Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಲೈಕಾ ಅರೋರಾ, ಅರ್ಜುನ್ ಕಪೂರ್ ಪ್ರೇಮಿಗಳ ದಿನ ಸ್ಪೆಷಲ್ ಸೆಲೆಬ್ರೆಷನ್!
ಪ್ರೇಮಿಗಳ ದಿನ ಬಂತು ಅಂದರೆ ಸಾಕು ಸಿನಿಮಾರಂಗದಲ್ಲಿ ಎಲ್ಲಾ ಪ್ರೇಮಿಗಳು ಸಂಭ್ರಮದಲ್ಲಿ ಮುಳುಗಿ ಬಿಡುತ್ತಾರೆ. ತಮ್ಮ ಪ್ರೇಮಿಯ ಜೊತೆಗೆ ಫೋಟೊ ಮತ್ತು ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗೆ ಈ ಬಾರಿಯೂ ಅನೇಕ ಮಂದಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪ್ರೇಮಿಗಳ ಜೊತೆಗಿನ ಪೊಟೋಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾರಂಗದಲ್ಲಿ ಪ್ರೇಮಿಗಳು ಅಂತ ಬಂದಾಗ ಬಾಲಿವುಡ್‌ನಲ್ಲಿ ಹೆಚ್ಚಿನ ತಾರಾ ಜೋಡಿಗಳು ಇದ್ದಾರೆ. ಹಾಗೆ ಬಾಲಿವುಡ್‌ನಲ್ಲಿ ಹಲವು ವಿಶೇಷ ಕಾರಣಗಳಿಗೆ ಹೆಸರು ಆಗಿರುವ ತಾರ ಜೋಡಿ ಅಂದರೆ ಅದು ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಜೋಡಿ. ಈ ಜೋಡಿ ಏನೇ ಮಾಡಿದ್ರು ಸುದ್ದಿ ಆಗತ್ತದೆ. ಯಾಕೆಂದರೆ ಅವರ ಪ್ರೇಮ ಪುರಾಣ ಹಿಂದಿನ ಕಥೆಯೇ ಬಲು ರೋಚಕ.
ಪತಿ
ಡಾರ್ಲಿಂಗ್
ಕೃಷ್ಣಗೆ
ಮಿಲನಾ
ನಾಗರಾಜ್
ಪ್ರೇಮಿಗಳ
ದಿನದಂದು
ಹೇಳಿದ್ದೇನು?
ಎಲ್ಲಾ
'ಲವ್
ಮಾಕ್ಟೇಲ್
2'
ಮಹಿಮೆ
ಈ ಬಾರಿ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಎಲ್ಲರ ಚಿತ್ತ ಮಲೈಕಾ ಮತ್ತು ಅರ್ಜುನ್ ಕಪೂರ್ ಕಡೆಗೆ ನೆಟ್ಟಿತ್ತು. ಈ ಬಾರಿ ಈ ಜೋಡಿ ಹೇಗೆ ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡುತ್ತದೆ ಎನ್ನುವ ಕುತೂಹಲ ಅವರ ಅಭಿಮಾನಿಗಳು ಮತ್ತು ಸಿನಿಮಾ ಮಂದಿಯಲ್ಲೂ ಮನೆ ಮಾಡಿತ್ತು. ಈ ಬಾರಿಯೂ ಇವರಿಗೆ ವಿಶೇಷ. ಮಲೈಕಾ ಬಗ್ಗೆ ಅರ್ಜುನ್ ಕಪೂರ್ ಏನಂತಾರೆ ಎನ್ನುವುದನ್ನು ಮುಂದೆ ಓದಿ...
ಅರ್ಜುನ್ ಕಪೂರ್ ನನ್ನವನು ಎಂದ ನಟಿ ಮಲೈಕಾ!
ಬಾಲಿವುಡ್‌ನ ಹೆಸರಾಂತ ಪ್ರಣಯ ಪಕ್ಷಿಗಳು ಅಂದರೆ ಅದು ನಟಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್. ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಈ ಜೋಡಿ ವಿಶೇಷವಾಗಿ ಕಾಣಿಸಿಕೊಂಡಿದೆ. ಅರ್ಜುನ್ ಕಪೂರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ನಟಿ ಮಲೈಕಾ "ನನ್ನವನು" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ಜೊತೆಗೆ ಹೃದಯದ ಚಿಹ್ನೆಯನ್ನು ಹಾಕಿದ್ದಾರೆ. ಹೆಚ್ಚೇನನ್ನೂ ಹೇಳುವ ಗೋಜಿಗೆ ಮೈಕಾ ಹೋಗಿಲ್ಲ. ಬದಲಿಗೆ ಒಂದು ಫೊಟೋ ಹಾಕಿ ಒಂದೇ ಪದದಲ್ಲಿ ತಮ್ಮ ಪ್ರಿಯಕರನ ಬಗ್ಗೆ, ಪ್ರೀತಿಯ ಹೇಳಿಕೊಂಡಿದ್ದಾರೆ.

ಅರ್ಜುನ್ ಬಾಳಿಗೆ ಮಲೈಕಾ ಸ್ಪೂರ್ತಿ ಅಂತೆ!
ಇನ್ನು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಅರ್ಜುನ್ ಕಪೂರ್ ಮಲೈಕಾ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿಲ್ಲ. ಬದಲಿಗೆ ಅವರು ಕೆಲವು ಮಾಧ್ಯಮಗಳ ಜೊತೆಗೆ ಮಲೈಕಾ ಬಗ್ಗೆ ಹಂಚಿಕೊಂಡಿದ್ದಾರೆ. "ನನ್ನ ಅತ್ಯಂತ ಕಷ್ಟದ ಸಮಯದಲ್ಲಿ ಮಲೈಕಾ ನನ್ನ ಜೊತೆಗೆ ನಿಂತಿದ್ದರು. ಮಲೈಕಾ ಯಾವಾಗಲು ನನಗಾಗಿ ಇರುತ್ತಾಳೆ." ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಮಲೈಕಾ, ಅರ್ಜುನ್ ಕಪೂರ್ ಈ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಲು ಯೋಜನ್ ಹಾಕಿಕೊಂಡಿದ್ದಾರಂತೆ.

ಮಲೈಕಾ, ಅರ್ಜುನ್ ಕಪೂರ್ ಬ್ರೇಕಪ್ ವಿಚಾರಕ್ಕೆ ಸುದ್ದಿಯಾಗಿದ್ದರು!
ಇನ್ನೂ ಈ ಜೋಡಿ ಇತ್ತೀಚೆಗೆ ಬ್ರೇಕಪ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಇಬ್ಬರು ಬ್ರೇಕಪ್ ಮಾಡಿಕೊಂಡು ದೂರ ಆಗಿದ್ದಾರೆ ಎನ್ನುವ ಸುದ್ದಿ ದೊಡ್ಡದಾಗಿ ಹಬ್ಬಿತ್ತು. ಮಲೈಕಾ ಮನೆ ಬಿಟ್ಟು ಹೊರ ಬರುತ್ತಿಲ್ಲ, ಅರ್ಜುನ್ ಕಪೂರ್ ಅವರನ್ನು ಭೇಟಿ ಆಗಿಲ್ಲ ಎನ್ನುವ ಸುದ್ದಿ ಹಬ್ಬಿದ್ದವು. ಆದರೆ ಈ ಗಾಸಿಪ್ ಸುದ್ದಿಗೆ ಮಲೈಕಾ ಮತ್ತು ಅರ್ಜುನ್ ಇಬ್ಬರೂ ಕೂಡ ಬ್ರೇಕ್ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಾವು ಜೊತೆಯಾಗೇ ಇರುವುದಾಗಿ ಹೇಳಿಕೊಂಡಿದ್ದರು.

ಟ್ರೋಲ್ ಆಗಿದ್ದ ಜೋಡಿ, ಈಗ ಮಾದರಿ ಪ್ರೇಮಿಗಳು!
ಇನ್ನು ಬಾಲಿವುಡ್‌ನಲ್ಲಿ ಹಲವರು ಮದುವೆ ಮುರಿದುಕೊಂಡು ವಿಚ್ಛೇದನ ಪಡೆಯುತ್ತಿದ್ದಾರೆ. ಇನ್ನೂ ಹಲವರು ಮದುವೆಗೆ ಮುನ್ನವೇ ಬ್ರೇಕಪ್ ಮಾಡಿಕೊಂಡು ದೂರಾಗುತ್ತಿದ್ದಾರೆ. ಆದರೆ ಇವರಿಗೆಲ್ಲಾ ಮಲೈಕಾ ಮತ್ತು ಅರ್ಜುನ್ ಕಪೂರ್ ಜೋಡಿ ಮಾದರಿ ಆಗುವ ಮಾರ್ಗದಲ್ಲಿ ಸಾಗುತ್ತಿದೆ. ವಯಸ್ಸಿನ ಅಂತರ ಸೇರಿದಂತೆ ಹಲವಾರು ಕಾರಣಗಳಿಗೆ ಈ ಜೋಡಿ ಟೀಕೆಗೆ ಗುರಿಯಾಗಿತ್ತು. ಅದರೆ ಈಗ ಅವರೇ ಬಾಲಿವುಡ್ ಆದರ್ಶ ಪ್ರೇಮಿಗಳು ಎನಿಸಿಕೊಂಡಿದ್ದಾರೆ.