»   » ಹಳೇ ಬಾಯ್ ಫ್ರೆಂಡ್ ಜೊತೆ ವ್ಯಾನಿಟಿ ವ್ಯಾನ್ ನಲ್ಲಿ ಕತ್ರಿನಾಗೇನು ಕೆಲಸ.?

ಹಳೇ ಬಾಯ್ ಫ್ರೆಂಡ್ ಜೊತೆ ವ್ಯಾನಿಟಿ ವ್ಯಾನ್ ನಲ್ಲಿ ಕತ್ರಿನಾಗೇನು ಕೆಲಸ.?

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೆ, ಬಾಲಿವುಡ್ ನ ದಂತದ ಗೊಂಬೆ ಕತ್ರಿನಾ ಕೈಫ್ ಗೆ ಸಲ್ಮಾನ್ ಖಾನ್ ಹಳೇ ಬಾಯ್ ಫ್ರೆಂಡ್ ಅರ್ಥಾತ್ ಮಾಜಿ ಪ್ರಿಯಕರ.

ಬ್ರೇಕಪ್ ಆದ್ಮೇಲೆ ಇಬ್ಬರೂ 'ಜಸ್ಟ್ ಫ್ರೆಂಡ್ಸ್' ಆಗಿ ಉಳಿದಿದ್ದಾರೆ ನಿಜ. ಆದ್ರೆ, ಕಳೆದ ಕೆಲ ದಿನಗಳಿಂದ ಕತ್ರಿನಾ ಹಾಗೂ ಸಲ್ಮಾನ್ ಖಾನ್ ನಡೆದುಕೊಳ್ಳುತ್ತಿರುವ ರೀತಿ ನೋಡಿದ್ರೆ, ಅವರಿಬ್ಬರ ಫ್ರೆಂಡ್ ಶಿಪ್ ಮತ್ತೊಮ್ಮೆ 'ಸ್ಪೆಷಲ್' ಆದ ಹಾಗೆ ಕಾಣುತ್ತಿದೆ.

Katrina Kaif Spends Time With Ex-Boyfriend Salman Khan Inside His VANITY VAN

ರಣ್ಬೀರ್ ಕಪೂರ್ ಮುಂದೆ ಕತ್ರಿನಾ ಕೈಫ್ ಕೆನ್ನೆಗೆ ಮುತ್ತಿಟ್ಟ ಸಲ್ಮಾನ್.!

ಮೊನ್ನೆಯಷ್ಟೇ, 'ಜಗ್ಗಾ ಜಾಸೂಸ್' ಚಿತ್ರದ ಪ್ರಮೋಷನ್ ಟೈಮ್ ನಲ್ಲಿ ರಣ್ಬೀರ್ ಕಣ್ಣೆದುರಿಗೆ ಕತ್ರಿನಾ ಕೆನ್ನೆಗೆ ಸಲ್ಮಾನ್ ಮುತ್ತಿಟ್ಟು ಸುದ್ದಿಯಾಗಿದ್ದರು. ಈಗ ಸಲ್ಮಾನ್ ಖಾನ್ ವ್ಯಾನಿಟಿ ವ್ಯಾನ್ ಒಳಗೆ ಗಂಟೆಗಟ್ಟಲೆ ಕಾಲ ಕಳೆದು ಕತ್ರಿನಾ ಕೈಫ್ ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಕಮರ್ಶಿಯಲ್ ಶೂಟಿಂಗ್ ಗಾಗಿ ಮುಂಬೈನ ಸ್ಟುಡಿಯೋ ಒಂದಕ್ಕೆ ಕತ್ರಿನಾ ಕೈಫ್ ಆಗಮಿಸಿದ್ದರು. ಅದೇ ಸ್ಟುಡಿಯೋದಲ್ಲಿ ಸಲ್ಮಾನ್ ಖಾನ್ ಕೂಡ ಇದ್ದಾರೆ ಎಂಬ ಸುದ್ದಿ ಕತ್ರಿನಾ ಕಿವಿಗೆ ಬಿದ್ದಿದೆ.

ಕೋಪಗೊಂಡ ಕತ್ರಿನಾ, ರಣ್ಬೀರ್ ಕಪೂರ್ ಗೆ ವಾರ್ನಿಂಗ್ ಕೊಟ್ರಂತೆ.!

ತಕ್ಷಣ ಸಲ್ಮಾನ್ ಖಾನ್ ರವರ ವ್ಯಾನಿಟಿ ವ್ಯಾನ್ ಕಡೆಗೆ ಓಡಿದ ಕತ್ರಿನಾ, ಸಲ್ಲು ಜೊತೆ ಗಂಟೆಗಟ್ಟಲೆ ಕಾಲ ಕಳೆದಿದ್ದಾರೆ. ಎಷ್ಟೊತ್ತಾದರೂ ವ್ಯಾನಿಟಿ ವ್ಯಾನ್ ನಿಂದ ಇಬ್ಬರೂ ಹೊರಗೆ ಬಾರದೇ ಇದ್ದದ್ದನ್ನ ನೋಡಿ, ಕಡೆಗೆ ಪ್ರೊಡಕ್ಷನ್ ಬಾಯ್ ಹೋಗಿ ಕದ ತಟ್ಟಿದ್ದಾನೆ. ಆಮೇಲೆ ಗಡಿಯಾರ ನೋಡಿಕೊಂಡ ಕತ್ರಿನಾ, ಚಿತ್ರೀಕರಣಕ್ಕೆ ಹಾಜರ್ ಆಗಿದ್ದಾರೆ. ಇದೇ ಈಗ ಬಿಟೌನ್ ಗಲ್ಲಿಗಲ್ಲಿಗಳಲ್ಲಿ ಗುಸುಗುಸು ಪಿಸುಪಿಸುಗೆ ಕಾರಣವಾಗಿದೆ.

English summary
Katrina Kaif Spends Time With Ex-Boyfriend Salman Khan Inside His VANITY VAN!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada