For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ಚಿಕಿತ್ಸೆ ಪಡೆದು ಮರಳಿದ ಕಿರಣ್ ಖೇರ್: ಒಡವೆ ಮಾರಲು ಕಾರಣವೇನು!

  |

  ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ, ರಾಜಕಾರಣಿ ಕಿರಣ್ ಖೇರ್ ಚಿಕಿತ್ಸೆ ಬಳಿಕ ದರ್ಶನ ನೀಡಿದ್ದಾರೆ. 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ರಿಯಾಲಿಟಿ ಶೋ ಸೆಟ್‌ಗೆ ಕಿರಣ್ ಖೇರ್ ಎಂಟ್ರಿ ಕೊಟ್ಟಿದ್ದಾರೆ. ಕಿರಣ್ ಖೇರ್‌ ಸೆಟ್‌ನಲ್ಲಿ ಇರುವ ವಿಡಿಯೋ ಫೊಟೋಗಳು ವೈರಲ್‌ ಆಗಿವೆ.

  ಇನ್ನೂ ಕಿರಣ್ ಖೇರ್ ಮರಳಿ ಕಾರ್ಯಕ್ರಮಕ್ಕೆ ಬಂದಿರುವ ಹಿನ್ನೆಲೆ ಇಡೀ ತಂಡ ಖುಷಿ ಆಗಿದೆ. ಚಿಕಿತ್ಸೆ ಬಳಿಕ ಕಾರ್ಯಕ್ರಮಕ್ಕೆ ಬಂದಿರುವ ಕಿರಣ್ ಖೇರ್ ಅವರನ್ನು ಎಲ್ಲರೂ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

  ಈಗ ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಕಿರಣ್ ಖೇರ್‌ ಅವರು ಮತ್ತೊಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಕಿರಣ್ ಖೇರ್ ಅವರು ತಮ್ಮ ಒಡವೆಗಳನ್ನು ಮಾರಲು ಮುಂದಾಗಿದ್ದಾರೆ.

  ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಮರಳಿದ ಕಿರಣ್‌ ಖೇರ್!

  ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಮರಳಿದ ಕಿರಣ್‌ ಖೇರ್!

  ಕಿರಣ್ ಖೇರ್ ಅವರಿಗೆ ಈ ವರ್ಷದ ಆರಂಭದಲ್ಲಿ 'ಮಲ್ಟಿಪಲ್ ಮೈಲೋಮಾ' ಇರುವುದು ಪತ್ತೆಯಾಯಿತು. ಇದು ಒಂದು ರೀತಿಯ ರಕ್ತದ ಕ್ಯಾನ್ಸರ್. ಚಿಕಿತ್ಸೆ ಪಡೆದ ಬಳಿಕ ಕಿರಣ್ ಖೇರ್ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಕಾರ್ಯಕ್ರಮದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಅವರು ಈ ಕಾರ್ಯಕ್ರಮದ ಸೀಸನ್ ಒಂದರಿಂದ ತೀರ್ಪು ನೀಡುತ್ತಿದ್ದಾರೆ. ಈ ಮತ್ತೆ ಚಿಕಿತ್ಸೆ ಬಳಿಕ ವಾಪಸ್ ಆಗಿದ್ದಾರೆ.

  ಒಡವೆಗಳನ್ನು ಮಾರುತ್ತೇನೆ ಎಂದ ಕಿರಣ್ ಖೇರ್!

  ಒಡವೆಗಳನ್ನು ಮಾರುತ್ತೇನೆ ಎಂದ ಕಿರಣ್ ಖೇರ್!

  ನವೆಂಬರ್ 25ರಂದು ಕಿರಣ್ ಖೇರ್, ಬಾದ್‌ಶಾ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಶಿಲ್ಪಾ ಶೆಟ್ಟಿ ಅವರು ಕಿರಣ್ ಖೇರ್ ಅವರೊಂದಿಗಿನ ವಿಡಿಯೋ ಹಂಚಿಕೊಂಡಿದ್ದಾರೆ. "ಐಜಿಟಿಯಲ್ಲಿ ಮೊದಲ ದಿನ, ಕಿರಣ್ ಖೇರ್ ಮತ್ತು ಬಾದ್‌ಶಾ ಅವರೊಂದಿಗೆ ಮೊದಲ ಪ್ರದರ್ಶನ " ಎಂದು ಬರೆದುಕೊಂಡಿದ್ದಾರೆ.

  ಇನ್ನು ವಿಡಿಯೊ ಮಾಡುವಾಗ ನಟಿ ಶಿಲ್ಪಾ ಶೆಟ್ಟಿ ಕಿರಣ್ ಖೇರ್ ಅವರು ಹಾಕಿಕೊಂಡಿದ್ದ ಒಡವೆ ಕುರಿತು ಮಾತನಾಡಿದ್ದಾರೆ. ಈ ಒಡವೆ ತುಂಬಾ ಚೆನ್ನಾಗಿದೆ ಇದನ್ನು ನಾನು ತೆಗೆದುಕೊಳ್ಳತ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ಒಡವೆ ಬಗ್ಗೆ ಮಾತನಾಡಿದ ಕಿರಣ್ ಖೇರ್ "ನಾನು ನನ್ನ ಮಗನಿಗೆ ಒಡವೆಗಳನ್ನು ಮಾರುವುದಾಗಿ ಹೇಳಿದ್ದೇನೆ" ಎಂದಿದ್ದಾರೆ.

  ಮಗನಿಂದಲೇ ಒಡವೆ ಮಾರುತ್ತಿರುವ ಕಿರಣ್ ಖೇರ್!

  ನಟಿ ಕಿರಣ್ ಖೇರ್ ಒಡವೆಗಳನ್ನು ಮಾರಾಟ ಮಾಡುತ್ತೇನೆ ಎಂದು ಹೇಳಲು ಅವರ ಪುತ್ರ ಸಿಖಂದರ್ ಖೇರ್. ಆದರೆ ಮದುವೆಗಾಗಿ ಒಡವೆ ಮಾರುತ್ತಿಲ್ಲ. ಬದಲಿಗೆ ಕಿರಣ್ ಖೇರ್ ಮಗ ಸಿಖಂದರ್ ಖೇರ್ ಇನ್ನೂ ಮದುವೆ ಆಗಿಲ್ಲ. ಹಾಗಾಗಿ ಅವರು ಮದುವೆ ಆಗಲಿಲ್ಲ ಎಂದರೆ ತನ್ನ ಒಡವೆಗಳನ್ನು ಮಾರುವುದಾಗಿ ಮಗನಿಗೆ ಕಿರಣ್ ಖೇರ್ ಹೇಳಿದ್ದಾರಂತೆ. ಈಗ ಅವರ ಮಗ ಹಾಗೆ ಮಾಡಬೇಡ ನಿನ್ನ ಸೊಸೆ ಹಾಕಿಕೊಳ್ಳುತ್ತಾಳೆ ಎನ್ನುತ್ತಾರಂತೆ. ಈ ವಿಚಾರವನ್ನು ಶಿಲ್ಪಾ ಶೆಟ್ಟಿ ಮಾಡಿರುವ ವಿಡಿಯೋದಲ್ಲಿ ಕಿರಣ್ ಖೇರ್ ಹೇಳಿ ನಕ್ಕಿದ್ದಾರೆ.

  ಪ್ರತೀ ತಿಂಗಳು ಆಸ್ಪತ್ರೆಗೆ ಭೇಟಿ ನೀಡಬೇಕು ಕಿರಣ್ ಖೇರ್!

  ಪ್ರತೀ ತಿಂಗಳು ಆಸ್ಪತ್ರೆಗೆ ಭೇಟಿ ನೀಡಬೇಕು ಕಿರಣ್ ಖೇರ್!

  ಕಿರಣ್ ಖೇರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಚಿಕಿತ್ಸೆಯ ಸಮಯದ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದಾರೆ. "ನಾನು ಆಸ್ಪತ್ರೆಯಲ್ಲಿದ್ದಾಗಲೂ ಕೆಲಸ ಮಾಡಿಕೊಂಡೆ ಚಿಕಿತ್ಸೆ ಪಡೆಯುತ್ತಿದ್ದೆ. ನಾನು ನನ್ನ ಫೋನ್‌ನಲ್ಲಿ ಜನರೊಂದಿಗೆ ಸಂಪರ್ಕದಲ್ಲಿದ್ದೆ. ಆದರೆ ನನ್ನ ವೈದ್ಯರು ನನಗೆ ಎಲ್ಲಿಗೂ ಪ್ರಯಾಣಿಸಲು ಅವಕಾಶ ನೀಡುತ್ತಿರಲಿಲ್ಲ, ಚಿಕಿತ್ಸೆಯಿಂದಾಗಿ ನನ್ನ ರೋಗ ನಿರೋಧಕ ಶಕ್ತಿ ಸುಧಾರಿಸಿದೆ" ಎಂದು ಕಿರಣ್ ಖೇರ್ ಹೇಳಿಕೊಂಡಿದ್ದರು. ಇನ್ನು ಕಿರಣ್ ಖೇರ್ ಚಿಕಿತ್ಸೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡಬೇಕು. ಇದರ ಜೊತೆಗೆ ಅವರು ರಿಯಾಲಿಟಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

  English summary
  Kirron Kher Battling With Cancer Now Returns To India's Got Talent Set As A Judge, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X