For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗಿಂತ ಟಾಲಿವುಡ್ಡೇ ಲೇಸೆಂದ ಕತ್ರೀನಾ!

  By Harshitha
  |

  ಮಾಡೆಲಿಂಗ್ ಅನ್ನುವ ಮಾಯಾಲೋಕದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಕತ್ರೀನಾ, ಜಗತ್ತಿನಾದ್ಯಂತ ಸುದ್ದಿ ಮಾಡಿದ್ದು ಬಾಲಿವುಡ್ ಗೆ ಬಲಗಾಲಿಟ್ಟು ಬಂದ ಮೇಲೆ. ಸಲ್ಲು ಕೃಪೆಯಿಂದ ಬಾಲಿವುಡ್ ನಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಕತ್ರೀನಾಗೆ ಬಾಲಿವುಡ್ ಗಿಂತ ಟಾಲಿವುಡ್ಡೇ ಚಂದವಂತೆ!

  ತೆಲುಗು ಸಿನಿ ಅಂಗಳದಲ್ಲಿ ಕತ್ರೀನಾ ನಟಿಸಿರುವ ಚಿತ್ರಗಳು ಒಂದೋ..ಎರಡೋ...ಹೀಗಿದ್ದರೂ, ಟಾಲಿವುಡ್ ಬಗ್ಗೆ ಹಿಂದು ಮುಂದು ತಿಳಿದುಕೊಂಡಿರುವ ಕತ್ರೀನಾಗೆ ಬಾಲಿವುಡ್ ಹೀರೋಗಳಿಗಿಂತ ಟಾಲಿವುಡ್ ಹೀರೋಗಳೇ ಇಷ್ಟವಂತೆ.

  ಇದಕ್ಕೆ ಕಾರಣ ಏನು ಗೊತ್ತಾ? ಬಾಲಿವುಡ್ ನಲ್ಲಿರುವ ಕೆಲ ಹೀರೋಗಳಲ್ಲಿ ಶಿಸ್ತಿಲ್ಲ. ಮಧ್ಯರಾತ್ರಿ ವರೆಗೂ ಚೆನ್ನಾಗಿ ಪಾರ್ಟಿ ಮಾಡಿ, ಸೆಟ್ ಗೆ ಲೇಟಾಗಿ ಬರುವುದಲ್ಲದೇ, ಕೆಲ ನಾಯಕರು ಸ್ನಾನವನ್ನೇ ಮಾಡುವುದಿಲ್ಲವಂತೆ. ಅಂತ ಸಂದರ್ಭದಲ್ಲಿ ರೋಮ್ಯಾಂಟಿಕ್ ಸೀನ್ ಇದ್ದು ಬಿಟ್ಟರೆ, ಅದೇ ನರಕ ಅಂತ ಕತ್ರೀನಾ ಬಾಯಿಬಿಟ್ಟಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ನೀಟ್ನೆಸ್ ಮೇನ್ಟೇನ್ ಮಾಡದ ಹೀರೋಗಳ ಜೊತೆ ಆಕ್ಟ್ ಮಾಡುವಾಗ ಎಷ್ಟೋ ಬಾರಿ ಸೆಟ್ ನಲ್ಲಿ ಕತ್ರೀನಾ ವಾಂತಿ ಬೇರೆ ಮಾಡಿಕೊಂಡಿದ್ದಾರಂತೆ. ಇಂತ ಪರಿಸ್ಥಿತಿ ಕತ್ರೀನಾಗೆ ಟಾಲಿವುಡ್ ನಲ್ಲಿ ಎದುರಾಗಿಲ್ಲ. ''ಅಲ್ಲಿ, ಎಲ್ಲರಿಗೂ ಶಿಸ್ತಿದೆ. ಹೀರೋಗಳಿಗೆ ಸಮಯ ಪ್ರಜ್ಞೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕ್ಲೀನ್ ಆಗಿ ಬರುತ್ತಾರೆ. ಹೀಗಾಗಿ ಟಾಲಿವುಡ್ ಸಿನಿ ಅಂಗಳ ನನಗೆ ಅಚ್ಚುಮೆಚ್ಚು'', ಅಂತ ಕತ್ರೀನಾ ಹೇಳಿಕೆ ನೀಡಿದ್ದಾರೆ. [ಬಾಲಿವುಡ್ ಬೆಡಗಿಯರ ಸಂಭಾವನೆ ಪಟ್ಟಿ ಬಹಿರಂಗ]

  ಹೀಗಿದ್ದರೂ, ಟಾಲಿವುಡ್ ನಿಂದ ಬರುತ್ತಿರುವ ದೊಡ್ಡ ದೊಡ್ಡ ಆಫರ್ ಗಳಿಗೆ ಕತ್ರೀನಾ ಯಾಕೆ ಒಪ್ಪಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಬಹುಶಃ ಪೈಸಾ ಕಾರಣವಿರಬಹುದು! (ಏಜೆನ್ಸೀಸ್)

  English summary
  Katrina Kaif, who acted in both Tollywood and Bollywood, prefers Tollywood than Bollywood. The reason is,the unhygienic behavior of few Bollywood Heroes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X