿದ್ದು ಹೀಗೆ

  ಸಹೋದರ-ಸಹೋದರಿ ಜೊತೆ ಫೋಟೋ

  ಸಹೋದರ-ಸಹೋದರಿ ಜೊತೆ ಫೋಟೋ

  ಹೊಸ ವರ್ಷದ ವಿಶೇಷವಾಗಿ ಕತ್ರಿನಾ ಕೈಫ್ ತಮ್ಮ ಸಹೋದರಿ ಇಸಾಬೆಲ್ಲೆ ಜೊತೆಗಿನ ಫೋಟೋ ಹಂಚಿಕೊಂಡು ''ವರ್ಷದ 365 ದಿನಗಳ ಸಂತೋಷ'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಕಾಕತಾಳೀಯ ಅಥವಾ ಉದ್ದೇಶಿತವೋ ವಿಕ್ಕಿ ಕೌಶಲ್ ಸಹ ತಮ್ಮ ಸಹೋದರ ಸನ್ನಿ ಕೌಶಲ್ ಜೊತೆ ಫೋಟೋ ಹಂಚಿಕೊಂಡು ಹೊಸ ವರ್ಷ ವಿಶ್ ಮಾಡಿದ್ದಾರೆ. ಈ ಸಾಮಾನ್ಯತೆ ಕಂಡ ನೆಟ್ಟಿಗರು ಇಬ್ಬರು ಒಟ್ಟಿಗೆ ಹೊಸ ವರ್ಷ ಸೆಲೆಬ್ರೆಟ್ ಮಾಡಿದ್ದಾರೆ ಎಂದು ಊಹಿಸುತ್ತಿದ್ದಾರೆ.

  ಒಂದೇ ಸ್ಥಳಕ್ಕೆ ಹೋಗಿದ್ದಾರಂತೆ!

  ಒಂದೇ ಸ್ಥಳಕ್ಕೆ ಹೋಗಿದ್ದಾರಂತೆ!

  ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ಶುಭಕೋರಿರುವ ರೀತಿ ಮತ್ತು ಅವರ ಸಾಮ್ಯತೆಯಿಂದ ಮಾತ್ರವಲ್ಲ, ಅವರ ಹಂಚಿಕೊಂಡಿರುವ ಫೋಟೋಗಳಲ್ಲಿ ಹಿಂದಿರುವ ಬ್ಯಾಗ್ರೌಂಡ್ ಸಹ ಹೋಲುತ್ತಿದೆ ಎಂಬ ಅನುಮಾನವನ್ನು ನೆಟ್ಟಿಗರು ಮುಂದಿಟ್ಟಿದ್ದಾರೆ.

  ಚೆಲುವೆ ಕತ್ರೀನಾ ಕೈಫ್‌ಳ ಹೊಸ ಬಾಯ್‌ಫ್ರೆಂಡ್ ಯಾರೆಂದು ಗೊತ್ತೆ?

  ಒಟ್ಟಿಗೆ ಹೋಗಿದ್ದರು ಎಂದು ಖಚಿತ ಇಲ್ಲ

  ಒಟ್ಟಿಗೆ ಹೋಗಿದ್ದರು ಎಂದು ಖಚಿತ ಇಲ್ಲ

  ಬಹಳ ದಿನದಿಂದಲೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ ಪ್ರೀತಿ ಎಂದು ಬಾಲಿವುಡ್‌ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಈ ಕುರಿತು ಇಬ್ಬರು ಸಹ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಈಗಲೂ ಇಬ್ಬರು ಒಟ್ಟಿಗೆ ಹೊಸ ವರ್ಷ ಆಚರಿಸುವ ಬಗ್ಗೆ ಖಚಿತ ಮಾಹಿತಿ ಇಲ್ಲ. ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರದಲ್ಲಿ ಕತ್ರಿನಾ ನಟಿಸಿದ್ದಾರೆ, ಶೂಜಿತ್ ಸಿರ್ಕಾರ್ ನಿರ್ದೇಶನದ ಸರ್ದಾರ್ ಉಧಮ್ ಸಿಂಗ್ ಜೀವನಚರಿತ್ರೆಯ ಚಿತ್ರದಲ್ಲಿ ವಿಕ್ಕಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood actress Katrina kaif celebrated new year with actor vicky kaushal?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X