twitter
    For Quick Alerts
    ALLOW NOTIFICATIONS  
    For Daily Alerts

    ರಾಮಾಯಣಕ್ಕೆ ಅಪಮಾನ: 'ಆದಿಪುರುಷ್' ತಂಡಕ್ಕೆ ಗೃಹ ಸಚಿವ ಎಚ್ಚರಿಕೆ

    |

    'ಆದಿಪುರುಷ್' ಟೀಸರ್ ಬಿಡುಗಡೆ ಮಾಡಿದ ಬೆನ್ನಲ್ಲೆ ಚಿತ್ರತಂಡ ತೀವ್ರ ಟ್ರೋಲಿಂಗ್ ಎದುರಿಸುತ್ತಿದೆ. ಕಳಪೆ ಮಟ್ಟದ ವಿಎಫ್‌ಎಕ್ಸ್‌ನಿಂದಾಗಿ ವಿಪರೀತ ಟ್ರೋಲ್ ಆಗಿರುವ ಜೊತೆಗೆ ರಾಮಾಯಣದ ಪಾತ್ರಗಳನ್ನು ತಮಗೆ ತೋಚಿದಂತೆ ಪ್ರೆಸೆಂಟ್ ಮಾಡಿರುವುದು ಸಹ ಆಕ್ರೋಶಕ್ಕೆ ಗುರಿಯಾಗಿದೆ.

    ಕೆಲವು ಹಿಂದು ಸಂಘಟನೆಗಳು ಸಹ 'ಆದಿಪುರುಷ್' ಟೀಸರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಈಗ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ 'ಆದಿಪುರುಷ್' ಟೀಸರ್ ಬಗ್ಗೆ ಕಣ್ಣು ಕೆಂಪಗೆ ಮಾಡಿಕೊಂಡಿದ್ದು, ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಬ್ಯಾನ್ ಆದಿಪುರುಷ್.. ಬಾಯ್‌ಕಾಟ್ ಆದಿಪುರುಷ್ ಟ್ರೆಂಡ್: ಪ್ರಭಾಸ್‌ಗೆ ಮತ್ತೊಂದು ಸೋಲಿನ ಭೀತಿ!ಬ್ಯಾನ್ ಆದಿಪುರುಷ್.. ಬಾಯ್‌ಕಾಟ್ ಆದಿಪುರುಷ್ ಟ್ರೆಂಡ್: ಪ್ರಭಾಸ್‌ಗೆ ಮತ್ತೊಂದು ಸೋಲಿನ ಭೀತಿ!

    'ಆದಿಪುರುಷ್' ಸಿನಿಮಾದ ಟೀಸರ್‌ನಲ್ಲಿ ಹನುಮಂತನ ಪಾತ್ರಧಾರಿಗೆ ಲೆದರ್‌ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನ್ಯಕ್ಕೂ ಸಹ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಇದು ಹನುಮಂತ ದೇವರಿಗೆ ಮಾಡಿದ ಅಪಮಾನ, ಹಿಂದು ಧರ್ಮಕ್ಕೆ ಮಾಡಿದ ಅಪಮಾನ ಎಂದಿದ್ದಾರೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ.

    Madhya Pradesh Home Minister Warns Adipurush Movie Team

    ''ಈ ಬಗ್ಗೆ ನಾನು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ಆ ದೃಶ್ಯಗಳನ್ನು ತೆಗೆದು ಹಾಕುವಂತೆ ಮನವಿ ಮಾಡುತ್ತೇನೆ. ಒಂದೊಮ್ಮೆ ಅವರು ಆ ದೃಶ್ಯಗಳನ್ನು ತೆಗೆದು ಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದಾರೆ.

    'ಆದಿಪುರುಷ್' ಸಿನಿಮಾದ ಟೀಸರ್ ಈಗಾಗಲೇ ತೀವ್ರವಾಗಿ ಟ್ರೋಲ್ ಆಗಿದೆ. ಸಿನಿಮಾದಲ್ಲಿ ಬಳಸಲಾಗಿರುವ ಕಳಪೆ ದರ್ಜೆಯ ವಿಎಎಫ್ಎಕ್ಸ್‌ ಅನ್ನು ಪ್ರಭಾಸ್ ಅಭಿಮಾನಿಗಳು ಸೇರಿದಂತೆ ಹಲವರು ತೀವ್ರವಾಗಿ ಟೀಕಿಸಿದ್ದಾರೆ. ಇದೀಗ ಮಧ್ಯ ಪ್ರದೇಶ ಗೃಹ ಸಚಿವರು ಸಹ ಸಿನಿಮಾದ ದೃಶ್ಯಗಳನ್ನು ಬದಲಾಯಿಸುವಂತೆ ಎಚ್ಚರಿಕೆ ನೀಡಿದ್ದಾರೆ.

    ಮಧ್ಯ ಪ್ರದೇಶ ಗೃಹ ಸಚಿವರು ಮಾತ್ರವೇ ಅಲ್ಲದೆ, ಕರ್ನಾಟಕದ ಬಿಜೆಪಿ ನಾಯಕಿ ಹಾಗೂ ನಟಿ ಮಾಳವಿಕಾ ಅವಿನಾಶ್ ಸಹ 'ಆದಿಪುರುಷ್' ಸಿನಿಮಾದ ಟೀಸರ್ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾವಣನನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಸಿನಿಮಾದ ನಿರ್ದೇಶಕರು ಮಿನಿಮಮ್ ಸಂಶೋಧನೆಯನ್ನು ಸಹ ರಾಮಾಯಣದ ಬಗ್ಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಟ್ರೋಲಿಂಗ್‌ಗೆ ಗುರಿಯಾಗಿರುವ ಚಿತ್ರತಂಡ, ಈಗ ವಿಎಫ್‌ಎಕ್ಸ್‌ ಅನ್ನು ಬದಲಾಯಿಸುತ್ತದೆಯೇ ನೋಡಬೇಕಿದೆ. ಈಗಾಗಲೇ ನೂರಾರು ಕೋಟಿ ರುಪಾಯಿಯನ್ನು ಖರ್ಚು ಮಾಡಲಾಗಿದೆ. ಕೆಲವು ಸುದ್ದಿಗಳ ಪ್ರಕಾರ ಸಿನಿಮಾಕ್ಕೆ ವಿಎಫ್‌ಎಕ್ಸ್‌ಗೆ ಮಾತ್ರವೇ ಸುಮಾರು 300 ಕೋಟಿ ರುಪಾಯಿ ಖರ್ಚಾಗಿದೆಯಂತೆ. ಈಗ ವಿಎಫ್‌ಎಕ್ಸ್‌ ಬಗ್ಗೆ ಭಾರಿ ಅಸಮಾಧಾನ ವ್ಯಕ್ತವಾಗಿರುವ ಕಾರಣ ಮತ್ತೆ ವಿಎಫ್‌ಎಕ್ಸ್‌ ಅನ್ನು ಮಾಡುತ್ತಾರೆಯೇ? ಅಥವಾ ಈಗ ಇರುವಂತೆಯೇ ಸಿನಿಮಾವನ್ನು ಬಿಡುಗಡೆ ಮಾಡಿ ಇನ್ನಷ್ಟು ಹಾಸ್ಯಕ್ಕೆ ಗುರಿಯಾಗುತ್ತಾರೆಯೇ ನೋಡಬೇಕಿದೆ.

    'ಆದಿಪುರುಷ್' ಸಿನಿಮಾವು ರಾಮಾಯಣದ ಕತೆಯನ್ನು ಆಧರಿಸಿದ್ದು, ಪ್ರಭಾಸ್ ರಾಮನ ಪಾತ್ರದಲ್ಲಿಯೂ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.

    English summary
    Madhya Pradesh home minister Narottam Misra warns Adipurush movie team. He said movie team misrepresented many characters of Ramayana.
    Tuesday, October 4, 2022, 22:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X