»   » ಸಲ್ಮಾನ್ ಬಗ್ಗೆ ಬೇಸರಗೊಂಡ ಕತ್ರಿನಾ ಕೈಫ್: ಏಕೆ ಗೊತ್ತಾ?

ಸಲ್ಮಾನ್ ಬಗ್ಗೆ ಬೇಸರಗೊಂಡ ಕತ್ರಿನಾ ಕೈಫ್: ಏಕೆ ಗೊತ್ತಾ?

Posted By:
Subscribe to Filmibeat Kannada

ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆತಾನೆ ಸಾಮಾಜಿಕ ಜಾಲತಾಣ ಇನ್ ಸ್ಟಗ್ರಾಂ ಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ನ ತಮ್ಮ ಸಹ ನಟ-ನಟಿಯರಿಂದ ದೊಡ್ಡ ಮಟ್ಟದಲ್ಲಿ ಸ್ವಾಗತವನ್ನು ಪಡೆದಿದ್ದರು.[ಮಾಜಿ ಲವರ್ ಕತ್ರಿನಾ ಕೈಫ್ ಮೇಲೆ ಸಲ್ಮಾನ್ ಖಾನ್ ಕಾಳಜಿ!]

ಕತ್ರಿನಾ ಇನ್ ಸ್ಟಗ್ರಾಂ ಖಾತೆ ಗೆ ಪಾದಾರ್ಪಣೆ ಮಾಡಿದ್ದಕ್ಕೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ಸ್ವೀಟ್ ಮೆಸೇಜ್ ವೊಂದನ್ನು ಪೋಸ್ಟ್ ಮಾಡಿದ್ದರು. ಆದರೇ ಸಲ್ಮಾನ್ ಖಾನ್ ರ ಇದೇ ಮೆಸೇಜ್ ನಿಂದ ಕತ್ರಿನಾ ಕೈಫ್ ಈಗ ಬೇಸರಗೊಂಡಿದ್ದು, ಈ ಮೆಸೇಜ್ ಸಮಾಧಾನಕ್ಕಾಗಿ ಎಂದು ಹೇಳಿದ್ದಾರೆ. ಕತ್ರಿನಾ ಹೀಗೆ ಹೇಳಿದ್ದಾದರು ಏಕೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್...

ಇದು ಸಮಾಧಾನಕ್ಕಾಗಿ ಎಂದ ಕತ್ರಿನಾ

ಇತ್ತೀಚಿಗೆ Pinkvilla ಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ ಕೈಫ್, "ಇನ್ ಸ್ಟಗ್ರಾಂ ನಲ್ಲಿ ಸಲ್ಮಾನ್ ಖಾನ್ ಹಾಕಿರುವ ಪೋಸ್ಟ್ ನನ್ನ ಸಮಾಧಾನಕ್ಕಾಗಿ ಅಷ್ಟೇ. ಫ್ಯಾಕ್ಟ್ ಏನಂದ್ರೆ ಸಿನಿಮಾ ಟೈಟಲ್ 'ಟೈಗರ್ ಜಿಂದಾ ಹೈ" ಎಂದು ಉತ್ತರಿಸಿದ್ದಾರೆ.

ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿದೆ

ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ಕತ್ರಿನಾ, "ಚಿತ್ರವನ್ನು ಪ್ರಕಟಣೆ ಮಾಡಿದಾಗ ಎಲ್ಲರೂ ಗ್ರೇಟ್ ಟೈಟಲ್ ಎಂದರು. ನಂತರವಷ್ಟೇ ಆಸ್ಟ್ರೀಯಾದಲ್ಲಿ ಚಿತ್ರೀಕರಣ ಆರಂಭಿಸಿದೆವು. ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿದೆ" - ಕತ್ರಿನಾ ಕೈಫ್

ಆದರೆ...

" ಕೆಲವರು ನನ್ನಲ್ಲಿ ಚಿತ್ರದ ಹೆಸರು 'ಟೈಗರ್ ಜಿಂದಾ ಹೈ' ಏಕೆ? ಮತ್ತು ಅದರಲ್ಲಿ ನೀವೇಕೆ ಇಲ್ಲ ಎಂದರು. ಅಂದರೆ ಚಿತ್ರದ ಹೆಸರು 'Zoya Zinda Hai ಅಥವಾ Tiger Aur Zoya Zinda Hai ಅಥವಾ Tiger Aur Tigress Zinda Hai' ಏಕಿಲ್ಲ ಅಂದರು. ಆದ ಕಾರಣ ನಾನೀಗ ಸಲ್ಮಾನ್ ಖಾನ್ ಪೋಸ್ಟ್ ನನ್ನ ಸಮಾಧಾನಕ್ಕಾಗಿ ಎಂದು ಯೋಚಿಸಿದ್ದೇನೆ. ಆದರೆ ತೀರ ಬೇಸರ ಪಡುವ ಸಂಗತಿ ಅಲ್ಲ" - ಕತ್ರಿನಾ ಕೈಫ್

ಸಲ್ಮಾನ್ ಮತ್ತು ಕತ್ರಿನಾ ಸಂಬಂಧ

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ತಮ್ಮ ಬ್ರೇಕಪ್ ನಂತರವು ಇಬ್ಬರ ಸಂಬಂಧದ ಬಗ್ಗೆ ವಿಶೇಷ ಹೇಳಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆ 'ಟೈಗರ್ ಜಿಂದಾ ಹೈ' ಚಿತ್ರೀಕರಣದ ವೇಳೆ ಕತ್ರಿನಾ ಅಸ್ವಸ್ತಗೊಂಡಾಗ ಸಲ್ಲು ವಿಶೇಷವಾಗಿ ಕೇರ್ ತೆಗೆದುಕೊಂಡಿದ್ದರು.[ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಮಾಜಿ ಪ್ರಿಯತಮೆ!]

ಹಾಡು ಚಿತ್ರೀಕರಣ ಮುಂದೂಡಿದ್ದ ಸಲ್ಲು

ಕತ್ರಿನಾ ಕೈಫ್ ಅನಾರೋಗ್ಯದ ಕಾರಣ ಸಲ್ಲು 'ಟೈಗರ್ ಜಿಂದಾ ಹೈ' ಚಿತ್ರತಂಡಕ್ಕೆ ಹೇಳಿ ಹಾಡೊಂದರ ಚಿತ್ರೀಕರಣವನ್ನು ಪೋಸ್ಟ್‌ಪೋನ್ ಸಹ ಮಾಡಿದ್ದರು.

'ಟೈಗರ್ ಜಿಂದಾ ಹೈ'

'ಟೈಗರ್ ಜಿಂದಾ ಹೈ' ಸಿನಿಮಾ ಕಬೀರ್ ಖಾನ್ ರವರ 2012 ರ ಬ್ಲಾಕ್ ಬಾಸ್ಟರ್ 'ಏಕ್ ಥ ಟೈಗರ್' ಚಿತ್ರದ ಸೀಕ್ವೆಲ್. ಈ ಚಿತ್ರವು 2017 ರ ಕ್ರಿಸ್ ಮಸ್ ವೇಳೆಗೆ ಬಿಡುಗಡೆ ಆಗಲಿದೆ.

English summary
Katrina Kaif made her debut on Instagram recently and received a very warm welcome from her Bollywood colleagues. Salman Khan too posted a very sweet message for his tigress but Katrina says it's just Salman's way to compensate things. Scroll down to know why she said this.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada