For Quick Alerts
  ALLOW NOTIFICATIONS  
  For Daily Alerts

  ಹಿಂದಿ ಭಾಷೆಯೊಂದರಲ್ಲೇ 26 ಕೋಟಿ ಕಲೆಕ್ಷನ್ ಮಾಡಿದ 'ಕೆ.ಜಿ.ಎಫ್'.!

  |

  ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅಂತ ಎಲ್ಲರೂ ಮೂತಿ ತಿರುಗಿಸುವ ಕಾಲವೊಂದಿತ್ತು. ಆದ್ರೆ, ಒಳ್ಳೆ ಸಿನಿಮಾ ಮಾಡಿದ್ರೆ ಪ್ರೇಕ್ಷಕ ಮಹಾಪ್ರಭು ಎಂದೂ ಕೈಬಿಡಲ್ಲ ಎಂಬ ಮಾತನ್ನ 'ಕೆ.ಜಿ.ಎಫ್' ಸಿನಿಮಾ ಸಾಬೀತು ಪಡಿಸಿದೆ.

  'ಕೆ.ಜಿ.ಎಫ್' ಅಪ್ಪಟ ಕನ್ನಡ ಮಣ್ಣಿನ ಸಿನಿಮಾ. ಪರಭಾಷೆಗೆ ಡಬ್ ಆಗಿರುವ 'ಕೆ.ಜಿ.ಎಫ್' ಪಕ್ಕದ ನಾಡಿನಲ್ಲೂ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ ಅಂದ್ರೆ ಖಂಡಿತ ಸುಮ್ನೆ ಮಾತಲ್ಲ.

  'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ

  'ಕೆ.ಜಿ.ಎಫ್' ಬಿಡುಗಡೆ ಆಗಿ ಎರಡು ವಾರಗಳು ಕಳೆದಿವೆ. ಈ ಎರಡು ವಾರಗಳಲ್ಲಿ ಹಿಂದಿ ಭಾಷೆಯೊಂದರಲ್ಲೇ 'ಕೆ.ಜಿ.ಎಫ್' 26.70 ಕೋಟಿ ಕಲೆಕ್ಷನ್ ಮಾಡಿದೆ. ಹಾಗಂತ ಬಾಲಿವುಡ್ ನ ಪ್ರಖ್ಯಾತ ಟ್ರೇಡ್ ಎಕ್ಸ್ ಪರ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

  ನೂರು ಕೋಟಿ ಕ್ಲಬ್ ಗೆ 'ಕೆಜಿಎಫ್': ಎಲ್ಲಿಂದ ಎಷ್ಟು ಹಣ ಬಂತು.?

  ಇಲ್ಲಿಯವರೆಗೂ 'ಕೆ.ಜಿ.ಎಫ್' 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ. ಜನರ ಮನ ಗೆದ್ದಿರುವ 'ಕೆ.ಜಿ.ಎಫ್' ಟಿಕೆಟ್ ಗಳು ಈಗಲೂ ಬಿಸಿ ದೋಸೆಯಂತೆ ಸೇಲ್ ಆಗುತ್ತಿವೆ.

  ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!

  ನಿರ್ದೇಶಕ ಪ್ರಶಾಂತ್ ನೀಲ್ ರವರ ಮೇಕಿಂಗ್ ಸ್ಟೈಲ್, ರಾಕಿ ಭಾಯ್ ಯಶ್ ಆಕ್ಟಿಂಗ್, ರವಿ ಬಸ್ರೂರ್ ಸಂಗೀತ 'ಕೆ.ಜಿ.ಎಫ್' ಚಿತ್ರದಲ್ಲಿ ಮ್ಯಾಜಿಕ್ ಮಾಡಿದೆ.

  English summary
  Rocking Star Yash starrer Hindi version of KGF collects 26.70 Crore in 2 weeks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X