For Quick Alerts
  ALLOW NOTIFICATIONS  
  For Daily Alerts

  ಆ ವಿಡಿಯೋ ಡಿಲೀಟ್ ಮಾಡುವಂತೆ ಹೈಕೋರ್ಟ್‌ ಮೊರೆ ಹೋದ ಸಲ್ಲು!

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಅಭ್ಯಂತರವಾದ ಆರೋಪಗಳನ್ನು ಮಾಡಿರುವ ಕೇತನ್ ಕಕ್ಕಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಟಿಷನ್ ದಾಖಲಿಸಿದ್ದಾರೆ. ಕೇತನ್ ಮಾಡಿರುವ ಕೋಮು ಪ್ರಚೋದಕ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.

  ಸಲ್ಲು ಈ ಹಿಂದೆ ಕೂಡ ಕೇತನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಫಾರ್ಮ್‌ಹೌಸ್‌ನ ನೆರೆಮನೆಯವರ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಅಂದಿನಿಂದಲೂ ಕೇತನ್ ಕಕ್ಕಡ್ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟನ ವಿರುದ್ಧ ನಾನಾ ರೀತಿಯಲ್ಲಿ ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಯೂಟ್ಯೂಬ್ ಸಂದರ್ಶನಗಳಲ್ಲಿ ಇಲ್ಲ ಸಲ್ಲದನ್ನೆಲ್ಲಾ ಹೇಳುತ್ತಿದ್ದಾರೆ ಎನ್ನುವುದು ಸಲ್ಮಾನ್ ಖಾನ್ ಆರೋಪ.

  ಪ್ರಾಣ ಬೆದರಿಕೆ ಹಿನ್ನೆಲೆ ಬುಲೆಟ್‌ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಕಾರಿನ ವಿಶೇಷತೆ ಏನು?ಪ್ರಾಣ ಬೆದರಿಕೆ ಹಿನ್ನೆಲೆ ಬುಲೆಟ್‌ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಕಾರಿನ ವಿಶೇಷತೆ ಏನು?

  ಕೇತನ್ ಕಕ್ಕಡ್ ನಿರಂತರವಾಗಿ ಸಲ್ಮಾನ್‌ ಖಾನ್‌ನ ಟಾರ್ಗೆಟ್ ಮಾಡುತ್ತಿದ್ದಾರೆಂದು 7 ತಿಂಗಳ ಹಿಂದೆ ಸಲ್ಮಾನ್ ಪರ ವಕೀಲರು ಹೇಳಿದ್ದರು. ಕೇತನ್, ಸಲ್ಮಾನ್ ಖಾನ್ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಮಕ್ಕಳ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ನಟರನ್ನು ಸಮಾಧಿ ಮಾಡಿದ್ದಾರೆ ಎಂದೆಲ್ಲ ಆರೋಪ ಮಾಡಿದ್ದಾರೆ, ಇದೆಲ್ಲ ಸುಳ್ಳು ಎಂದು ತಿಳಿಸಿದ್ದರು. ಈಗ ಮತ್ತೊಮ್ಮೆ ಇದೇ ರೀತಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

  ವಿಡಿಯೋ ಡಿಲೀಟ್ ಮಾಡಲು ಮನವಿ

  ವಿಡಿಯೋ ಡಿಲೀಟ್ ಮಾಡಲು ಮನವಿ

  ಕೇತನ್ ಕಕ್ಕಡ್ ಮತ್ತೊಂದು ವಿಡಿಯೋ ಮಾಡಿ ಸಲ್ಮಾನ್ ಖಾನ್ ವಿರುದ್ಧ ಆರೋಪ ಮಾಡಿದ್ದಾರೆ. ಪನ್ವೆಲ್‌ನಲ್ಲಿರೋ ಗಣೇಶನ ದೇವಸ್ಥಾನ ಕಬಳಿಸಲು ಸಲ್ಲು ಪ್ರಯತ್ನಿಸುತ್ತಿದ್ದಾರೆಂದು ಆತನನ್ನು ಬಾಬರ್, ಔರಂಗಜೇಬ್‌ಗೆ ಹೋಲಿಸಿ ಯೂಟ್ಯೂಬ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೇತನ್, ಸಲ್ಮಾನ್‌ ಖಾನ್ ಬಗ್ಗೆ ಮಾತನಾಡಿರುವ ಮಾತುಗಳು ಹಿಂದೂ - ಮುಸ್ಲಿಂ ನಡುವೆ ಸಂಘರ್ಷಕ್ಕೆ ಅನುವು ಮಾಡಿಕೊಡುವಂತಿರುವುದರಿಂದ ಸಿವಿಲ್ ಕೋರ್ಟ್‌ನಲ್ಲಿ ಪಿಟಿಷನ್ ದಾಖಲಿಸಿದ್ದಾರೆ. ಇದಕ್ಕೆ ಸಿವಿಲ್ ಕೋರ್ಟ್ ಅನುಮತಿಸದೇ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

  ಸಲ್ಲು ಪರ ವಕೀಲರು ಹೇಳಿದ್ದೇನು?

  ಸಲ್ಲು ಪರ ವಕೀಲರು ಹೇಳಿದ್ದೇನು?

  "ಕೇತನ್ ಹೇಳುತ್ತಿರುವುದೆಲ್ಲ ಅವಾಸ್ತವ. ಇದರಿಂದ ಸಲ್ಮಾನ್ ಖಾನ್ ಗೌರವಕ್ಕೆ ಧಕ್ಕೆಯಾಗುತ್ತಿದೆ. ಅಷ್ಟೆ ಅಲ್ಲದೇ ಸಲ್ಮಾನ್ ಖಾನ್ ಫಾರ್ಮ್ ಹೌಸ್‌ನಲ್ಲಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದರಿಂದ ಸಲ್ಲು ಅಭಿಮಾನಿಗಳಿಗೆ ನೆಚ್ಚಿನ ನಟನ ಬಗ್ಗೆ ನಂಬಿಕೆ ಹೋಗುತ್ತದೆ. ಕೂಡಲೇ ವಿಡಿಯೋ ಡಿಲೀಟ್ ಮಾಡಲು ಅನುಮತಿ ನೀಡಬೇಕು" ಮನವಿ ಮಾಡಿದ್ದಾರೆ.

  ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್

  ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್

  ಫರ್ಹಾದ್ ಸಮ್ಜಿ ನಿರ್ದೇಶನದ 'ಕಭೀ ಈದ್ ಕಭೀ ದಿವಾಳಿ' ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದು, ರವಿ ಬಸ್ರೂರು ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಹೊಸ ವರ್ಷದ ಸಂಭ್ರಮದಲ್ಲಿ ಡಿಸೆಂಬರ್‌ 30ಕ್ಕೆ ಸಿನಿಮಾ ರಿಲೀಸ್ ಮಾಡುವ ತಯಾರಿ ನಡೀತಿದೆ. ಮತ್ತೊಂದ್ಕಡೆ ತೆಲುಗಿನ 'ಗಾಡ್‌ ಫಾದರ್' ಚಿತ್ರದಲ್ಲೂ ಸಲ್ಲು ಮಿಂಚಿದ್ದಾರೆ. 'ಲೂಸಿಫರ್' ರೀಮೇಕ್ ಆಗಿರುವ ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ತೆರೆ ಹಂಚಿಕೊಂಡಿದ್ದಾರೆ.

  ಸಲ್ಮಾನ್‌ ಖಾನ್‌ಗೆ ಗನ್ ಲೈಸೆನ್ಸ್

  ಸಲ್ಮಾನ್‌ ಖಾನ್‌ಗೆ ಗನ್ ಲೈಸೆನ್ಸ್

  ನಟ ಸಲ್ಮಾನ್​ ಖಾನ್​ ಅವರು ಆತ್ಮ ರಕ್ಷಣೆಗಾಗಿ ಗನ್​ ಇಟ್ಟುಕೊಳ್ಳಲು ಇತ್ತೀಚೆಗೆ ಲೈಸೆನ್ಸ್ ​ ಪಡೆದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೆ ಮತ್ತು ಅವರ ತಂದೆ ಸಲೀಮ್​ ಖಾನ್​ಗೆ ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಲ್ಲು ಪೊಲೀಸ್​ ಠಾಣೆ ಮೆಟ್ಟಿಲು ಏರಿದ್ದರು. ಪ್ರಕರಣವನ್ನು ಪರಿಶೀಲಿಸಿದ ನಂತರ ಅವರಿಗೆ ವಿಶೇಷ ಪರವಾನಗಿ ನೀಡಲಾಗಿತ್ತು. ಗೃಹ ಇಲಾಖೆ ಸಲ್ಲುಗೆ ಭದ್ರತೆ ಹೆಚ್ಚಿಸಿದೆ. ಇನ್ನು ಶೂಟಿಂಗ್‌ಗೆ ಹೋಗುವುದು ಅನಿವಾರ್ಯ ಆಗಿರುವುದರಿಂದ ಬುಲೆಟ್ ಪ್ರೂಫ್ ಕಾರು ಸಲ್ಮಾನ್ ಖಾನ್ ಖರೀದಿಸಿದ್ದಾರಂತೆ.

  English summary
  Ketan Kakkad social Media Posts Communally Provocative Salman Khan Tells Bombay HC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X