ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಗೆಳತಿ ಕತ್ರೀನಾ ಕೈಫ್ ವಿಶ್ ಮಾಡಿದ್ದು ಹೀಗೆ
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಗೆ ಅಪಾರ ಸಂಖ್ಯೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿ ಪ್ರೀತಿಯ ಸಂದೇಶ ರವಾನಿಸುತ್ತಿದ್ದಾರೆ. ಬಾಲಿವುಡ್ ಸಿನಿಮಾ ಗಣ್ಯರು ಮಾತ್ರವಲ್ಲದೆ, ದಕ್ಷಿಣ ಭಾರತೀಯ ಸಿನಿಮಾರಂಗದ ಗಣ್ಯರು ಸಹ ಪ್ರೀತಿಯ ವಿಶ್ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ನಟಿ ಮತ್ತು ಸಲ್ಮಾನ್ ಖಾನ್ ಮಾಜಿ ಪ್ರಿಯತಮೆ ಎಂದೆ ಕರೆಸಿಕೊಳ್ಳುವ ಕತ್ರಿನಾ ಕೈಫ್ ಬ್ಯಾಡ್ ಬಾಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಕತ್ರಿನಾ 'ಗ್ರೇಟ್ ಹ್ಯೂಮನ್ ಸಲ್ಮಾನ್ ಖಾನ್ ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಅವರ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಪನ್ವೆಲ್ ತೋಟದ ಮನೆಯ್ಲಲಿ ಕ್ಲಿಕ್ ಮಾಡಿದ ಫೋಟೋವನ್ನು ಶೇರ್ ಮಾಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಈ ವದಂತಿ ನಡುವೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಇಬ್ಬರು ಬೇರೆ ಬೇರೆ ಆಗಿದ್ದರು. ಬಳಿಕ ಮತ್ತೆ ಒಂದಾಗಿರುವ ಈ ಜೋಡಿ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ಪಾರ್ಟನರ್, ಯುವರಾಜ್, ಭಾರತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬಾಲಿವುಡ್ ನ ಹಿಟ್ ಜೋಡಿಗಳಲ್ಲಿ ಸಲ್ಮಾನ್ ಮತ್ತು ಕತ್ರಿನಾ ಜೋಡಿ ಕೂಡ ಒಂದು. ಕತ್ರಿನಾ ಕೈಫ್ ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಮತ್ತು ಫೋನ್ ಬೂತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











