»   » ಕರೀನಾ, ಪ್ರಿಯಾಂಕಾ ನನಗಿಂತ ತುಂಬಾ ದೊಡ್ಡವರು

ಕರೀನಾ, ಪ್ರಿಯಾಂಕಾ ನನಗಿಂತ ತುಂಬಾ ದೊಡ್ಡವರು

Posted By:
Subscribe to Filmibeat Kannada
Katrina Kaif
ಕತ್ರಿನಾ ಕೈಫ್ ಬಾಲಿವುಡ್ ತುಂಬಾ ಪ್ರಕಾಶಿಸುತ್ತಿದ್ದಾರೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಕೇವಲ ಸಲ್ಮಾನ್ ಖಾನ್ ಮಾತ್ರವಲ್ಲ, ಕತ್ರಿನಾ ಕೈಫ್ ಕೂಡ ಭಾರಿ ಮಿಂಚುತ್ತಿದ್ದಾರೆ. 'ರಾಜ್ ನೀತಿ'ಯಂತಹ ಚಿತ್ರದಲ್ಲಿ ಗಟ್ಟಿ ಪಾತ್ರ ಮಾಡಿದ್ದರೂ ಕತ್ರಿನಾರನ್ನು ಕೇವಲ 'ಹಾಟ್ ಬ್ಯೂಟಿ' ಎಂದೇ ಬಿಂಬಿಸಲಾಗುತ್ತಿತ್ತು. ಆದರೀಗ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳ ಕಡೆ ಕತ್ರಿನಾ ದೃಷ್ಟಿ ಬಿದ್ದಿದೆ.

ತಾವೀಗ ಕೇವಲ ದಂತದ ಬೊಂಬೆಯಲ್ಲ, ಬಾಕ್ಸ್ ಆಫೀಸ್ ನಲ್ಲಿ ಮಿಂಚಬಲ್ಲ ಸ್ಟಾರ್ ಕೂಡ ಎಂಬುದನ್ನು ಕತ್ರಿನಾ ಕೈಫ್ ಇದೀಗ ದೃಢೀಕರಿಸಿದ್ದಾರೆ. 'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಲೂ ಹಾಗೂ ಕತ್ರಿನಾ ಜೋಡಿಯ ಕೆಮೆಸ್ಟ್ರಿ ಸಖತ್ ವರ್ಕೌಟ್ ಆಗಿದ್ದಷ್ಟೇ ಅಲ್ಲ, ಕತ್ರಿನಾ ತಮ್ಮ ಅಮೋಘ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದಾರೆ. ಹೀಗಾಗಿ ಈಗ ನಾಯಕಿ ಪ್ರಧಾನ ಚಿತ್ರದತ್ತ ತಮ್ಮ ದೃಷ್ಟಿ ಹೊರಳಿಸಲು ಸೂಕ್ತ ಸಮಯ ಅಂದುಕೊಂಡಿದ್ದಾರೆ.

ಕತ್ರಿನಾಗೆ ಸದ್ಯ ಪ್ರತಿಸ್ಫರ್ಧಿಗಳಾಗಿರುವ ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಈಗಾಗಲೇ ನಾಯಕಿ ಪ್ರಧಾನ ಚಿತ್ರಗಳಲ್ಲಿ ಮಿಂಚಿರುವ ಬಗ್ಗೆ ಪ್ರಶ್ನಿಸಿದರೆ, ಕತ್ರಿನಾ ಹೇಳುವುದು ಹೀಗೆ..."ಕರೀನಾ ಹಾಗೂ ಪ್ರಿಯಾಂಕಾ ನನಗಿಂತ ಸೀನಿಯರ್ಸ್. ಹೀಗಾಗಿ ಅವರು ವೃತ್ತಿಜೀವನದಲ್ಲಿ ನನಗಿಂತ ಸಾಕಷ್ಟು ಮೇಲೇರಿದ್ದಾರೆ. ನಾನೂ ಇನ್ನು ಮುಂದೆ ನಾಯಕಿ ಪ್ರಧಾನ ಪಾತ್ರದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ" ಎಂದಿದ್ದಾರೆ.

ಇಷ್ಟರವರೆಗೂ ಕೇವಲ ನಾಯಕ ಪ್ರಧಾನ ಚಿತ್ರಗಳಲ್ಲೇ ನಾಯಕಿಯಾಗಿ ಮಿಂಚಿರುವ ಕತ್ರಿನಾಗೆ ವಿದ್ಯಾ ಬಾಲನ್, ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ರೀತಿಯಲ್ಲೇ ತಾವೂ ಕೂಡ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸಬೇಕೆಂಬ ಆಸೆಯಂತೂ ಆಗಿದೆ. ಆದರೆ ಅದಕ್ಕೆ ಕಾಲ ಯಾವಾಗ ಕೂಡಿ ಬರಲಿದೆ ಎಂಬುದಷ್ಟೇ ಕಾದು ನೋಡಬೇಕಿರುವ ಸಂಗತಿ. ಆದಷ್ಟು ಬೇಗ ಆ ಸಮಯ ಬರಲಿ ಎಂಬುದು ಕತ್ರಿನಾ ಅಭಿಮಾನಿಗಳ ಹಾರೈಕೆ... (ಒನ್ ಇಂಡಿಯಾ ಕನ್ನಡ)

English summary
Ek Tha Tiger actress Katrina Kaif said that Kareena Kapoor, Priyanka Chopra are her seniors as they have done female oriented movies, unlike her.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada