For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕನ ಮನೆ 14 ಕೋಟಿಗೆ ಸೇಲ್.!

  By Bharath Kumar
  |

  ಭಾರತ ಚಿತ್ರರಂಗದ ಸುಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರ ಮನೆ ಮಾರಟವಾಗ್ತಿದೆ. ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದಲ್ಲಿರುವ ಕಿಶೋರ್ ಕುಮಾರ್ ಅವರ ಮನೆಯನ್ನ ಪುತ್ರ ಅಮಿತ್ ಕುಮಾರ್ ಮಾರಾಟ ಮಾಡ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  ಮುಂಬೈ ಮೂಲದ ಬಿಲ್ಡರ್ ಅಭಯ್ ಸಿಂಗ್ ಅವರ ಕಿಶೋರ್ ಕುಮಾರ್ ಮನೆಯನ್ನ ಖರೀದಿಸಲು ಮುಂದಾಗಿದ್ದು, ಸುಮಾರು ಸುಮಾರು 14 ಕೋಟಿ ರೂಪಾಯಿ ಹಣ ನೀಡುತ್ತಿದ್ದಾರಂತೆ.

  ಯುಗ ಯುಗಗಳೇ ಕಳೆದರು ಈ 'ಕಿಶೋರ' ಅಜರಾಮರಯುಗ ಯುಗಗಳೇ ಕಳೆದರು ಈ 'ಕಿಶೋರ' ಅಜರಾಮರ

  ಈ ಬಗ್ಗೆ ಬೇಸರಗೊಂಡಿರುವ ಕಿಶೋರ್ ಕುಮಾರ್ ಅಭಿಮಾನಿಗಳು ''ಈ ಕೂಡಲೇ ಸರ್ಕಾರ ಈ ಮನೆಯನ್ನ ವಶಪಡಿಸಿಕೊಂಡು, ಆ ಸ್ಥಳದಲ್ಲಿ ಕಿಶೋರ್ ಕುಮಾರ್ ಅವರ ಸ್ಮರಣಾರ್ಥವಾಗಿ ಮ್ಯೂಸಿಯಂ ಸ್ಥಾಪಿಸಬೇಕು'' ಎಂದು ಆಗ್ರಹಿಸುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಕಿಶೋರ್ ಕುಮಾರ್ ಅವರಿಗೆ ದೇವಾಲಯ ನಿರ್ಮಿಸಿರುವ ಅವರ ಅಭಿಮಾನಿ ಸುನೀಲ್ ಬಹಮಾನಿಯಾ ಈ ಬಗ್ಗೆ ಬೇಡಿಕೆ ಇಟ್ಟಿದ್ದಾರೆ.

  ಕಿಶೋರ್ ಕುಮಾರ್ ಅವರಿಗೆ ಇಬ್ಬರು ಸಹೋದರರಿದ್ದು, ಅವರು ಕೂಡ ಇದೇ ಮನೆಯಲ್ಲಿ ಬಾಲ್ಯವನ್ನ ಕಳೆದಿದ್ದರು. 7,200 ಚದುರ ಅಡಿ ವಿಸ್ತೀರ್ಣದಲ್ಲಿದ್ದ ಈ ಬಂಗಲೆ 'ಗಂಗೂಲಿ ಹೌಸ್' ಮತ್ತು 'ಗೌರಿ ಕಂಜಾ' ಎಂದೇ ಖ್ಯಾತಿಯಾಗಿತ್ತು.

  ಕಿಶೋರ್ ಕುಮಾರ್ ಅವರ ತಮ್ಮ ವೃತ್ತಿ ಜೀವನಕ್ಕಾಗಿ ಮುಂಬೈಗೆ ತೆರೆಳುವ ಮುನ್ನ ಇದೇ ಮನೆಯಲ್ಲಿ ವಾಸವಾಗಿದ್ದರು. ಹೀಗಾಗಿ, ಈ ಮನೆಯ ಮೇಲೆ ಕಿಶೋರ್ ಕುಮಾರ್ ಅವರಿಗೆ ಬಹಳ ಸೆಂಟಿಮೆಂಟ್ ಇತ್ತು.

  English summary
  The buzz over impending sale of ancestral home of legendary singer-actor-director Kishore Kumar in district headquarters town of Khandwa in Madhya Pradesh has left his fans shattered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X