India
  For Quick Alerts
  ALLOW NOTIFICATIONS  
  For Daily Alerts

  KGF 2: ನಾಯಕ ಯಶ್, ಅಧೀರ ಸಂಜಯ್ ದತ್ ಸಂಭಾವನೆ ಸೀಕ್ರೆಟ್ ಇಲ್ಲಿದೆ!

  |

  ಮುಂಬರುವ ಭಾರತೀಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಕನ್ನಡದ ಕೆಜಿಎಫ್2 ಚಿತ್ರ ಮುಂಚೂಣಿಯಲ್ಲಿದೆ. ಕೆಜಿಎಫ್ 2ಗಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿದೆ. ಈಗ ಚಿತ್ರದ ಬಗ್ಗೆ ವಿಶೇಷ ಸಂಗತಿಯೊಂದು ಹೊರ ಬಿದ್ದಿದೆ.

  ಕೆಜಿಎಫ್2 ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾ. ಅದರಲ್ಲೂ ಕೆಜಿಎಫ್ ಮೊದಲ ಭಾಗ ಎರಡನೇ ಭಾಗದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ. ಹಾಗಾಗಿ ಯಾವುದೇ ಕಾಂಪ್ರಮೈಸ್‌ ಮಾಡಿಕೊಳ್ಳದೆ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದ ಬಜೆಟ್ ಜೊತೆಗೆ ಪಾತ್ರಧಾರಿಗಳ ಸಂಭಾವನೆ ವಿಚಾರ ಕೂಡ ಈಗ ಹೆಚ್ಚು ಕುತೂಹಲ ಮೂಡಿಸುತ್ತಿದೆ.

  ಕೆಜಿಎಫ್ ಸಿನಿಮಾದಲ್ಲಿ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ಪ್ರತೀ ಪಾತ್ರಕ್ಕೂ ನಿರ್ದೇಶಕ ಪ್ರಶಾಂತ್‌ ನೀಲ್ ಕಲಾವಿದರನ್ನು ಅಳೆದು, ತೂಗಿ ಆಯ್ಕೆ ಮಾಡಿದ್ದಾರೆ. ಭಾಗ ಒಂದರಲ್ಲಿ ಇರುವ ಅಷ್ಟೂ ಪಾತ್ರಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗೆ ಭಾಗ ಎರಡರಲ್ಲೂ ಕೂಡ ಎಲ್ಲಾ ಪಾತ್ರಗಳಿಗೂ ಅಷ್ಟೇ ಮಹತ್ವ ನೀಡಲಾಗಿದೆ. ಇದೆ. ಅದರಲ್ಲಿ ಕೆಲವು ಪ್ರಮುಖ ಪಾತ್ರಗಳ ಸಂಭಾವನೆ ವಿವರ ಇಲ್ಲಿದೆ. ಮುಂದೆ ಓದಿ...

  ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಸಂಭಾವನೆ ಕೋಟಿ, ಕೋಟಿ!

  ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಸಂಭಾವನೆ ಕೋಟಿ, ಕೋಟಿ!

  ಕೆಜಿಎಫ್2 ಚಿತ್ರದಲ್ಲಿ ಯಾರ ಯಾರ ಸಂಭಾವನೆ ಎಷ್ಟು ಎಂದು ಹೇಳುವ ಮುನ್ನ, ಈ ಚಿತ್ರದಲ್ಲಿ ಯಾರೆಲ್ಲಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಎಂಬುದನ್ನು ನೋಡುವುದಾದರೆ ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ ಜೊತೆಗೆ, ರವೀನಾ ಟಂಡನ್, ಸಂಯಜ್ ದತ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಹಲವು ಪಾತ್ರಗಳು ಕೆಜಿಎಫ್ ಭಾಗ ಎರಡರಲ್ಲೂ ಕಾಣಿಸುತ್ತವೆ.

  ಯಶ್ ಪಡೆದ ಸಂಭಾವನೆ 25 ಕೋಟಿಗೂ ಹೆಚ್ಚು!

  ಯಶ್ ಪಡೆದ ಸಂಭಾವನೆ 25 ಕೋಟಿಗೂ ಹೆಚ್ಚು!

  kgf2 ಚಿತ್ರದ ನಾಯಕ ಯಶ್. ರಾಕಿಂಗ್ ಸ್ಟಾರ್‌ ಯಶ್ ಇಂದು ನ್ಯಾಷನಲ್‌ ಸ್ಟಾರ್‌ ಎಂದು ಕರೆಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಆಗಿರುವುದೇ ಕೆಜಿಎಫ್. ಕೆಜಿಎಫ್ ಭಾಗ ಒಂದರ ಅದ್ದೂರಿ ಯಶಸ್ಸು, ಯಶ್ ಅವರ ಸಂಭಾವನೆ, ಬೇಡಿಕೆ, ಮಾರ್ಕೆಟಿಂಗ್ ಹೆಚ್ಚಿಸಿದೆ. ಹಾಗಾಗಿ ಯಶ್ ಕೆಜಿಎಫ್ 2 ಚಿತ್ರದಲ್ಲಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದಕ್ಕೂ ವರದಿ ಒಂದು ಉತ್ತರ ನೀಡಿದೆ. ಮೂಲಗಳ ಪ್ರಕಾರ ಯಶ್ ಅವರು kgf 2 ಚಿತ್ರಕ್ಕಾಗಿ 25 ರಿಂದ 27 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಕನ್ನಡದ ನಟನೊಬ್ಬ ಇಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ಉತ್ತಮ ಬೆಳವಣಿಗೆಗೆ ನಿದರ್ಶನ.

  ಶ್ರೀನಿಧಿ ಶೆಟ್ಟಿ ಪಡೆದರು ಅತಿ ಹೆಚ್ಚು ಸಂಭಾವನೆ!

  ಶ್ರೀನಿಧಿ ಶೆಟ್ಟಿ ಪಡೆದರು ಅತಿ ಹೆಚ್ಚು ಸಂಭಾವನೆ!

  ನಟಿ ಶ್ರೀನಿಧಿ ಶೆಟ್ಟಿ ಲಾಂಚ್‌ ಆಗಿದ್ದೇ ಕೆಜಿಎಫ್ ಚಿತ್ರದ ಮೂಲಕ. ಅವರ ಮೊದಲ ಚಿತ್ರವೇ ಕೆಜಿಎಫ್. ಮೊದಲ ಚಿತ್ರದ ಯಶಸ್ಸಿನ ಬಳಿಕ ಶ್ರೀನಿಧಿ ಸಂಭಾವನೆ ಹೆಚ್ಚಾಗಿದೆ. ಕೆಜಿಎಫ್ 2 ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ 3 ರಿಂದ 4 ಕೋಟಿ ರೂ ಎಂದು ತಿಳಿದು ಬಂದಿದೆ. ಈ ಮೂಲಕ 3 ಕೋಟಿ ಸಂಭಾವನೆ ಪಡೆಯುತ್ತಿರುವ ಸೌತ್ ಚಿತ್ರ ರಂಗದ ನಟಿಯರಿಗೆ ಶ್ರೀನಿಧಿ ಶೆಟ್ಟಿ ಸವಾಲು ಹಾಕುತ್ತಿದ್ದಾರೆ. ಕೆಜಿಫ್ 2 ಜೊತೆಗೆ ಶ್ರೀನಿಧಿ ತಮಿಳಿನ 'ಖೋಬ್ರಾ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

  ಸಂಜಯ್ ದತ್, ರವೀನಾ ಟಂಡನ್ ಸಂಭಾನೆಯೂ ಕೋಟಿ ಲೆಕ್ಕದಲ್ಲಿದೆ!

  ಸಂಜಯ್ ದತ್, ರವೀನಾ ಟಂಡನ್ ಸಂಭಾನೆಯೂ ಕೋಟಿ ಲೆಕ್ಕದಲ್ಲಿದೆ!

  ನಟ ಸಂಜಯ್‌ ದತ್ ಕೆಜಿಎಫ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್‌ ದತ್‌ ಅವರು ಅಧೀರನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಂಜಯ್‌ ದತ್‌ ಅವರು 9 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ನಟಿ ರವೀನಾ ಟಂಡನ್‌ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ಇದ್ದಾರೆ. ರವೀನಾ ಅವರು ತಮ್ಮ ಪಾತ್ರಕ್ಕೆ 1 ರಿಂದ 2 ಕೋಟಿ ಪಡೆದಿದ್ದಾರಂತೆ.

  ಪ್ರಕಾಶ್ ರಾಜ್, ಮಾಳವಿಕಾ, ಪ್ರಶಾಂತ್ ನೀಲ್ ಎಣಿಸಿದ್ದೆಷ್ಟು?

  ಪ್ರಕಾಶ್ ರಾಜ್, ಮಾಳವಿಕಾ, ಪ್ರಶಾಂತ್ ನೀಲ್ ಎಣಿಸಿದ್ದೆಷ್ಟು?

  ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್‌ ಕೂಡ ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ಪ್ರಶಾಂತ್ ನೀಲ್‌ 15 ರಿಂದ 20 ಕೋಟಿ ರೂಪಾಯಿ ಪಡೆದುಕೊಂಡಿದ್ದಾರಂತೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್‌ರಾಜ್ ಮತ್ತು ಮಾಳವಿಕಾ ಅವರು ಅಭಿನಯಿಸಿದ್ದಾರೆ. ಮಾಳವಿಕಾ 60 ಲಕ್ಷ ಪಡೆದರೆ, ಪ್ರಕಾಶ್‌ ರಾಜ್‌ 82 ಲಕ್ಷ್ ರೂ ಸಂಭಾವನೆ ಪಡೆದಿದ್ದಾರಂತೆ. ಈ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಹಬ್ಬಿದೆ. ಆದರೆ ಚಿತ್ರ ತಂಡದಿಂದ ಅಧಿಕೃತ ಪ್ರಕಟಣೆ ಬಾಕಿ ಇದೆ.

  English summary
  Rocking Star Yash, Sanjay Dutt Took Huge Remuneration For Kgf 2 Movie, know Other Remuneration Also,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X