»   » ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು

ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು

By: ಉದಯರವಿ
Subscribe to Filmibeat Kannada

ಗೋಡೆ ಕ್ಯಾಲೆಂಡರ್ ಗಳಲ್ಲೇ ಅತ್ಯಂತ ಹಾಟ್ ಎಂದರೆ ಕಿಂಗ್ ಫಿಶರ್ ಕ್ಯಾಲೆಂಡರ್! ಹಾಗಂತ ಇದರಲ್ಲಿ ವಾರ, ತಿಥಿ, ನಕ್ಷತ್ರ ಇತ್ಯಾದಿ ವಿವರಗಳು ಇರಲ್ಲ. ಇನ್ನು ರಾಹುಕಾಲ, ಯಮಗಂಡಕಾಲದ ಮಾತು ತುಂಬಾ ದೂರವಾಯಿತು. ಆದರೆ ಇದರಲ್ಲಿ ದಿನವೂ ನಳನಳಿಸುವ, ನಕ್ಷತ್ರದಂತೆ ಹೊಳೆಯುವ ಮೋಹಕ ಬೆಡಗಿಯರಂತೂ ಇದ್ದೇ ಇರುತ್ತಾರೆ.

ಹಾಗಂತ ಈ ಕ್ಯಾಲೆಂಡರ್ ಎಲ್ಲರಿಗೂ ಸಿಗುವುದೂ ಕಷ್ಟ. ಸಿಕ್ಕರೆ ಎಲ್ಲೆಂದರಲ್ಲಿ ಪ್ರದರ್ಶಿಸುವಂತದ್ದೂ ಅಲ್ಲ. ಇದು ಒಂಥರಾ ತೀರಾ ಪರ್ಸನಲ್. ಈಗಾಗಲೆ 2014ನೇ ಸಾಲಿನ ಕಿಂಗ್ ಫಿಶರ್ ಕ್ಯಾಲೆಂಡರ್ ಗೆ ಭರ್ಜರಿ ತಯಾರಿ ನಡೆದಿದೆ.

ರೂಪದರ್ಶಿಯರು ಯಾವ್ಯಾವ ರೀತಿ ತಮ್ಮ ಮೈಮಾಟವನ್ನು ಪ್ರದರ್ಶಿಸಬಹುದು, ಯಾವ ಬಣ್ಣದ ಬಿಕಿನಿ ತೊಟ್ಟರೆ ಚೆಂದ, ತಲೆಗೂದಲು ಹೇಗಿರಬೇಕು, ಹೇಗಿರಬಾರದು ಎಂಬ ಬಗ್ಗೆ ತಾಲೀಮು ನಡೆಯುತ್ತಿದೆ. ಬನ್ನಿ ನೋಡೋಣ ಕೆಲವು ಅಪರೂಪದ ಚಿತ್ರಗಳನ್ನು...

ಈ ಕ್ಯಾಲೆಂಡರ್ ಗಾಗಿ ಸಾಕಷ್ಟು ಸಿದ್ಧತೆಗಳು

ಈ ಕ್ಯಾಲೆಂಡರ್ ಗಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ನಡೆಯುತ್ತಿರುವ ಭರ್ಜರಿ ತಯಾರಿಯ ವಿಡಿಯೋ ದೃಶ್ಯಗಳನ್ನು ಎನ್ ಡಿಟಿವಿ ಗುಡ್ ಟೈಮ್ಸ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 10ಕ್ಕೆ ಪ್ರಸಾರ ಮಾಡುತ್ತಿದೆ.

ಮೀಂಚುಳ್ಳಿ ಛಾಯಾಗ್ರಾಹಕ ಅತುಲ್ ಕಸ್ಬೇಕರ್

ಈ ಬಾರಿಯೂ ಚೆಂದುಳ್ಳಿ ಚೆಲುವೆಯರನ್ನು ಸೆರೆಹಿಡಿಯುತ್ತಿರುವ ಛಾಯಾಗ್ರಾಹಕ ಅತುಲ್ ಕಸ್ಬೇಕರ್.

ಒಂದು ಕಾಲದಲ್ಲಿ ಕಿಂಗ್ ಫಿಶರ್ ಗರ್ಲ್ ದೀಪಿಕಾ

2003ರಿಂದಲೂ ಇವರು ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ, ನರ್ಗೀಸ್ ಫಕ್ರಿ ಹಾಗು ಇಷಾ ಗುಪ್ತಾರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟದ ಕ್ಯಾಲೆಂಡರ್

ಅಂತಾರಾಷ್ಟ್ರೀಯ ಗುಣಮಟ್ಟದ ಕಿಂಗ್ ಫಿಶರ್ ಕ್ಯಾಲೆಂಡರ್ ಕೇವಲ ಭಾರತದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಜನಪ್ರಿಯವಾಗಿದೆ.

ಡೋಂಟ್ ಕೇರ್ ಎನ್ನದ ವಿಜಯ ಮಲ್ಯ

ಮದ್ಯದ ದೊರೆ, ಕಿಂಗ್ ಫಿಶರ್ ಸಂಸ್ಥೆಯ ಒಡೆಯ ವಿಜಯ ಮಲ್ಯ ವ್ಯಾಪಾರ ವಹಿವಾಟುಗಳು ಈ ವರ್ಷ ಸಾಕಷ್ಟು ಲುಕ್ಸಾನು ಆಗಿದ್ದರೂ ಅವರು ಮಾತ್ರ ಡೋಂಟ್ ಕೇರ್ ಎಂಬಂತಿದ್ದಾರೆ. ಈ ಕಷ್ಟನಷ್ಟಗಳ ನಡುವೆಯೇ ಅವರು ತಮ್ಮ ನೆಚ್ಚಿನ ಕಿಂಗ್ ಫಿಶರ್ ಕ್ಯಾಲೆಂಡರನ್ನು ಮತ್ತೆ ಹೊರತರುತ್ತಿದ್ದಾರೆ.

ಭಾರತದ ಅತ್ಯಂತ ಹಾಟ್ ಕ್ಯಾಲೆಂಡರ್

ಭಾರತದ ಅತ್ಯಂತ ಹಾಟ್ ಕ್ಯಾಲೆಂಡರ್ ಎಂಬ ಖ್ಯಾತಿಗೆ 'ಕಿಂಗ್ ಫಿಶರ್' ಕ್ಯಾಲೆಂಡರ್ ಪಾತ್ರವಾಗಿದೆ.

ಯಾರ್ಯಾರು ಆಯ್ಕೆಯಾಗುತ್ತಾರೆ?

ಈ ಬಾರಿಯ ಕಿಂಗ್ ಫಿಶರ್ ಕ್ಯಾಲೆಂಡರ್ ಗೆ ಯಾರ್ಯಾರು ಆಯ್ಕೆಯಾಗುತ್ತಾರೆ ಎಂಬ ಬಗ್ಗೆ ಕುತೂಹಲ ಇದ್ದೇ.

English summary
Behind the scenes of Kingfisher Calendar 2014 photo shoot Photo Feature. The babes in their bikinis are back this year with Kingfisher Supermodels hunt for the annual Kingfisher Calendar 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada