Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್-ಕೇರಳ ಬ್ಲಾಸ್ಟರ್ಸ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- News
ಚಿಕ್ಕಲ್ಲೂರು ಜಾತ್ರೆಗೆ ಭಕ್ತರಿಗಿಲ್ಲ ದರ್ಶನದ ಅವಕಾಶ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಪಾತ್ರದಲ್ಲಿ ಕತ್ರೀನಾ ಕೈಫ್?
ಬಾಲಿವುಡ್ ನಟಿ ಕತ್ರೀನಾ ಕೈಫ್ ಸದ್ಯ ಭಾರತ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಮಿಂಚಿರುವ ಕತ್ರೀನಾ ಟ್ರೈಲರ್ ಮತ್ತು ಹಾಡುಗಳ ಮೂಲಕ ಈಗಾಗಲೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದರ ನಡುವೆ ಈಗ ಕತ್ರೀನಾ ಕೈಫ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಹೌದು ಭಾರತದ ಉಕ್ಕಿನ ಮಹಿಳೆ, ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊರಹಾಕಿದ್ದಾರೆ.
ಇಂದಿರಾ ಗಾಂಧಿ ಬಯೋಪಿಕ್ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಲೆ ಇತ್ತು. ಆದ್ರೀಗ ಈ ಸಿನಿಮಾ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. 'ಭಾರತ್' ಸಿನಿಮಾದ ಹಾಡುಗಳು ಮತ್ತು ಟ್ರೈಲರ್ ನೋಡಿದ ಅನೇಕರು ಈ ಚಿತ್ರದಲ್ಲಿ ಕತ್ರೀನಾ ಕೈಫ್, ಇಂದಿರ ಗಾಂಧಿಯನ್ನು ಹೋಲುತ್ತಾರೆ. ಹಾಗಾಗಿ ಇಂದಿರಾ ಬಯೋಪಿಕ್ ಗೆ ಕತ್ರೀನಾ ಸೂಕ್ತವಾದ ಆಯ್ಕೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.
ಇದರ ಜೊತೆಗೆ ಕತ್ರೀನಾ ಕೂಡ ಭಾರತದ ಮೊದಲ ಪ್ರಧಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊರ ಹಾಕಿದ್ದಾರೆ. ಹಾಗಾಗಿ ಇಂದಿರಾ ಬಯೋಪಿಕ್ ಸೆಟ್ಟೇರಿದ್ರೆ ಮೊದಲ ಆಯ್ಕೆ ಕತ್ರೀನಾ ಆಗಿರುವುದರಲ್ಲಿ ಅನುಮಾನವೆ ಇಲ್ಲ.
'ಝೀರೋ' ಸಿನಿಮಾದ ನಂತರ ಕತ್ರೀನಾ ಮತ್ತೆ ತೆರೆಮೇಲೆ ಬಂದಿಲ್ಲ. ಈಗ ಸಲ್ಮಾನ್ ಜೊತೆ ಚಿತ್ರ ಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಕತ್ರೀನಾ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.