twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ತೆರೆಯಲು ಮಹಾ ಸರ್ಕಾರ ಗ್ರೀನ್ ಸಿಗ್ನಲ್: ಸಾಲು-ಸಾಲು ಸಿನಿಮಾ ಬಿಡುಗಡೆ ಘೋಷಣೆ

    |

    ಕೊರೊನಾ ನಂತರ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ದವು, ಆದರೆ ಬಹುದಿನಗಳ ಕಾಲ ಸಿನಿಮಾ ಚಿತ್ರಮಂದಿರಗಳು ಬಂದ್ ಆಗಿದ್ದಿದ್ದು ಮಹಾರಾಷ್ಟ್ರ ಮತ್ತು ಕೇರಳ ಹಾಗೂ ದೆಹಲಿಗಳಲ್ಲಿ.

    ಭಾರತದ ಮನೊರಂಜನಾ ರಾಜಧಾನಿ ಎಂದೇ ಕರೆಯಲಾಗುವ ಮುಂಬೈನಲ್ಲಿ ಬಹುತಿಂಗಳ ಕಾಲ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿದ್ದವು. ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿರುವ ಬಾಲಿವುಡ್‌ ಇದರಿಂದಾಗಿ ಭಾರಿ ಹಿನ್ನಡೆ ಅನುಭವಿಸಿತು.

    ಇದೀಗ ಮಹಾರಾಷ್ಟ್ರದಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗ್ರೀನ್ ಸಿಗ್ನಲ್ ನೀಡಿದ್ದು ಬಾಲಿವುಡ್ ಸ್ಟಾರ್ ನಟರು ಹಾಗೂ ಸಿನಿಮಾ ನಿರ್ಮಾಪಕರು ಉದ್ಧವ್ ಠಾಕ್ರೆಗೆ ಧನ್ಯವಾದಗಳನ್ನು ಹೇಳಿದ್ದಾರೆ.

     Maharashtra Government Allows To Open Theaters From October 22

    ಅಕ್ಟೋಬರ್ 22 ರಿಂದ ಮಹಾರಾಷ್ಟ್ರದಾದ್ಯಂತ ಚಿತ್ರಮಂದಿರಗಳು ಪುನಃ ತೆರೆಯಲಿವೆ. ಚಿತ್ರಮಂದಿರಗಳು, ರಂಗಮಂದಿರಗಳು ಕಾರ್ಯನಿರ್ವಹಿಸಲು ಮಾರ್ಗಸೂಚಿಯನ್ನು ಸರ್ಕಾರ ಶೀಘ್ರದಲ್ಲಿಯೇ ಹೊರಡಿಸಲಿದೆ.

    ಪೆನ್ ಸ್ಟುಡಿಯೋಸ್‌ನ ಡಾ.ಜಯಂತಿಲಾಲ್ ಗಡ್, ನಿರ್ದೇಶಕ ರೋಹಿತ್ ಶೆಟ್ಟಿ ನೇತೃತ್ವದ ಚಿತ್ರಮಂದಿರ ಮಾಲೀಕರು, ವಿತರಕರ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ಮಾಡಿದ ಬಳಿಕ ಸಿಎಂ ಉದ್ಧವ್ ಠಾಕ್ರೆ ಚಿತ್ರಮಂದಿರಗಳನ್ನು ತೆರೆಯುವ ನಿರ್ಣಯ ತೆಗೆದುಕೊಂಡಿದ್ದಾರೆ.

    ಸಮಿತಿಯಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನ ಮುಖ್ಯಸ್ಥ ಕಮಲ್ ಗಾಯ್‌ಚಂದಾನಿ, ಐನಾಕ್ಸ್ ಚಿತ್ರಮಂದಿರ ಚೇನ್‌ನ ವ್ಯವಸ್ಥಾಪಕ ಅಲೋಕ್ ಟಂಡನ್, ಸಿನೆಪೊಲೀಸ್‌ನ ಸಿಇಓ ದೇವಾಂಗ್ ಸಂಪತ್, ಕಾರ್ನಿವಲ್ ಸಿನಿಮಾಸ್‌ನ ಕುನಾಲ್ ಇನ್ನೂ ಹಲವು ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ದೇಶದಲ್ಲಿಯೇ ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ಗಳು ಕಾರ್ಯನಿರ್ವಹಿಸುತ್ತಿರುವುದು ಮಹಾರಾಷ್ಟ್ರದಲ್ಲಿ, ಮುಂಬೈನಲ್ಲಿ ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಮಲ್ಟಿಫ್ಲೆಕ್ಸ್‌ಗಳವರು ಹೆಚ್ಚು ಕಾಳಜಿ ವಹಿಸಿ ಸಿಎಂ ಬಳಿ ಮನವಿ ಮಾಡಿದ್ದು, ಮನವಿಗೆ ಸಿಎಂ ಉದ್ಧವ್ ಠಾಕ್ರೆ ಸ್ಪಂದಿಸಿದ್ದಾರೆ.

    ಚಿತ್ರಮಂದಿರ ಮರಳಿ ತೆರೆಯುವ ಘೋಷಣೆ ಆಗುತ್ತಿದ್ದಂತೆ ರೋಹಿತ್ ಶೆಟ್ಟಿ ನಿರ್ದೇಶಿಸಿ ಅಕ್ಷಯ್ ಕುಮಾರ್ ನಟಿಸಿರುವ 'ಸೂರ್ಯವಂಶಂ' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಸಿನಿಮಾವು ಅಕ್ಟೋಬರ್ 22 ರಂದು ಬಿಡುಗಡೆ ಆಗಲಿದೆ. ಸಿನಿಮಾದ ವಿಶೇಷ ಪಾತ್ರದಲ್ಲಿ ರಣ್ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಸಹ ನಟಿಸಿದ್ದಾರೆ.

    ಕ್ರಿಕೆಟರ್ ಕಪಿಲ್ ದೇವ್ ಜೀವನ ಆಧರಿಸಿದ '83' ಸಿನಿಮಾ ಸಹ ಬಿಡುಗಡೆ ಘೋಷಿಸಿದ್ದು, ಸಿನಿಮಾವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಯಶ್ ರಾಜ್ ಫಿಲಮ್ಸ್ ಸಹ ಹಲವು ಸಿನಿಮಾಗಳ ಬಿಡುಗಡೆಯನ್ನು ಘೋಷಿಸಿದ್ದಾರೆ.

    ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣವಾಗಿ ತೆರೆಯುತ್ತಿವೆ. ಕರ್ನಾಟಕದಲ್ಲಿ ಅಕ್ಟೋಬರ್ 1 ರಿಂದ ಹಲವು ಜಿಲ್ಲೆಗಳಲ್ಲಿ ಚಿತ್ರಮಂದಿರ ಪೂರ್ಣವಾಗಿ ತೆರೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಸೆಪ್ಟೆಂಬರ್ 27 ರಿಂದ ಚಿತ್ರಮಂದಿರಗಳು ಪೂರ್ಣವಾಗಿ ತೆರೆಯಲಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

    English summary
    Maharashtra government allows to open theaters from October 22. After the government order many Hindi movies announce their release date.
    Sunday, September 26, 2021, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X