»   » ರಣಬೀರ್ ಜೊತೆಗಿನ ಬ್ರೇಕಪ್‌ಗೆ ಕಾರಣವೇನು? ಕತ್ರಿನಾ ಹೇಳಿದ್ದು ಹೀಗೆ..

ರಣಬೀರ್ ಜೊತೆಗಿನ ಬ್ರೇಕಪ್‌ಗೆ ಕಾರಣವೇನು? ಕತ್ರಿನಾ ಹೇಳಿದ್ದು ಹೀಗೆ..

Posted By:
Subscribe to Filmibeat Kannada

ನಟ ರಣಬೀರ್ ಕಪೂರ್ ರವರು ದೀಪಿಕಾ ಪಡುಕೋಣೆಯ ಮಾಜಿ ಫ್ರೆಂಡ್ ಎಂಬುದು ತುಂಬಾ ಹಳೇ ವಿಷಯ. ಅವರ ಬ್ರೇಕಪ್ ಗೂ ಡಿಪ್ಪಿ ಒಮ್ಮೆ ಸಂದರ್ಶನದಲ್ಲಿ ಪರೋಕ್ಷವಾಗಿ ತಮ್ಮ ಪಾಟ್ನರ್ ಮೋಸ ಮಾಡಿದರು ಎಂದು ಹೇಳಿದ್ದರು. ಅದು ಯಾರ ಕುರಿತು ಎಂದು ನಿಮಗೆಲ್ಲಾ ತಿಳಿದಿದ್ದೇ.

ಅಂದಹಾಗೆ ದೀಪಿಕಾ ರೀತಿ ಕತ್ರಿನಾ ಕೈಫ್ ಗೂ ರಣಬೀರ್ ಕಪೂರ್ ಮಾಜಿ ಬಾಯ್ ಫ್ರೆಂಡ್. ಈ ಹಿಂದೆ ದೀಪಿಕಾಗೆ ಬ್ರೇಕಪ್ ಗೆ ಕಾರಣವೇನು ಎಂದು ಕೇಳಿದಂತೆಯೇ ಇತ್ತೀಚೆಗೆ ಸೇಮ್ ಪ್ರಶ್ನೆಯನ್ನು ಕತ್ರಿನಾ ಕೈಫ್ ಗೆ ಕೇಳಲಾಗಿತ್ತು. ಅದಕ್ಕೆ ಕ್ಯಾಟ್ ಯಾರು ನಿರೀಕ್ಷಿಸದ ರೀಪ್ಲೇ ನೀಡಿದ್ದಾರೆ. ಅದೇನು ತಿಳಿಯಲು ಮುಂದೆ ಓದಿರಿ...

ಕತ್ರಿನಾ ಹೇಳಿದ್ದು..

'ಇಬ್ಬರ ನಡುವೆ ಏನಿದೆ, ಅದನ್ನು ಮ್ಯಾಜಿಕಲ್ ಸ್ಕಿಲ್ ಇರುವ ಯಾರೋ ಒಬ್ಬರು ಮಾತ್ರ ಅರ್ಥ ಮಾಡಿಕೊಂಡಿರುತ್ತಾರೆ' ಎಂದು ಕತ್ರಿನಾ ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ಕುರಿತು ಹೇಳಿದ್ದಾರೆ.

ಆ ವಿಷಯ ತಿಳಿಯುವುದಿಲ್ಲ

'ನನ್ನ ಬಿಟ್ಟು ಯಾರಿಗೂ ಸಹ ಬ್ರೇಕಪ್ ಗೆ ಕಾರಣವೇನು ಎಂದು ತಿಳಿಯುವುದಿಲ್ಲ. ಯಾರು ತಿಳಿಯಲು ಆಗುವುದಿಲ್ಲ. ಅದು ನನ್ನ ಕನ್ಸರ್ನ್ ಸಹ' ಎಂದಿದ್ದಾರೆ ಕತ್ರಿನಾ ಕೈಫ್.

ಉತ್ತಮವಾಗಿ ಸ್ಕ್ರೀನ್ ಶೇರ್ ಮಾಡಿದ್ದೇವೆ

'ಜಗ್ಗಾ ಜಸೂಸ್' ಚಿತ್ರದಲ್ಲಿ ರಣಬೀರ್ ಜೊತೆ ತೆರೆ ಹಂಚಿಕೊಂಡ ಬಗ್ಗೆ, 'ವೃತ್ತಿಪರ ವಿಷಯದಲ್ಲಿ ಇಬ್ಬರು ಸಹ ಸಿನಿಮಾಗೆ ಸಮನಾಗಿ ಸಪೋರ್ಟ್ ಮಾಡುತ್ತಿದ್ದೇವೆ. ಇಂದಿಗೂ ಸಹ ಆಕ್ಟರ್ ಆಗಿ ಉತ್ತಮವಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇವೆ' -ಕತ್ರಿನಾ ಕೈಫ್

ನಮ್ಮ ಎನರ್ಜಿ ಯಾವಾಗಲೂ ಉತ್ತಮವಾಗಿರುತ್ತದೆ..

ಬ್ರೇಕಪ್ ಗೆ ನಿಜವಾದ ಕಾರಣ ಏನು ಎಂದು ತಿಳಿಸದ ಕತ್ರಿನಾ ಕೈಫ್, 'ನಾವಿಬ್ಬರು ಇದುವರೆಗೂ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಉತ್ತಮವಾಗಿ ಎಫರ್ಟ್‌ ಹಾಕಿದ್ದೇವೆ. ಅಂತೆಯೇ ಈಗ 'ಜಗ್ಗಾ ಜಸೂಸ್' ಚಿತ್ರದಲ್ಲೂ ನಮ್ಮ ಜೋಡಿಯ ಮೋಡಿಯನ್ನು ರೀಕ್ರಿಯೇಟ್ ಮಾಡಲಿದ್ದೇವೆ ಎಂಬ ಭರವಸೆ ಇದೆ. ರಣಬೀರ್ ಸಿನಿಮಾ ಪ್ಯಾಷನ್ ಮತ್ತು ಡೆಡಿಕೇಷನ್ ಬಗ್ಗೆ ಖುಷಿ ಆಗುತ್ತದೆ' ಎಂದಿದ್ದಾರೆ.

'ಜಗ್ಗಾ ಜಸೂಸ್' ಬಿಡುಗಡೆ ಯಾವಾಗ?

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಇಬ್ಬರು ನಟಿಸಿರುವ 'ಜಗ್ಗಾ ಜಸೂಸ್' ಸಿನಿಮಾ ಜುಲೈ 14 ರಂದು ಬಿಡುಗಡೆ ಆಗಲಿದೆ.

English summary
The Reason Behind Katrina Kaif and Ranbir Kapoor Break-Up!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada