»   » ಕಪೂರ್ ಖಾನ್ದಾನ್ ನ ಕಿರುಬೆರಳಲ್ಲಿ ಆಡಿಸುತ್ತಿದ್ದಾಳೆ ಕತ್ರೀನಾ!

ಕಪೂರ್ ಖಾನ್ದಾನ್ ನ ಕಿರುಬೆರಳಲ್ಲಿ ಆಡಿಸುತ್ತಿದ್ದಾಳೆ ಕತ್ರೀನಾ!

Posted By:
Subscribe to Filmibeat Kannada

ಕತ್ರೀನಾ ಕೈಫ್ ಮತ್ತು ರಣ್ಬೀರ್ ಕಪೂರ್ ಪ್ರೇಮ ಪರ್ವದ ಇಂಚಿಂಚು ಸಂಗತಿಗಳು ನಿಮಗೆ ಗೊತ್ತಿದೆ. ಒಂದೇ ಗೂಡಲ್ಲಿ ಸದ್ಯಕ್ಕೆ ಜಂಟಿಯಾಗಿರುವ ಈ ಪ್ರೇಮ ಪಕ್ಷಿಗಳು ಅದ್ಯಾವಾಗ ತಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆ ಒತ್ತಿಸಿಕೊಳ್ಳುತ್ತಾರೋ ದೇವರೇ ಬಲ್ಲ.

ಕಪೂರ್ ಅರಮನೆಗೆ ಇನ್ನೂ ಕತ್ರೀನಾ ಕೈಫ್ ಬಲಗಾಲಿಟ್ಟು ಹೋಗಿಲ್ಲ. 'ನಮ್ಮ ಮನೆಯ ಸೊಸೆ' ಅಂತ ಕಪೂರ್ ಖಾನ್ದಾನ್ ಇನ್ನೂ ಕತ್ರೀನಾಳನ್ನ ಮನೆ ತುಂಬಿಸಿಕೊಂಡಿಲ್ಲ. ಅಷ್ಟು ಬೇಗ ಇಡೀ ಕಪೂರ್ ಕುಟುಂಬವನ್ನ ಕಿರುಬೆರಳಲ್ಲೇ ಆಡಿಸುತ್ತಿದ್ದಾಳೆ ರಣ್ಬೀರ್ ಮನದಾಕೆ.

Katrina Kaif creates a WhatsApp group for 'The Kapoors'

ಹೌದು, ರಣ್ಬೀರ್ ಜೊತೆ ಇಡೀ ಕಪೂರ್ ಫ್ಯಾಮಿಲಿ ಜೊತೆ ಉತ್ತಮ ಒಡನಾಟ ಹೊಂದಿರುವ ಕತ್ರೀನಾ 'ವಾಟ್ಸ್ ಆಪ್'ನಲ್ಲಿ 'ದಿ ಕಪೂರ್ಸ್' ಅಂತ ಗ್ರೂಪ್ ಕ್ರಿಯೇಟ್ ಮಾಡಿದ್ದಾಳಂತೆ. ಅದಕ್ಕೆ ಅಡ್ಮಿನ್ ಕೂಡ ಖುದ್ದು ಕತ್ರೀನಾ ಕೈಫ್ ಅಲ್ಲ..ಅಲ್ಲ, ಕತ್ರೀನಾ ಕಪೂರ್!

ಕುಟುಂಬದ ಯಾವುದೇ ವಿಷಯಗಳಿದ್ದರೂ, ಎಲ್ಲವೂ ಚರ್ಚೆ ಆಗುತ್ತಿರುವುದು ಇದೇ ಗ್ರೂಪ್ ನಲ್ಲಿ. ಒಬ್ಬೊಬ್ಬರು ಒಂದೊಂದು ಕಡೆ ಇರೋದ್ರಿಂದ ಒಮ್ಮೆಲೆ ಭೇಟಿ ಆಗುವುದು ಕಷ್ಟ. ಗ್ರೂಪ್ ಡಿಸ್ಕಷನ್ ಮೇಲು ಅಂತ 'ವಾಟ್ಸ್ ಆಪ್'ನಲ್ಲಿ 'ದಿ ಕಪೂರ್ಸ್' ಗ್ರೂಪ್ ಕ್ರಿಯೇಟ್ ಮಾಡಿದ್ದಾಳೆ ಕತ್ರೀನಾ. [ಕತ್ರೀನಾ ಜೊತೆ ನಿಶ್ಚಿತಾರ್ಥ, ಏನಿದು ರಣ್ಬೀರ್ ಮಾತಿನಾರ್ಥ?]

Katrina Kaif creates a WhatsApp group for 'The Kapoors'

ಅದಾಗಲೇ 'ದಿ ಕಪೂರ್ಸ್' ಗ್ರೂಪ್ ನಲ್ಲಿ ನೀತು ಕಪೂರ್, ರಿಷಿ ಕಪೂರ್, ರಿಧೀಮಾ ಕಪೂರ್, ಮತ್ತು ಕತ್ರೀನಾ ತಾಯಿ ಕೂಡ ಸೇರಿಕೊಂಡಿದ್ದಾರಂತೆ. ಹೆಂಗಳೆಯರ ದಂಡು ಮತ್ತವರ ಗಾಸಿಪ್ ಗಳೇ ಹೆಚ್ಚಾಗಿದ್ದರಿಂದ ಕೊಂಚ ಕಿರಿಕಿರಿಗೊಂಡು ರಿಷಿ ಕಪೂರ್ ಗ್ರೂಪ್ ನಿಂದ ಹೊರಬಂದಿದ್ದಾರಂತೆ. [ಕತ್ರೀನಾ ಕೈಫ್ ಕಿವಿಕಚ್ಚಿದ ರಣ್ಬೀರ್ ಮಾಜಿ ಪ್ರೇಯಸಿ ದೀಪಿಕಾ]

ಇದನ್ನೆಲ್ಲಾ ನೋಡ್ತಿದ್ರೆ, ಈ ಆಂಗ್ಲ ಬೆಡಗಿಯನ್ನ ಕಪೂರ್ ಖಾನ್ದಾನ್ ನೊಳಗೆ ಬರಮಾಡಿಕೊಳ್ಳುವುದಕ್ಕೆ ಕಪೂರ್ ಕುಟುಂಬ ರೆಡಿಯಾಗಿರೋ ಹಾಗಿದೆ. ಕಿರುಬೆರಳಿನ ಅಂಚಿನಲ್ಲೇ ಇಡೀ ಕಪೂರ್ ಕುಟುಂಬದೊಳಗೆ ಕತ್ರೀನಾ ಕೂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಎಲ್ಲದಕ್ಕೂ 'ವಾಟ್ಸ್ ಆಪ್'ಗೆ ಥ್ಯಾಂಕ್ಸ್ ಹೇಳಬೇಕು. (ಏಜೆನ್ಸೀಸ್)

English summary
According to the reports, Katrina Kaif has created a WhatsApp group named 'The Kapoors'. It is said that Katrina Kaif is the Admin for the group and has added Neetu Kapoor, Rishi Kapoor, Riddhima Kapoor and others.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X