twitter
    For Quick Alerts
    ALLOW NOTIFICATIONS  
    For Daily Alerts

    ಟ್ರೋಲ್ ಮಾಡುವವರಿಗೆ ಮನವಿ ಮಾಡಿದ ನಟಿ ಕಿಯಾರಾ

    |

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿಯರಿಗೆ ಟ್ರೋಲರ್‌ಗಳು ಬೆನ್ನಿಗಂಟಿದ ದೆವ್ವದಂತೆ. ಟ್ರೋಲರ್‌ಗಳಿಂದ ಪ್ರತಿದಿನ ಉಪಟಳ ಎದುರಿಸುತ್ತಲೇ ಇದ್ದಾರೆ ನಟಿಯರು. ಎಲ್ಲ ಭಾಷೆಯ ನಟಿಯರಿಗೂ ಟ್ರೋಲರ್‌ಗಳ ಕಾಟ ತಪ್ಪಿದ್ದಲ್ಲ. ಬಾಲಿವುಡ್‌ ನಟಿಯರಿಗೆ ತುಸು ಹೆಚ್ಚೇ ಕಾಟ ನೀಡುತ್ತಾರೆ ಟ್ರೋಲರ್‌ಗಳು.

    ಇಷ್ಟು ದಿನ ಟ್ರೋಲ್‌ಗಳ ಬಗ್ಗೆ ಹೆಚ್ಚು ಮಾತನಾಡದಿದ್ದ ನಟಿ ಕಿಯಾರಾ, ಇತ್ತೀಚೆಗೆ ಟ್ರೋಲ್‌ ಬಗ್ಗೆ ಹಾಗೂ ಅವರು ಹಾಕುವ ಕಮೆಂಟ್‌ನಿಂದ ತಮ್ಮ ಮನಸ್ಸಿನ ಮೇಲಾಗುತ್ತಿರುವ ಹಾನಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ತಾವು ಟ್ರೋಲ್‌ಗಳನ್ನು ಹ್ಯಾಂಡಲ್‌ ಮಾಡುವುದನ್ನು ಕಲಿಯುತ್ತಿರುವುದಾಗಿಯೂ ಹೇಳಿದ್ದಾರೆ.

    Kiara Advani Request Trollers To Have Humanity

    ಎಲೆಯೊಂದನ್ನು ಮರೆಯಾಗಿ ಹಿಡಿದಿರುವ ನನ್ನ ಟಾಪ್‌ಲೆಸ್‌ ಚಿತ್ರಕ್ಕೆ ಹಲವು ಕೆಟ್ಟ-ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದು ನನಗೆ ಬಹಳ ಬೇಸರ ತರಿಸಿತ್ತು. ಆದರೆ ನಂತರ ನಾನು ಅವರಿಗೆ ಅವರದ್ದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಲು ಆರಂಭಿಸಿದೆ ಎಂದು ಕೆಲವು ಉದಾಹರಣೆಗಳನ್ನೂ ನಟಿ ಕೊಟ್ಟಿದ್ದಾರೆ.

    ಕಿಯಾರಾ ತನ್ನ ಬೆತ್ತಲೆ ದೇಹಕ್ಕೆ ಉದ್ದನೆಯ ಹಸಿರು ಎಲೆಯನ್ನು ಅಡ್ಡವಿಟ್ಟುಕೊಂಡಿರುವ ಚಿತ್ರಕ್ಕೆ ಕಮೆಂಟ್ ಮಾಡಿರುವ ಒಬ್ಬಾತ, 'ಈ ಎಲೆಯನ್ನು ಯಾವುದಾದರೂ ಆಡು ತಿನ್ನಬಾರದಾ, ಬಹಳ ಮಜವಾಗಿರುತ್ತದೆ' ಎಂದು ಕಮೆಂಟ್ ಮಾಡಿದ್ದಾನೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಯಾರಾ, ''ಈ ನಿನ್ನ ಮಾತುಗಳು ಬಾಯಿಂದಲೇ ಬರುತ್ತಿವೆಯಾ ಅಥವಾ ಬೇರೆಯ ಕಡೆಯಿಂದಲಾ?'' ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

    Kiara Advani Request Trollers To Have Humanity

    2018ರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿರುವ ಕಿಯಾರಾ, ''ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮದ ಚಿತ್ರಗಳು ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವೈರಲ್ ಆದವು. ಆ ಚಿತ್ರ ನೋಡಿದ ಹಲವರು ಕಿಯಾರಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ತುಟಿಯ ಆಪರೇಷನ್ ಮಾಡಿಸಿಕೊಂಡಿದ್ದಾಳೆ. ಗಲ್ಲವನ್ನು ತೆಳುವಾಗಿಸಿಕೊಂಡಿದ್ದಾಳೆ ಎಂದು ಬರೆದರು. ಅದು ಯಾವ ಮಟ್ಟಿಗೆ ನನ್ನ ಮೇಲೆ ಪರಿಣಾಮ ಬೀರಿತೆಂದರೆ ನಾನೂ ಸಹ ಅದನ್ನು ನಿಜವೆಂದೇ ನಂಬಲು ಆರಂಭಿಸಿದ್ದೆ'' ಎಂದಿದ್ದಾರೆ ಕಿಯಾರಾ.

    ಟ್ರೋಲ್‌ಗಳ ಬಗ್ಗೆ ಮುಂದುವರೆದು ಮಾತನಾಡಿರುವ ಕಿಯಾರಾ, ''ನನ್ನ ಪೋಷಕರು ಪ್ರತಿದಿನ ನನ್ನ ಹೆಸರನ್ನು ಟೈಪ್ ಮಾಡಿ ಮಾಧ್ಯಮಗಳು ನನ್ನ ಬಗ್ಗೆ ಏನು ಬರೆದಿವೆ ಎಂದು ಹುಡುಕುತ್ತಾರೆ. ಅಷ್ಟೇ ಅಲ್ಲದೆ ನನ್ನ ಹೆಸರಿನ ಹ್ಯಾಷ್‌ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಏನು ಬರೆದಿದ್ದಾರೆ ಹುಡುಕುತ್ತಾರೆ. ಒಳ್ಳೆಯದು ಬರೆದಿದ್ದರೆ ಖುಷಿಯಾಗಿ ನನ್ನ ಬಳಿ ಹೇಳುತ್ತಾರೆ. ಕೆಟ್ಟ, ಅಸಹ್ಯವಾದ ಟ್ರೋಲ್‌ ಕಮೆಂಟ್‌ಗಳನ್ನು ಓದಿದಾಗ ಬಹಳ ಬೇಸರ ಮಾಡಿಕೊಳ್ಳುತ್ತಾರೆ'' ಎಂದಿದ್ದಾರೆ ಕಿಯಾರಾ.

    ''ಸಂಸ್ಕಾರದ ಬಗ್ಗೆ ಕೆಲವರು ಮಾತನಾಡುತ್ತಾರೆ. ಸಂಸ್ಕಾರ, ಸಂಸ್ಕೃತಿ ಎಂದರೆ ಮತ್ತೊಬ್ಬರ ಬಗ್ಗೆ ಗೌರವದಿಂದ ಮಾತನಾಡುವುದಾಗಿರುತ್ತದೆ. ಜನ ಮೊದಲು ಅರ್ಥ ಮಾಡಿಕೊಳ್ಳಬೇಕು. ನಟ-ನಟಿಯರು ಸಹ ಅವರಂತೆ ಮನುಷ್ಯರು ಅವರಿಗೂ ಭಾವನೆಗಳು ಇರುತ್ತವೆ ಎಂದು. ಅವರ ಬಗ್ಗೆ ಮಾತನಾಡುವ, ಕಮೆಂಟ್ ಮಾಡುವ ಮೊದಲು ಯೋಚನೆ ಮಾಡಬೇಕು'' ಎಂದು ಮನವಿ ಮಾಡಿದ್ದಾರೆ ಕಿಯಾರಾ.

    ನಟಿ ಕಿಯಾರಾ ಅಡ್ವಾಣಿ ಪ್ರಸ್ತುತ 'ಶೇರ್ಷಾ' ಸಿನಿಮಾದ ಯಶಸ್ಸಿನ ಅಮಲಿನಲ್ಲಿದ್ದಾರೆ. ಕಿಯಾರಾ, ಅಕ್ಷಯ್ ಕುಮಾರ್ ಜೊತೆ ನಟಿಸಿರುವ 'ಭೂಲ್ ಬುಲಯ್ಯಾ 2' ಸಿನಿಮಾ ಬಿಡುಗಡೆ ಆಗಬೇಕಿದೆ. ವರುಣ್ ಧವನ್ ಜೊತೆಗೆ 'ಜುಗ್ ಜುಗ್ ಜಿಯೊ' ಸಿನಿಮಾದಲ್ಲಿಯೂ ಕಿಯಾರಾ ನಟಿಸುತ್ತಿದ್ದು ಈ ಸಿನಿಮಾವನ್ನು ರಾಜ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಐತಿಹಾಸಿಕ ಸಿನಿಮಾ 'ಸತ್ಯನಾರಾಯಣ್ ಕಿ ಕಥಾ' ಸಿನಿಮಾದಲ್ಲಿಯೂ ಕಿಯಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತೆಲುಗಿನ ರಾಮ್ ಚರಣ್ ತೇಜ ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾದಲ್ಲಿಯೂ ಕಿಯಾರಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ತಮಿಳಿನ ಶಂಕರ್ ನಿರ್ದೇಶಿಸಲಿದ್ದಾರೆ.

    English summary
    Actress Kiara Advani Request trollers to have humanity. Actress also humans
    Thursday, August 26, 2021, 0:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X