»   » ಮದುಮಗಳಾಗಿ ಕಂಗೊಳಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

ಮದುಮಗಳಾಗಿ ಕಂಗೊಳಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

Posted By:
Subscribe to Filmibeat Kannada

ಬಹುಭಾಷಾ ನಟಿ ಶ್ರಿಯಾ ಸರಣ್, ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ನಟಿ ಭಾವನಾ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ, ಸ್ಟೈಲ್ ಕ್ವೀನ್ ಸೋನಂ ಕಪೂರ್ ಕೂಡ ಸದ್ಯದಲ್ಲೇ ಹೊಸ ಜೀವನಕ್ಕೆ ನಾಂದಿ ಹಾಡಲಿದ್ದಾರೆ ಎಂಬ ಗುಸು ಗುಸು ಬಿಟೌನ್ ನಲ್ಲಿ ಕೇಳಿಬರುತ್ತಿದೆ.

ಈ ನಡುವೆ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಮಿಂಚಿದ್ದಾರೆ. ಹಾಗಾದ್ರೆ, ನಟಿ ಕತ್ರಿನಾಗೆ ಮದುವೆನಾ.? ಅಂತ ಹುಬ್ಬೇರಿಸಬೇಡಿ. ನಾವು ಹೇಳ್ತಿರೋರು ರೀಲ್ ಸುದ್ದಿ ಅಷ್ಟೇ.

'ಝೀರೋ' ಎಂಬ ಹಿಂದಿ ಸಿನಿಮಾದಲ್ಲಿ ನಟಿ ಕತ್ರಿನಾ ಕೈಫ್ ಅಭಿನಯಿಸುತ್ತಿದ್ದಾರೆ. ಆನಂದ್.ಎಲ್.ರೈ ಆಕ್ಷನ್ ಕಟ್ ಹೇಳುತ್ತಿರುವ 'ಝೀರೋ' ಚಿತ್ರದಲ್ಲಿ ಮದುಮಗಳಾಗಿ ನಟಿ ಕತ್ರಿನಾ ಕೈಫ್ ಕಾಣಿಸಿಕೊಂಡಿರುವ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇನ್ನು ಮುಂದೆ 'ಜೀರೋ'

Katrina Kaif turns a beautiful bride in Red

ಕೆಂಪು ಬಣ್ಣದ ಕಾಂಚೀವರಂ ಸೀರೆಯುಟ್ಟು, ಮೈ ತುಂಬಾ ಒಡವೆ ತೊಟ್ಟು ನಟಿ ಕತ್ರಿನಾ ಕೈಫ್ ಮಿರಿ ಮಿರಿ ಮಿಂಚಿದ್ದಾರೆ. ಅಲ್ಲಿಗೆ, 'ಝೀರೋ' ಚಿತ್ರದಲ್ಲಿ ಮದುವೆ ಸನ್ನಿವೇಶ ಇರುವುದು ಪಕ್ಕಾ.

ಅಷ್ಟಕ್ಕೂ, 'ಝೀರೋ' ಚಿತ್ರದಲ್ಲಿ ಕತ್ರಿನಾ ಕೈಫ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. 'ಝೀರೋ' ಚಿತ್ರದಲ್ಲಿ ಕತ್ರಿನಾ ಜೊತೆಗೆ ಶಾರೂಖ್ ಖಾನ್, ಅನುಷ್ಕಾ ಶರ್ಮಾ ಹಾಗೂ ಅಭಯ್ ಡಿಯೋಲ್ ಕೂಡ ಇದ್ದಾರೆ.

ಅಂದ್ಹಾಗೆ, ಮದುಮಗಳ ಲುಕ್ ನಲ್ಲಿ ಕತ್ರಿನಾ ಹೇಗೆ ಕಾಣ್ತಿದ್ದಾರೆ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ...

English summary
Bollywood Actress Katrina Kaif turns a beautiful bride in Red for Hindi Film 'Zero', directed by Aanand.L.Rai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X