For Quick Alerts
  ALLOW NOTIFICATIONS  
  For Daily Alerts

  'ಚಾಂದನಿ' ಶ್ರೀದೇವಿಯ ಕಟ್ಟಕಡೆಯ ಎರಡು ಫೋಟೋಗಳಿವು

  By Harshitha
  |

  ಒಂದು ಕಾಲದಲ್ಲಿ ಸಿನಿ ಪ್ರಿಯರ ಹೃದಯದ ಅರಸಿಯಾಗಿ ಮೆರೆದವರು 'ಸುರಸುಂದರಿ' ಶ್ರೀದೇವಿ. ಆಕೆಯ ಕೆಣಕುವ ಕಣ್ಣೋಟ, ಮೋಹಕ ಮೈಮಾಟಕ್ಕೆ ಮನಸೋಲದವರೇ ಇರಲಿಲ್ಲ.

  ವಯಸ್ಸು ಐವತ್ತು ದಾಟಿದ್ದರೂ, 'ಸೌಂದರ್ಯದ ಸಿರಿದೇವಿ' ಆಗಿಯೇ ಕಂಗೊಳಿಸುತ್ತಿದ್ದ ನಟಿ ಶ್ರೀದೇವಿ ಇಂದು ನೆನಪು ಮಾತ್ರ. 'ಅತಿಲೋಕ ಸುಂದರಿ' ಎಂದೇ ಕರೆಯಿಸಿಕೊಳ್ಳುತ್ತಿದ್ದ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

  ದುಬೈ ಹೋಟೆಲ್ ನಲ್ಲಿನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದು, ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರುವುದು ಫೋರೆನ್ಸಿಕ್ ವರದಿಯಲ್ಲಿ ಸ್ಪಷ್ಟವಾಗಿದೆ.

  ಮುಖದಲ್ಲಿ ಸುಕ್ಕು ಇಲ್ಲದೆ ತುಂಬಿದ ಕೆನ್ನೆಗಳಿಂದ ಸದಾ ಸುಂದರವಾಗಿ ಕಾಣಬಯಸಿದ್ದ ಶ್ರೀದೇವಿಯ ಕಟ್ಟಕಡೆಯ ಎರಡು ಫೋಟೋಗಳಿವು.

  ದುಬೈನಲ್ಲಿ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಮುಗಿದ ಬಳಿಕ ಒಂದು ಫೋಟೋ ಕ್ಲಿಕ್ ಆಗಿದ್ರೆ, ಮುಂಬೈನಲ್ಲಿ ಶ್ರೀದೇವಿಯ ಅಂತಿಮ ಯಾತ್ರೆ ಆರಂಭ ಆಗುವ ಮುನ್ನ ಮತ್ತೊಂದು ಫೋಟೋ ಕ್ಲಿಕ್ ಆಗಿದೆ.

  ಸೌಂದರ್ಯ ಪ್ರಜ್ಞೆ ಹೊಂದಿದ್ದ ಶ್ರೀದೇವಿ ಪಾರ್ಥೀವ ಶರೀರಕ್ಕೆ ಮೇಕಪ್ ಮಾಡಲಾಗಿದೆ. ಶ್ರೀದೇವಿಯ ಇಚ್ಛಾನುಸಾರ ಅವರ ಪಾರ್ಥೀವ ಶರೀರಕ್ಕೆ ಗೋಲ್ಡನ್ ಬಾರ್ಡರ್ ಇರುವ ಕಾಂಚೀವರಂ ನ ಕೆಂಪು ಸೀರೆಯುಡಿಸಲಾಗಿದೆ. ಮುತ್ತೈದೆಯಾಗಿ ಸಾವನ್ನಪ್ಪಿದ ಶ್ರೀದೇವಿ ಪಾರ್ಥೀವ ಶರೀರಕ್ಕೆ ಕರಿಮಣಿ ಮಾಂಗಲ್ಯ ಸರದ ಜೊತೆಗೆ ಚಿನ್ನಾಭರಣ ಕೂಡ ತೊಡಿಸಲಾಗಿದೆ.

  ಶ್ರೀದೇವಿಗೆ ಬಿಳಿ ಬಣ್ಣದ ಹೂ ಅಂದ್ರೆ ತುಂಬಾ ಇಷ್ಟ. ಹೀಗಾಗಿ, ಪಾರ್ಥೀವ ಶರೀರಕ್ಕೆ ಮಲ್ಲಿಗೆ ಹೂ ಕೂಡ ಮುಡಿಸಲಾಗಿದೆ.

  'ಊರು ಉಪಕಾರ ಅರಿಯದು, ಹೆಣ ಸಿಂಗಾರ ಅರಿಯದು' ಎಂಬ ಗಾದೆ ಮಾತಿದೆ. ಆದ್ರೆ, ತಮ್ಮ ಅಂತ್ಯಕ್ರಿಯೆ ಹಾಗೂ ಅಂತಿಮ ಯಾತ್ರೆ ಹೇಗೆ ಇರಬೇಕು ಅಂತ ಶ್ರೀದೇವಿ ಬಯಸಿದ್ರೋ, ಅದನ್ನ ಕಪೂರ್ ಕುಟುಂಬ ತುಂಬಾ ಕಾಳಜಿ ವಹಿಸಿ ಈಡೇರಿಸಿದೆ.

  ಶ್ರೀದೇವಿಯ ಸುಂದರ ವದನವನ್ನ ಇಷ್ಟು ದಿನ ಕಣ್ತುಂಬಿಕೊಂಡವರಿಗೆ, ಕಟ್ಟಕಡೆಯ ಈ ಫೋಟೋಗಳು ಕಣ್ಣಲ್ಲಿ ನೀರು ತರಿಸದೇ ಇರದು.

  'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು 'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು

  ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

  ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

  English summary
  Take a look at the last photos of Bollywood Actress Sridevi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X