For Quick Alerts
  ALLOW NOTIFICATIONS  
  For Daily Alerts

  ಗರ್ಲ್‌ಫ್ರೆಂಡ್ ಚಿತ್ರ ಹಂಚಿಕೊಂಡ ಕ್ರಿಕೆಟಿಗ ಕೆ.ಎಲ್.ರಾಹುಲ್: ಆಕೆ ಖ್ಯಾತ ನಟನ ಪುತ್ರಿ!

  |

  ಕ್ರಿಕೆಟಿಗ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿರುವ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್. ಅದ್ಭುತವಾಗಿ ಬ್ಯಾಟ್ ಬೀಸಿ ಅಭಿಮಾನಿಗಳನ್ನು ಸೂರೆಗೊಳಿಸುವ ರಾಹುಲ್, ತಮ್ಮ ಲುಕ್ಸ್‌ಗಳಿಂದ ಹೆಂಗೆಳೆಯರ ಹೃದಯವನ್ನೂ ಕದ್ದಿದ್ದಾರೆ.

  ಕೆ.ಎಲ್.ರಾಹುಲ್ ಇಂದು ಸಹ ತಮ್ಮ ಪ್ರೇಯಸಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ಕ್ರಿಕೆಟಿಗ ಕೆ.ಎಲ್.ರಾಹುಲ್ ನಟಿಯೊಬ್ಬರೊಂದಿಗೆ ಪ್ರೀತಿ-ಪ್ರೇಮದಲ್ಲಿದ್ದಾರೆ. ಖ್ಯಾತ ನಟರೊಬ್ಬರ ಮಗಳೂ ಆಗಿರುವ ಸುಂದರ ಯುವತಿ, ಕರ್ನಾಟಕ ಮೂಲದವರೇ! ಬಾಲಿವುಡ್-ಕ್ರಿಕೆಟ್ ನಂಟನ್ನು ಕೆ.ಎಲ್.ರಾಹುಲ್ ಮುಂದುವರೆಸುತ್ತಿದ್ದಾರೆ!

  ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ

  ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ

  ಕರ್ನಾಟಕ ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಜೊತೆ ಕೆ.ಎಲ್.ರಾಹುಲ್ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹಲವು ತಿಂಗಳುಗಳಿಂದ ಈ ಇಬ್ಬರು ಒಟ್ಟಿಗೆ ಓಡಾಡುತ್ತಿದ್ದಾರೆ. ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಾರೆ.

  ಆತಿಯಾ ಜೊತೆಗಿನ ಚಿತ್ರ ಹಂಚಿಕೊಂಡಿದ್ದಾರೆ ರಾಹುಲ್

  ಆತಿಯಾ ಜೊತೆಗಿನ ಚಿತ್ರ ಹಂಚಿಕೊಂಡಿದ್ದಾರೆ ರಾಹುಲ್

  ಇಂದು ಆತಿಯಾ ಶೆಟ್ಟಿ ಹುಟ್ಟುಹಬ್ಬವಾದ ಕಾರಣ ಅವರೊಂದಿಗೆ ಆಪ್ತವಾಗಿರುವ ಚಿತ್ರವೊಂದನ್ನು ಕೆ.ಎಲ್.ರಾಹುಲ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು. 'ಹುಚ್ಚು ಹುಡುಗಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿದ್ದಾರೆ.

  ಆತಿಯಾ ಸಹ ಕೆ.ಎಲ್.ರಾಹುಲ್ ಚಿತ್ರ ಹಾಕಿದ್ದರು

  ಆತಿಯಾ ಸಹ ಕೆ.ಎಲ್.ರಾಹುಲ್ ಚಿತ್ರ ಹಾಕಿದ್ದರು

  ಕೆ.ಎಲ್.ರಾಹುಲ್ ಹುಟ್ಟುಹಬ್ಬ ಇದ್ದಾಗಲೂ ಸಹ ಆತಿಯಾ ರಾಹುಲ್ ಚಿತ್ರವನ್ನು ಪ್ರಕಟಿಸಿ, 'ನನ್ನ ಪುರುಷನಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದರು. ಇಬ್ಬರೂ ಮದುವೆ ಆಗುವ ಸಾಧ್ಯತೆ ಇದೆ. ಅವರ ಸಂಬಂಧದ ಬಗ್ಗೆ ತಂದೆ ಸುನಿಲ್ ಶೆಟ್ಟಿ ಸಹ ಬಹಿರಂಗವಾಗಿಯೇ ಮಾತನಾಡಿದ್ದರು.

  ಚಿತ್ರರಂಗದಲ್ಲಿ ಇನ್ನೂ ಯಶಸ್ಸು ಸಿಕ್ಕಿಲ್ಲ ಆತಿಯಾ ಗೆ

  ಚಿತ್ರರಂಗದಲ್ಲಿ ಇನ್ನೂ ಯಶಸ್ಸು ಸಿಕ್ಕಿಲ್ಲ ಆತಿಯಾ ಗೆ

  2015 ರಲ್ಲಿಯೇ ನಟನೆಗೆ ಪಾದಾರ್ಪಣೆ ಮಾಡಿದ ಆತಿಯಾ ಶೆಟ್ಟಿ ಹೆಚ್ಚಿನ ಯಶಸ್ಸನ್ನೇನೂ ಗಳಿಸಿಲ್ಲ. ಐದು ವರ್ಷದಲ್ಲಿ ಆತಿಯಾ ನಟಿಸಿರುವುದು ಕೇವಲ ನಾಲ್ಕು ಸಿನಿಮಾಗಳಲ್ಲಿ. ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

  ಐಪಿಎಲ್‌ನಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್

  ಐಪಿಎಲ್‌ನಲ್ಲಿ ರಾಹುಲ್ ಉತ್ತಮ ಬ್ಯಾಟಿಂಗ್

  ಇನ್ನು ಕೆ.ಎಲ್.ರಾಹುಲ್ ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರ ನಾಯಕತ್ವದ ಪಂಜಾಬ್ ತಂಡ ಪ್ಲೇಆಫ್ಸ್‌ಗೆ ಆಯ್ಕೆ ಆಗಲಿಲ್ಲವಾದರೂ ಅವರು ಈ ಐಪಿಎಲ್‌ನಲ್ಲಿ ಈವರೆಗೆ ಅತಿ ಹೆಚ್ಚು ರನ್ ಭಾರಿಸಿದ ಬ್ಯಾಟ್ಸ್‌ಮನ್. ಆಸ್ಟ್ರೇಲಿಯಾ ಟೂರ್‌ಗೆ ಸಹ ಅವರು ಆಯ್ಕೆ ಆಗಿದ್ದಾರೆ.

  English summary
  Cricketer KL Rahul posted picture with actress Athiya wished her happy birthday. Athiya is daughter of Sunil Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X