»   » ಮಾಜಿ ಪ್ರೇಯಸಿಗೆ ಹೊಸ ಪ್ರಿಯತಮೆಯನ್ನ ಪರಿಚಯಿಸಿದ ನಟ

ಮಾಜಿ ಪ್ರೇಯಸಿಗೆ ಹೊಸ ಪ್ರಿಯತಮೆಯನ್ನ ಪರಿಚಯಿಸಿದ ನಟ

Posted By:
Subscribe to Filmibeat Kannada

ರಣ್ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಬಾಲಿವುಡ್ ನ ಮಾಜಿ ಪ್ರೇಮಿಗಳು. ಒಂದು ಕಾಲದಲ್ಲಿ ಒಬ್ಬರನ್ನ ಬಿಟ್ಟು ಮತ್ತೊಬ್ಬರ ಇರಲಾರದಷ್ಟು ಪ್ರೀತಿ. ಆದ್ರೆ, ಈಗ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದರು, ಕೇವಲ ಕಲಾವಿದರು ಎಂಬ ಭಾವನೆ.

ಹೌದು, ರಣ್ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಲವ್ ಬ್ರೇಕ್ ಅಪ್ ಆಗಿರುವುದು ಹಳೇ ವಿಚಾರ. ಆದ್ರೆ, ಹಳೆ ಲವರ್ ಗೆ ಹೊಸ ಪ್ರಿಯತಮೆಯನ್ನ ಪರಿಯಚಿಸಿದ್ದು ಈಗ ಬಾಲಿವುಡ್ ನ ಲೇಟೆಸ್ಟ್ ಸಮಾಚಾರ.

Katrina Kaif Met Ranbir Kapoor's New girlfriend

ರಣ್ಬೀರ್ ಮತ್ತು ಕತ್ರಿನಾ ಒಟ್ಟಿಗೆ ಅಭಿನಯಿಸುತ್ತಿರುವ 'ಜಗ್ಗ ಜಸೂಸ್' ಚಿತ್ರದ ಶೂಟಿಂಗ್ ಸೆಟ್ ಗೆ ರಣ್ಬೀರ್ ಕಪೂರ್ ಅವರ ಹೊಸ ಪ್ರೇಯಸಿ ಭೇಟಿ ಕೊಟ್ಟಿದ್ದರಂತೆ. ಈ ವೇಳೆ, ಸಹ ನಟಿ ಹಾಗೂ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಗೆ ರಣ್ಬೀರ್ ಕಪೂರ್ ತಮ್ಮ ಹೊಸ ಪ್ರಿಯತಮೆಯನ್ನ ಪರಿಚಯಿಸಿದ್ದಾರೆ. ಇದರಿಂದ ಕತ್ರಿನಾ ಕೈಫ್ ಬೇಸರಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ.

ಹಲವು ದಿನಗಳಿಂದ ಮುಂಬೈ ಮೂಲದ ಹುಡುಗಿಯೊಂದಿಗೆ ರಣ್ಬೀರ್ ಕಪೂರ್ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿತ್ತು. ಈಗ ಅದೇ ಹುಡುಗಿ 'ಜಗ್ಗ ಜಸೂಸ್' ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ್ದರಂತೆ. ಇನ್ನು ಶೂಟಿಂಗ್ ಬಿಡುವಿನಲ್ಲೂ ರಣ್ಬೀರ್ ಕಪೂರ್ ಆ ಹುಡುಗಿಯೊಂದಿಗೆ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದರಂತೆ. ಆದ್ರೆ, ಆ ಹುಡುಗಿ ಯಾರು ಎಂಬುದು ಮಾತ್ರ ಬಹಿರಂಗವಾಗಿಲ್ಲ.

Katrina Kaif Met Ranbir Kapoor's New girlfriend

ಇನ್ನು ಮತ್ತೊಂದೆಡೆ ವರ್ಷಗಳ ಕಾಲ ಪ್ರೀತಿಸಿ ದೂರವಾಗಿರುವ ರಣ್ಬೀರ್ ಮತ್ತು ಕತ್ರಿನಾ ಈಗ 'ಜಗ್ಗ ಜಸೂಸ್' ಚಿತ್ರದ ಬಿಡುಗಡೆಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜುಲೈ 14 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಅನುರಾಗ್ ಬಸು ನಿರ್ದೇಶನ ಮಾಡಿದ್ದು, ಸಿದ್ಧಾರ್ಥ ರೈ ಕಪೂರ್ ಜೊತೆ ರಣ್ಬೀರ್ ಕಪೂರ್ ಬಂಡವಾಳ ಹಾಕಿದ್ದಾರೆ.

English summary
Ranbir Kapoor introduced his pretty new girlfriend to his ex-lover Katrina Kaif during their film’s promotions recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada