Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲೈಗರ್ ಚಿತ್ರದಲ್ಲಿ ರಿವೀಲ್ ಆಯ್ತು ಮೈಕ್ ಟೈಸನ್ ಲುಕ್
ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಲೈಗರ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ವಿಜಯ್ ದೇವರಕೊಂಡ ಸದ್ಯ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು, ಅದರಲ್ಲಿ ಒಂದು ಕಿಂಗ್ ಆಫ್ ದಿ ರಿಂಗ್, ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಲೈಗರ್ ಸಿನಿಮಾದಲ್ಲಿ ಒಂದು ಗೆಸ್ಟ್ ರೋಲ್ ಪ್ಲೇ ಮಾಡುತ್ತಿರೋದು. ಪ್ರಥಮ ಬಾರಿಗೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋ ಟೈಸನ್ ಪಾತ್ರ ಚಿಕ್ಕದ್ದೇ ಆದರೂ ಅದರ ತೂಕ ತುಂಬಾ ಹೆಚ್ಚಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಮೈಕ್ ಟೈಸನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿವೀಲ್ ಮಾಡಿದೆ.
ಲೈಗರ್ ಚಿತ್ರತಂಡ ಆರಂಭವಾದಾಗಿನಿಂದಲೂ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದೆ. ಹಾಗೇ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಕೂಡ ಆಗಿರೋದರಿಂದ ನಿರೀಕ್ಷೆ ಇನ್ನೂ ಹೆಚ್ಚಿದೆ. ಜೊತೆಗೆ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಗಣವೇ ಇದ್ದು ಮೈಕ್ ಟೈಸನ್ ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರೋದು ವಿಶೇಷ. ದೀಪಾವಳಿ ಸಂಭ್ರಮದಲ್ಲಿ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಟೈಸನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೈನಲ್ಲಿ ಬೆಂಕಿ ಚೆಂಡು, ಕಪ್ಪು ಸೂಟ್ ಧರಿಸಿಕೊಂಡಿರುವ ಮೈಕ್ ಟೈಸನ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಬಾಕ್ಸಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮತ್ತು ಹೆಸರು ಸಂಪಾದಿಸಿರುವ ಮೈಕ್ ಟೈಸನ್ ಲೈಗರ್ ಚಿತ್ರದ ಕ್ಲೈಮ್ಯಾಕ್ಸ್ ಸೀನ್‌ನಲ್ಲಷ್ಟೆ ಕಾಣಿಸಿಕೊಳ್ಳಲಿದ್ದಾರೆ. ಒಂದೆರೆಡು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ಮೈಕ್ ಟೈಸನ್ ದೊಡ್ಡ ಮೊತ್ತವನ್ನೇ ಜೇಬಿಗೇರಿಸಿಕೊಂಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ನಟಿಸಲು ಒಂದು ದೊಡ್ಡ ಕಂಡಿಷನ್ ಅನ್ನೆ ಮೈಕ್ ಟೈಸನ್ ಹಾಕಿದ್ದರು. ನಾನು ಸಿನಿಮಾದಲ್ಲಿ ನಟಿಸಬೇಕು ಎಂದರೇ ಸಿನಿಮಾದಲ್ಲಿ ನಾನು ನಟಿಸುತ್ತೇನೆ. ಆದರೆ ಚಿತ್ರೀಕರಣ ಅಮೇರಿಕಾದಲ್ಲೆ ನಡೆಯಬೇಕು ಎಂದಿದ್ದರು. ಇದಕ್ಕೆ ಒಪ್ಪಿದ ಚಿತ್ರತಂಡ ಎಲ್ಲಾ ತಯಾರಿಯನ್ನೂ ಕೂಡ ನಡೆಸಿಕೊಂಡಿತ್ತು. ಅಲ್ಲದೇ ಮೈಕ್ ಟೈಸನ್ ಚಿತ್ರದಲ್ಲಿ ನಟಿಸುವ ಬಗ್ಗೆ ಮಾಹಿತಿಯನ್ನು ಕೂಡ ಹೊರ ಬಿಟ್ಟಿತ್ತು. ಮೈಕ್ ಟೈಸನ್ ಷರತ್ತಿನಂತೆಯೇ ಶೂಟಿಂಗ್ ಮುಗಿಸಿದ್ದಾರೆ.
ಈ ಪೋಸ್ಟರ್ ಬಗ್ಗೆ ಸಿನಿಮಾದ ನಾಯಕ ನಟ ವಿಜಯ್ ದೇವರಕೊಂಡ ಕೂಡ ಟ್ವೀಟ್ ಮಾಡಿ ತಿಳಿಸಿದ್ದು, ಮೈಕ್ ಟೈಸನ್ ನಮ್ಮ ಸಿನಿಮಾದಲ್ಲಿ ನಟಿಸುತ್ತಿರೋದು ಹೆಮ್ಮೆ ಇದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ. ಮೈಕ್ ಟೈಸನ್ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ತೆಲುಗಿನ ಜೊತೆಗೆ ಭಾರತದ ಇತರೆ ಪ್ರಮುಖ ಭಾಷೆಗಳಲ್ಲೂ ತೆರೆ ಕಾಣಲಿದೆ. ವಿಜಯ್ ದೇವರಕೊಂಡ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಪೂರಿ ಜಗನ್ನಾಥ್, ಚಾರ್ಮಿ ಮತ್ತು ಧರ್ಮಾ ಪ್ರೋಡಕ್ಷನ್ಸ್ ನಿರ್ಮಿಸುತ್ತಿರುವ ಚಿತ್ರ ಇದು. ಲೈಗರ್ ಸಿನಿಮಾಗೆ ಮೊದಲು ಫೈಟರ್ ಎಂದು ಟೈಟಲ್ ಇಡಲಾಗಿತ್ತು. ಆದರೆ ಹೃತಿಕ್ ರೋಷನ್ ಅಭಿನಯದ ಚಿತ್ರಕ್ಕೆ ಈ ಹೆಸರನ್ನು ತೆಗೆದುಕೊಂಡ ಕಾರಣ ಪೂರಿ ಜಗನ್ನಾಥ್ ಈ ಸಿನಿಮಾಗೆ ಲೈಗರ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು.

ಈ ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲೂ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್ ಶೆಟ್ಟಿ ಸಹ ನಟಿಸಲಿದ್ದಾರಂತೆ. ಡಾನ್ ಪಾತ್ರದಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅವರದ್ದು ಕೇವಲ 15 ನಿಮಿಷಗಳು ಬಂದು ಹೋಗುವ ಪಾತ್ರವೆಂದು ಹೇಳಲಾಗುತ್ತಿದೆ. ಬಾಕ್ಸಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಪ್ರತ್ಯೇಕ ಸೆಟ್ ನಿರ್ಮಿಸಲಾಗಿತ್ತು, ಇದರಲ್ಲಿ ಬಾಕ್ಸಿಂಗ್ ಫೈಟ್ ನಡೆಸಿ ಚಿತ್ರೀಕರಣ ಕೂಡ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.