For Quick Alerts
  ALLOW NOTIFICATIONS  
  For Daily Alerts

  'ಇಂಡಿಯಾ ಲಾಕ್‌ಡೌನ್' ಚಿತ್ರೀಕರಣ ಮುಗಿಸಿದ ಮಧುರ್ ಭಂಡಾರ್ಕರ್

  |

  ನಿರ್ದೇಶಕ ಮಧುರ್ ಭಂಡಾರ್ಕರ್ ಆರಂಭಿಸಿದ್ದ 'ಇಂಡಿಯಾ ಲಾಕ್‌ಡೌನ್' ಸಿನಿಮಾ ಚಿತ್ರೀಕರಣ ಮುಗಿಸಿದೆ. ಕೊರೊನಾ ವೈರಸ್ ಹಿನ್ನೆಲೆ ದೇಶದಲ್ಲಿ ಉಂಟಾದ ಸಮಸ್ಯೆ, ಬೆಳವಣಿಗೆ, ಅದರಿಂದ ಆದ ಪರಿಣಾಮಗಳನ್ನು ಪ್ರಮುಖ ವಿಷಯವನ್ನಾಗಿಸಿ ಸಿನಿಮಾ ತಯಾರಾಗಿದೆ.

  ಪ್ರತೀಕ್ ಬಬ್ಬರ್, ಸಾಯಿ ತಮ್ಹಂಕರ್, ಶ್ವೇತಾ ಬಸು ಪ್ರಸಾದ್, ಪ್ರಕಾಶ್ ಬೆಳವಾಡಿ ಮತ್ತು ಅಹಾನಾ ಕುಮ್ರಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

  ಐಟಿ ದಾಳಿ ಬಳಿಕ ಚಿತ್ರೀಕರಣ ಆರಂಭಿಸಿದ ಅನುರಾಗ್ ಕಶ್ಯಪ್-ತಾಪ್ಸಿ

  ಜನವರಿ 23 ರಿಂದ ಮುಂಬೈನಲ್ಲಿ ಇಂಡಿಯಾ ಲಾಕ್‌ಡೌನ್ ಚಿತ್ರೀಕರಣಾರಂಭವಾಗಿತ್ತು. ಮುಂಬೈ ಮತ್ತು ಪುಣೆಯಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆದಿತ್ತು.

  ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಬೇಕಿದೆ. ಶೂಟಿಂಗ್ ಒಳ್ಳೆಯ ಅನುಭವ ತಂದಿದೆ'' ಎಂದು ನಿರ್ದೇಶಕ ಮಧುರ್ ಭಂಡಾರ್ಕರ್ ತಿಳಿಸಿದ್ದಾರೆ.

  ಅಂದ್ಹಾಗೆ, ಈ ಚಿತ್ರವನ್ನು ಭಂಡಾರ್ಕರ್ ಎಂಟರ್ಟೈನ್ಮೆಂಟ್ ಮತ್ತು ಪಿಜೆ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿದೆ. ಜರಿನ್ ಶಿಹಾಬ್, ಆಯೆಷಾ ಐಮಾನ್, ಹೃಷಿತಾ ಭಟ್, ಸಾನಂದ್ ವರ್ಮಾ ಮತ್ತು ಸಾತ್ವಿಕ್ ಭಾಟಿಯಾ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ಭಂಡಾರ್ಕರ್ ಅವರು 2017ರಲ್ಲಿ ಕೊನೆಯದಾಗಿ 'ಇಂದೂ ಸರ್ಕಾರ್' ಚಿತ್ರ ನಿರ್ದೇಶಿಸಿದ್ದರು. ಅದಕ್ಕೂ ಮುಂಚೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ "ಚಾಂದನಿ ಬಾರ್", "ಪುಟ 3", "ಟ್ರಾಫಿಕ್ ಸಿಗ್ನಲ್" ಮತ್ತು "ಫ್ಯಾಶನ್" ಅನ್ನು ನಿರ್ದೇಶಿಸಿದ್ದಾರೆ.

  English summary
  Madhur Bhandarkar completes shoot of his next venture India Lockdown. Inspired by true events. Produced by Bhandarkar Entertainment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X