For Quick Alerts
  ALLOW NOTIFICATIONS  
  For Daily Alerts

  ಹೊಸ ಲುಕ್‌ನಲ್ಲಿ ಬಂದ ವಿಕ್ಕಿ ಕೌಶಲ್ ಫುಲ್ ಟ್ರೋಲ್!

  By Bhagya.s
  |

  ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಬಳಿಕ ಈ ಜೋಡಿ ಹಲವು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಈಗ ಈ ಜೋಡಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹೊಸ ಲುಕ್ ಮೂಲಕ ಗಮನ ಸೆಳೆದಿದೆ.

  ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇಬ್ಬರೂ ಕೂಡ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಹಾಲಿ ಡೇ ಎಂಜಾಯ್ ಮಾಡಲು ಹೊರಟಿದ್ದ ಈ ಜೋಡಿ, ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್, ವಿಕ್ಕಿ ಇಬ್ಬರೂ ಕ್ಯಾಶುವಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  ಕತ್ರಿನಾ ಕೈಫ್ ಮಸ್ಕ್ ಹಾಕಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ನಟ ವಿಕ್ಕಿ ಕೌಶಲ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಗಡ್ಡ ತೆಗೆದಿದ್ದು, ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಕಿಯ ಈ ಲುಕ್ ಟ್ರೋಲ್‌ಗೆ ತುತ್ತಾಗಿದೆ.

  ಹೌದು, ನಟ ವಿಕ್ಕಿ ಕೌಶಲ್ ಗಡ್ಡ ತೆಗೆದಿರುವುದು ಟ್ರೋಲ್ ಆಗ್ತಿದೆ. ಈ ಲುಕ್‌ನಲ್ಲಿ ವಿಕ್ಕಿ ಕೊಂಚ ಕಪ್ಪಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರ ಬಣ್ಣದ ಬಗ್ಗೆ ಕೂಡ ಟ್ರೋಲ್ ಮಾಡಲಾಗುತ್ತಿದೆ. ಹಲವರು ಗಡ್ಡದ ಲುಕ್‌ನಲ್ಲಿ ಚೆಂದ ಎನ್ನುತ್ತಿದ್ದಾರೆ. ಇನ್ನು ಹಲವರು ಗಡ್ಡ ಎಲ್ಲಿ ಹೋಯ್ತು ಎನ್ನುತ್ತಿದ್ದಾರೆ.

  ಇದೇ ಜುಲೈ 16ಕ್ಕೆ ಕತ್ರಿನಾ ಕೈಫ್ ಹುಟ್ಟುಹಬ್ಬ. ಹಾಗಾಗಿ ಈ ಸಂಭ್ರಮವನ್ನು ಆಚರಿಸಲು ವಿಕ್ಕಿ ಮತ್ತು ಕತ್ರಿನಾ ಮಾಲ್ಡೀವ್ಸ್‌ಗೆ ಹಾರಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆಯನ್ನು ಅತ್ಯಂತ ಗೌಪ್ಯವಾಗಿ ಮಾಡಿಕೊಂಡಿದ್ದು, ಕೆಲವರಿಗೆ ಮಾತ್ರವೇ ಆಹ್ವಾನ ಇತ್ತು.

  ಇನ್ನು ಟ್ರೋಲ್ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ನಟ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಕೂಡ ತಮ್ಮ ಬದಲಾದ ಲುಕ್‌ನಿಂದ ಟ್ರೋಲ್ ಆಗಿದ್ದರು. ಇವರನ್ನು ಪಾವ್ ಭಾಜಿ ಎಂದು ಕರೆದಿದ್ದಾರೆ ನೆಟ್ಟಿಗರು. ಈಗ ವಿಕ್ಕಿ ಕೌಶಲ್ ಸರದಿ. ಇನ್ನು ಟ್ರೋಲ್ ಜೊತೆಗೆ ಈ ಜೋಡಿಯ ಅಭಿಮಾನಿಗಳು ಇಬ್ಬರು ಒಟ್ಟಾಗಿ ಸಿನಿಮಾ ಮಾಡಿ ಎಂದು ಕೇಳುತ್ತಿದ್ದಾರೆ.

  English summary
  Katrina Kaif Husband Vicky Kaushal Clean Shaven Look Troll, Know More
  Saturday, July 16, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X