»   » 'ಜೂಲಿ' ಲಕ್ಷ್ಮಿ ರೈ ಹಾಟ್ ಅವತಾರ ಕಂಡು ಬೆರಗಾದ ಬಾಲಿವುಡ್ ಮಂದಿ!

'ಜೂಲಿ' ಲಕ್ಷ್ಮಿ ರೈ ಹಾಟ್ ಅವತಾರ ಕಂಡು ಬೆರಗಾದ ಬಾಲಿವುಡ್ ಮಂದಿ!

Posted By:
Subscribe to Filmibeat Kannada

ದಕ್ಷಿಣ ಭಾರತದ ನಟಿ ಲಕ್ಷ್ಮಿ ರೈ ಈಗ ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ಜೊತೆಗೆ ತನ್ನ ಮೊದಲ ಎಂಟ್ರಿಯಲ್ಲಿಯೇ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿದ್ದಾರೆ. 'ಬಾಲಿವುಡ್ ಎಂಟ್ರಿ ಅಂದರೆ ಈ ರೀತಿ ಇರಬೇಕು..' ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು 'ಜೂಲಿ 2' ಸಿನಿಮಾದ ಟ್ರೇಲರ್.

ಲಕ್ಷ್ಮಿ ರೈ ಚೊಚ್ಚಲ ಚಿತ್ರದ ಟೀಸರ್ ಕಂಡು ದಂಗಾದ ಬಾಲಿವುಡ್

'ಜೂಲಿ 2' ಚಿತ್ರದ ಟ್ರೇಲರ್ ಸದ್ಯ ರಿಲೀಸ್ ಆಗಿದ್ದು, ಎಲ್ಲರ ಹಾರ್ಟ್ ಬೀಟ್ ಜಾಸ್ತಿಯಾಗುವಂತೆ ಮಾಡಿದೆ. ಈ ಹಿಂದೆ ಟೀಸರ್ ನೋಡಿ ದಂಗಾಗಿದ್ದ ಪ್ರೇಕ್ಷಕರು ಈಗ ಟ್ರೇಲರ್ ನೋಡಿ ಬೆರಗಾಗಿದ್ದಾರೆ. ಟ್ರೇಲರ್ ತುಂಬಾ ಲಕ್ಷ್ಮಿ ರೈ ಗ್ಲಾಮರ್ ತುಂಬಿದೆ.

Lakshmi Rai 'Julie 2' movie trailer released

'ಜೂಲಿ 2' ಸಿನಿಮಾದ ಟ್ರೇಲರ್ ಯೂ ಟ್ಯೂಬ್ ನಲ್ಲಿ ಸಖತ್ ಹಿಟ್ಸ್ ಪಡೆಯುತ್ತಿದೆ. ಚಿತ್ರದ ಟ್ರೇಲರ್ ನೋಡಿದರೆ ಒಬ್ಬ ನಟಿಯ ಕಥೆ ಚಿತ್ರದಲ್ಲಿದೆ ಎಂಬುದು ತಿಳಿಯುತ್ತದೆ. ಜೊತೆಗೆ 'ಕಾಸ್ಟಿಂಗ್ ಕೌಚ್' ಸೇರಿದಂತೆ ಚಿತ್ರರಂಗದಲ್ಲಿನ ನಗ್ನ ಸತ್ಯಗಳ ಮೇಲೆ ಸಿನಿಮಾದ ಕಥೆ ಇದೆ.

ದೀಪಕ್‌ ಶಿವದಾಸನಿ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ ಜತೆಗೆ ರತಿ ಅಗ್ನಿಹೋತ್ರಿ, ಸಾಹಿಲ್, ಅದಿತ್ಯಾ ಶ್ರೀವಾತ್ಸವ ನಟಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ಈ ಚಿತ್ರದ ಅಕ್ಟೋಬರ್ 6 ರಂದು ಬೆಳ್ಳಿತೆರೆಯ ಮೇಲೆ ಬರಲಿದೆ.

English summary
Actress Lakshmi Rai starrer 'Julie 2' movie trailer is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada