»   » ಒಂದು ದಿನದ ಗಳಿಕೆಯಲ್ಲಿ ಕ್ರಿಶ್ 3 ಹೊಸ ದಾಖಲೆ

ಒಂದು ದಿನದ ಗಳಿಕೆಯಲ್ಲಿ ಕ್ರಿಶ್ 3 ಹೊಸ ದಾಖಲೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಾವಿರಾರು ಕೋಟಿ ಗಳಿಕೆ ನಿರೀಕ್ಷೆಯಲ್ಲಿರುವ ಕ್ರಿಶ್ 3 ಚಿತ್ರ ಮಕ್ಕಳಿಗೆ ಬಹು ಮೆಚ್ಚುಗೆಯಾಗಿದೆ. ಆದರೆ, ವಿಮರ್ಶಕರ ಪೂರ್ಣ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಗಿದೆ. ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಭರ್ಜರಿ ಗಳಿಕೆ ಮಾಡತೊಡಗಿದೆ. ಚೆನ್ನೈ ಎಕ್ಸ್ ಪ್ರೆಸ್ ದಾಖಲೆಗಳ ಹಿಂದೆ ಬಿದ್ದಿರುವ ಕ್ರಿಶ್ 3 ಗಳಿಕೆ ಸದ್ಯಕ್ಕೆ 100 ಕೊಟಿ ರು ದಾಟಿದೆ

ದುಷೃ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಹೊಂದಿರುವ ಮುಸುಕುಧಾರಿ ಮಹಾವೀರ ಮಹಾ ದುಷ್ಟ ಕಾಲ್ ನಿಂದ ಭೂಮಿಯನ್ನು ರಕ್ಷಿಸುವ ಸಿಂಪಲ್ ಕಥೆಯನ್ನು ಈ ಚಿತ್ರ ಹೊಂದಿದ್ದು, ಮಿಕ್ಕಂತೆ ಗ್ರಾಫಿಕ್ಸ್, ಸಾಹಸಮಯ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ

ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಂಡ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3, ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ.

ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದಾರೆ. ಆದರೆ, ಬಹುತೇಕ ವಿಮರ್ಶಕರು ಇದು ಆವರೇಜ್ ಚಿತ್ರ ಎಂದಿದ್ದಾರೆ.

ರಾಕೇಶ್ ರೋಷನ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಶನ್, ವಿವೇಕ್ ಒಬೆರಾಯ್, ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಾನೌತ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.

ಕ್ರಿಶ್ 3 ಚಿತ್ರದ ಪೋಸ್ಟರ್ ಗಳು, ಟ್ರೇಲರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಮಕ್ಕಳಿಗೆ ಕ್ರೇಜ್ ಹುಟ್ಟಿಸಲು ಬೆಂಗಳೂರಿನಲ್ಲಿ ಕ್ರಿಶ್ 3 ಗೇಮ್ಸ್ ಅನ್ನು ಹೃತಿಕ್ ಬಿಡುಗಡೆ ಮಾಡಿದ್ದರು. ಕ್ರಿಶ್ 3 ಚಿತ್ರದ ಗಳಿಕೆ ವಿವರ ಮುಂದೆ ಓದಿ...

ಸದ್ಯದ ದಾಖಲೆಗಳು

* ಬಿಡುಗಡೆಗೊಂಡ ನಾಲ್ಕು ದಿನಗಳಲ್ಲಿ 100 ಕೋಟಿ ರು ಗಳಿಕೆ(ದೇಶಿ ಮಾರುಕಟ್ಟೆಯಲ್ಲಿ ಮಾತ್ರ) ಕಂಡ ಎರಡನೆ ಚಿತ್ರ
* ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೋಮವಾರ ಒಂದೇ ದಿನ ಅತ್ಯಧಿಕ ಮೊತ್ತ ಗಳಿಕೆ ದಾಖಲೆ
* 100 ಕೋಟಿ ರು ಕ್ಲಬ್ ಸೇರಿದ ಹೃತಿಕ್ ರೋಷನ್ ಅವರ ಎರಡನೇ ಚಿತ್ರ ಮೊದಲನೆಯದ್ದು ಅಗ್ನಿಪಥ್

ನಾಲ್ಕು ದಿನಗಳ ವಿವರ

* ಸೋಮವಾರ(ನ.4) ಒಂದೇ ದಿನ ಭಾರತೀಯ ಬಾಕ್ಸಾಫೀಸ್ ನಲ್ಲಿ ನಿವ್ವಳ 35.91 ಕೋಟಿ ರು ಗಳಿಸಿ ಹೊಸ ದಾಖಲೆ ನಿರ್ಮಾಣ
* ಶುಕ್ರವಾರ(25.5 ಕೋಟಿ ರು)
* ಶನಿವಾರ (23 ಕೋಟಿ ರು )
* ಭಾನುವಾರ (24.3 ಕೋಟಿ ರು )

ಮಾರುಕಟ್ಟೆ ತಜ್ಞರ ಪ್ರತಿಕ್ರಿಯೆ

ಕೋಮಲ್ ಮೆಹ್ತಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿ " ಕ್ರಿಶ್ 3 ಬೆಳಕಿನ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದೆ. ಸೋಮವಾರ 35.91 ಕೋಟಿ ರು ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ ಇದು ಒಂದು ದಿನದಲ್ಲಿ ಇದುವರೆವಿಗೂ ಗಳಿಸಿರುವ ದೊಡ್ಡ ಮೊತ್ತ ಎಂದಿದ್ದಾರೆ.

ತರಣ್ ಆದರ್ಶ್

ಜನಪ್ರಿಯ ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿ
*highest single day* record lies shattered. #Krrish3 collects History on Mon. Collects Rs 35.91 cr. The highest *single day* figure EVER." ಎಂದಿದ್ದಾರೆ. ಜತೆಗೆ 100 ಕೋಟಿ ರು ಕ್ಲಬ್ ಸೇರಿದ್ದು 108.61 ಕೋಟಿ ರು ಗಳಿಸಿದೆ ಎಂದು ದೃಢಪಡಿಸಿದ್ದಾರೆ.

ಚೆನ್ನೈ ಎಕ್ಸ್ ಪ್ರೆಸ್ ದಾರಿಯಲ್ಲಿ

ಕ್ರಿಶ್ 3 ಭಾರಿ ಗಳಿಕೆಯ ಮುನ್ಸೂಚನೆ ನೀಡಿದ್ದು, ಶಾರುಖ್ ಖಾನ್-ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ದಾಖಲೆಗಳ ಹಿಂದೆ ಬಿದ್ದಿದೆ.

ಚೆನ್ನೈ ಎಕ್ಸ್ ಪ್ರೆಸ್ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲೇ 100.42 ಕೋಟಿ ರು ಗಳಿಸಿತ್ತು. ಈಗ ಕ್ರಿಶ್ 3 ಚಿತ್ರ ನಾಲ್ಕು ದಿನಗಳಲ್ಲಿ 108.61 ಕೋಟಿ ರು ಗಳಿಸಿ ಅತ್ಯಂತ ತ್ವರಿತವಾಗಿ 100 ಕೋಟಿ ರು ಗಳಿಕೆ ಪಟ್ಟಿ ಸೇರಿದ ಎರಡನೇ ಚಿತ್ರ ಎನಿಸಿದೆ.

English summary
The much-talked about superhero movie Krrish 3, which has done brilliant collection over the weekend, has created a history at the Indian Box Office on its fourth day (Monday). The Rakesh Roshan-directed film has set a highest single day record on the Diwali holiday.
Please Wait while comments are loading...