twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!

    |

    ಸಿನಿಮಾ ಗೆಲ್ಲುವುದಕ್ಕೆ ಒಳ್ಳೆಯ ಕಥೆ ಬೇಕು ಅನ್ನೋದು ಎಲ್ಲರ ವಾದ. ಮತ್ತೆ ಕೆಲವರು ಕಥೆ ಜೊತೆಗೆ ಒಳ್ಳೆ ಅದೃಷ್ಟನೂ ಬೇಕು ಅಂತಾರೆ. ಇದೆಲ್ಲವೂ ಸರಿನೇ. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗುವುದಕ್ಕೆ ತಂತ್ರಗಾರಿಕೆನೂ ಅಷ್ಟೇ ಮುಖ್ಯ.

    'ಕಾಂತಾರ' ಸಿನಿಮಾ ಗೆಲ್ಲಲು ಬಾಲಿವುಡ್‌ ವಿತರಕ ಬಳಿಸಿದ ತಂತ್ರ ವರ್ಕ್‌ಔಟ್ ಆಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಗೊತ್ತು. ಅದೇ ಬಾಲಿವುಡ್‌ ಮಂದಿಗೆ ರಿಷಬ್ ಹೊಸಬರು. ಅಲ್ಲದೆ ಹಳ್ಳಿ ಸೊಗಡಿನ ಕಥೆಯಾಗಿದ್ದರಿಂದ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ನೋಡುತ್ತಾರಾ? ಅನ್ನೋ ಅನುಮಾನವಂತೂ ಇದ್ದೇ ಇತ್ತು.

    ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?

    ಕರ್ನಾಟಕದಲ್ಲಿ ಬ್ಲಾಕ್‌ ಬಸ್ಟರ್ ಹಿಟ್ ಆಗಿದ್ದ 'ಕಾಂತಾರ' ಬಾಲಿವುಡ್‌ನಲ್ಲಿ ಯಶಸ್ಸು ಕಾಣಬೇಕೆಂದಿರಲಿಲ್ಲ. ಆದರೆ, ಇಲ್ಲಿ ಬಾಲಿವುಡ್ ವಿತರಕನ ತಂತ್ರಗಾರಿಕೆ ವರ್ಕ್‌ಔಟ್ ಆಗಿತ್ತು. ಅದಕ್ಕೆ ಬಾಲಿವುಡ್‌ನಲ್ಲಿ ಸಿನಿಮಾ ಕಲೆಕ್ಷನ್ ಅದ್ಭುತವಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಅಸಲಿಗೆ ಬಾಲಿವುಡ್ ಡಿಸ್ಟ್ರಿಬ್ಯೂಟರ್ 'ಕಾಂತಾರ' ಗೆಲ್ಲಿಸಿದ್ದು ಹೇಗೆ? ತಿಳಿಯಲು ಮುಂದೆ ಓದಿ.

    'ಕಾಂತಾರ' ವಿತರಣೆ ಮಾಡಿದ್ಯಾರು?

    'ಕಾಂತಾರ' ವಿತರಣೆ ಮಾಡಿದ್ಯಾರು?

    'ಕೆಜಿಎಫ್ 2' ಬಿಡುಗಡೆ ಬಳಿಕ ಹಿಂದಿ ಬೆಲ್ಟ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಬೆಲೆ ಸಿಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದ್ದರೆ, ಹಿಂದಿ ಬೆಲ್ಟ್‌ನಲ್ಲಿರೋ ಪ್ರೇಕ್ಷಕರು ಅಲರ್ಟ್ ಆಗುವಷ್ಟು ಸ್ಯಾಂಡಲ್‌ವುಡ್‌ಗೆ ಗುರುತು ಸಿಕ್ಕಿದೆ. ಹಾಗೇ ಹೊಂಬಾಳೆ ಫಿಲ್ಮ್ಸ್‌ 'ಕಾಂತಾರ' ನಿರ್ಮಾಣ ಮಾಡಿದ್ದರಿಂದ ಬಾಲಿವುಡ್‌ನಲ್ಲಿ ರಿಲೀಸ್ ಮಾಡೋದು ಹೆಚ್ಚೇನು ಕಷ್ಟ ಆಗಿರಲಿಲ್ಲ. 'ಕೆಜಿಎಫ್ 2' ಅನ್ನು ಹಿಂದಿಯಲ್ಲಿ ವಿತರಿಸಿದ್ದ ಅನಿಲ್ ತಡಾನಿನೇ 'ಕಾಂತಾರ'ವನ್ನು ವಿತರಣೆ ಮಾಡಿದ್ದಾರೆ. 'ಕೆಜಿಎಫ್' ಸಿನಿಮಾದಂತೆ ಇದೂ ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

    'ಪುಷ್ಪ' ತಂತ್ರ ಬಳಸಿದ್ರಾ ಅನಿಲ್ ತಡಾನಿ?

    'ಪುಷ್ಪ' ತಂತ್ರ ಬಳಸಿದ್ರಾ ಅನಿಲ್ ತಡಾನಿ?

    'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಮಾಯಿಯನ್ನೇ ಮಾಡುತ್ತಿದೆ. ಬಾಲಿವುಡ್‌ನಲ್ಲೂ ಈ ಸಿನಿಮಾ ಸಕ್ಸಸ್ ಕಂಡಿದೆ. ಆದರೆ, ಈ ಯಶಸ್ಸಿನ ಬಾಲಿವುಡ್‌ ವಿತರಕರ ಅನಿಲ್ ತಡಾನಿಯ ಚಾಣಾಕ್ಷತನವಿದೆ ಎಂದು ಬಾಲಿವುಡ್‌ನಲ್ಲಿ ಟಾಕ್. ಅನಿಲ್ ತಡಾನಿ 'ಕೆಜಿಎಫ್ 2' ಸಿನಿಮಾಗೂ ಮುನ್ನ 'ಪುಷ್ಪ' ಸಿನಿಮಾವನ್ನು ಗೋಲ್ಡ್‌ಮೈನ್ಸ್‌ ಟೆಲಿಫಿಲ್ಮ್ಸ್ ಜೊತೆ ಸೇರಿ ರಿಲೀಸ್ ಮಾಡಿದ್ದರು. ಹಿಂದಿ ಬೆಲ್ಟ್‌ನಲ್ಲಿಯೇ ಈ ಸಿನಿಮಾ ಸುಮಾರು 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. 'ಪುಷ್ಪ' ಸಿನಿಮಾವನ್ನು ಹೇಗೆ ಗೆಲ್ಲಿಸಿದ್ದರೋ ಹಾಗೇ 'ಕಾಂತಾರ'ವನ್ನೂ ಗೆಲ್ಲಿಸಿದ್ದಾರೆ ಅನ್ನೋದು ಬಾಲಿವುಡ್ ಮಂದಿ ವಾದ.

    'ಪುಷ್ಪ' ತಂತ್ರಗಾರಿಕೆ ಏನು?

    'ಪುಷ್ಪ' ತಂತ್ರಗಾರಿಕೆ ಏನು?

    'ಪುಷ್ಪ' ಸಿನಿಮಾವನ್ನು ಬಾಲಿವುಡ್‌ನಲ್ಲಿ ರಿಲೀಸ್ ಮಾಡಿದಾಗ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದ್ದರು. ಹೀಗಾಗಿ ಜನರು ಥಿಯೇಟರ್‌ಗೆ ನುಗ್ಗಿದ್ದರು. 'ಕಾಂತಾರ'ಗೂ ಕೂಡ ಇದೇ ಸ್ಟ್ರಾಟಜಿಯನ್ನು ಬಳಸಿದ್ದರು ಅನ್ನೋದು ಬಾಲಿವುಡ್‌ ವಲಯದಲ್ಲಿ ಕೇಳಿಬರುತ್ತಿದೆ. ಸಿನಿಮಾ ತೆರೆಕಂಡಾಗ ಟಿಕೆಟ್ ಬೆಲೆ 112 ರೂಪಾಯಿಗೆ ಇಳಿಸಿದ್ದರು. ಇದು ಹಿಂದಿ ಬೆಲ್ಟ್‌ಗಳಲ್ಲಿ ಅದ್ಭುತವಾಗಿ ವರ್ಕ್‌ಔಟ್ ಆಗಿದೆ ಎಂದು ವರದಿಯಾಗಿದೆ. 'ಪುಷ್ಪ' ರಿಲೀಸ್ ವೇಳೆನೂ ಇದೇ ಸ್ಟ್ರಾಟಜಿಯನ್ನು ಬಳಸಿದ್ದರು. ಈಗ ವಿತರಕರ ಒತ್ತಾಯದ ಮೇರೆಗೆ 'ಕಾಂತಾರ' ಟಿಕೆಟ್ ದರವನ್ನು ಕೊಂಚ ಮಟ್ಟಿಗೆ ಏರಿಕೆ ಮಾಡಲಾಗಿದೆ.

    'ಕಾಂತಾರ' ಕಲೆಕ್ಷನ್ ಎಷ್ಟು?

    'ಕಾಂತಾರ' ಕಲೆಕ್ಷನ್ ಎಷ್ಟು?

    10 ದಿನಗಳಲ್ಲಿ 'ಕಾಂತಾರ' ಕಲೆಕ್ಷನ್ ಹಿಂದಿ ಬೆಲ್ಟ್‌ನಲ್ಲಿ ಸಖತ್ತಾಗಿದೆ. ಇದೂವರೆಗೂ ಬಾಕ್ಸಾಫೀಸ್‌ನಲ್ಲಿ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ಟಾರ್ಗೆಟ್ 30 ಕೋಟಿ. ಸದ್ಯ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಕಲೆಕ್ಷನ್ ಸೂಪರ್ ಆಗಿದ್ದು, ಹಬ್ಬದಂದು ಬೇಜಾನ್ ಸದ್ದು ಮಾಡುತ್ತಿದೆ. ಹೊಸ ಸಿನಿಮಾಗಳ ಆರ್ಭಟ ಮಧ್ಯೆಯೂ 'ಕಾಂತಾರ' ಖದರ್ ಜೋರಾಗಿದೆ.

    English summary
    KGF 2 Hindi Distributor Adopts Pushpa Strategy For Kantara Hindi Release, Know More.
    Tuesday, October 25, 2022, 20:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X