For Quick Alerts
  ALLOW NOTIFICATIONS  
  For Daily Alerts

  ಮಲೈಕಾ ಅರೋರ ಉಡುಪಿನ ಬಗ್ಗೆ ಟ್ರೋಲ್: ನಾನು ಮೂರ್ಖಳಲ್ಲ ಎಂದ ನಟಿ!

  |

  ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಮಲೈಕಾ ಹೆಚ್ಚಾಗಿ ತಮ್ಮ ಫ್ಯಾಷನ್, ಸ್ಟೈಲ್ ಮತ್ತು ಅರ್ಜುನ್ ಕಪೂರ್ ವಿಚಾರದಲ್ಲಿಯೇ ಹೆಚ್ಚು ಸುದ್ದಿ ಆಗುತ್ತಾರೆ‌.

  ಬರಿ ಸುದ್ದಿ ಆಗುವುದು ಮಾತ್ರ ಅಲ್ಲಾ. ಮಲೈಕಾ ಸದಾ ಟ್ರೋಲ್‌ಗೂ ತುತ್ತಾಗುತ್ತಾರೆ. ಆದರೆ ಟ್ರೋಲ್ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಆದರೆ ಈ ಬಾರಿ ಟ್ರೋಲ್‌ಗಳಿಗೆ, ತನ್ನ ಉಡುಪುಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಮಲೈಕಾ ಅರೋರಾ ಸರಿಯಾಗೆ ಉತ್ತರ ಕೊಟ್ಟಿದ್ದಾರೆ.

  ಮಲೈಕಾ ಉತ್ತರಕ್ಕೆ ಟ್ರೋಲ್‌ಗಳೆಲ್ಲಾ ಸೈಲೆಂಟಾಗಿ ಸೈಡ್ ಗೆ ಹೋಗಿ ಬಿಟ್ಟಿವೆ. ಟ್ರೋಲ್‌ಗಳಿಗೆ ಉತ್ತರಿಸಿದ ನಟಿ " ಬಟ್ಟೆ ಹೇಗೆ ಧರಿಸಬೇಕು ಎಂದು ತಿಳಿಯದಷ್ಟು ದಡ್ಡಿ ನಾನಲ್ಲಾ ಎಂದಿದ್ದಾರೆ ".

  ಒಳ ಉಡುಪಿನ ವಿಚಾರದಲ್ಲಿ ಟ್ರೋಲ್ ಆಗುದ್ದ ಮಲೈಕಾ

  ಒಳ ಉಡುಪಿನ ವಿಚಾರದಲ್ಲಿ ಟ್ರೋಲ್ ಆಗುದ್ದ ಮಲೈಕಾ

  ಮಲೈಕಾ ಅರೋರ ಅವರು ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ಅದು ಅವರ ಉಡುಪಿನಿಂದಾಗಿ. ಮುಂಜಾನೆ ವಾಕ್ ಮಾಡುವಾಗ ಆಕೆ ಒಳ ಉಡುಪು ಧರಿಸಿಲ್ಲಾ ಎಂದು ಟ್ರೋಲ್ ಆಗಿದ್ದರು. ಒಂದಷ್ಟು ಫೋಟೋಗಳು ಕೂಡ ವೈರಲ್ ಆಗಿದ್ದವು. ಅಷ್ಟೇ ಯಾಕೆ ಇದೊಂದು ದೊಡ್ಡ ಸುದ್ದಿ ಎನ್ನುವಂತೆ ಹತ್ತಾರು ಮಾಧ್ಯಮಗಳು ಮಲೈಕಾ ಉಡುಪಿನ ಬಗ್ಗೆ ಉದ್ದುದ್ದ ಸುದ್ದಿ ಬರೆದಿದ್ದರು. ಅದಕ್ಕೆಲ್ಲಾ ಮಲೈಕಾ ಈಗ ಉತ್ತರ ನೀಡಿದ್ದಾರೆ.

  ದರಿಸುವ ಬಟ್ಟೆ ಬಗ್ಗೆ ಅರಿವಿರದಷ್ಟು ಮೂರ್ಖತನ ನನಗಿಲ್ಲ: ಮಲೈಕಾ

  ದರಿಸುವ ಬಟ್ಟೆ ಬಗ್ಗೆ ಅರಿವಿರದಷ್ಟು ಮೂರ್ಖತನ ನನಗಿಲ್ಲ: ಮಲೈಕಾ

  "ನಾನು ತೊಡುವ ಉಡುಪುಗಳು ನನಗೆ ಆರಾಮದಾಯಕವಾಗಿದೆ ಎನಿಸಬೇಕು. ಮತ್ತು ನಾನು ಮೂರ್ಖಳಲ್ಲ, ಯಾವ ರೀತಿ ಬಟ್ಟೆ ಧರಿಸಬೇಕು ಎಂದು ತಿಳಿಯದಷ್ಟು ದಡ್ಡಿ ಕೂಡ ನಾನಲ್ಲ ಅಲ್ಲ. ನನಗೆ ಯಾವುದು ಚೆನ್ನಾಗಿ ಕಾಣುತ್ತದೆ, ಯಾವುದು ಸರಿ ಹೊಂದುತ್ತದೆ ಎಂದು ನನಗೆ ತಿಳಿದಿದೆ, ಯಾವುದು ಸರಿಹೊಂದುವುದಿಲ್ಲ ಎನ್ನುವುದು ಕೂಡ ನನಗೆ ತಿಳಿದಿದೆ. ನನಗೆ ಅದು ಅತಿಯಾಗಿದೆ ಎಂದು ಎನಿಸಿದರೆ ನಾನೇ ಅದನ್ನು ತಿರಸ್ಕರಿಸುತ್ತೇನೆ. ಆದರೆ ಅದು ನನ್ನ ಆಯ್ಕೆಯಾಗಿದೆ, ಅದನ್ನು ನನಗೆ ಹೇಳುವ ಹಕ್ಕು ಯಾರಿಗೂ ಇಲ್ಲ. ನನ್ನ ಚರ್ಮದಿಂದ, ನನ್ನ ದೇಹದಿಂದ, ನನ್ನ ವಯಸ್ಸಿನಿಂದ ನಾನು ಆರಾಮದಾಯಕವಾಗಿದ್ದರೆ, ಅದು ಹಾಗೆ ಇರಲಿ" ಎಂದು ಮಲೈಕಾ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

  ಹೆಣ್ಣು ಮಕ್ಕಳನ್ನು ಉಡುಪಿನಿಂದ ಅಳೆಯಲಾಗುತ್ತೆ: ಮಲೈಕಾ!

  ಹೆಣ್ಣು ಮಕ್ಕಳನ್ನು ಉಡುಪಿನಿಂದ ಅಳೆಯಲಾಗುತ್ತೆ: ಮಲೈಕಾ!

  "ಮಹಿಳೆಯರನ್ನು ಯಾವಾಗಲೂ ಆಕೆಯ ಸ್ಕರ್ಟ್ ಉದ್ದ ಅಥವಾ ಅವಳ ನೆಕ್ ಡೀಪ್ ಮೇಲೆ ಅಳೆಯಲಾತ್ತದೆ. ಜನರ ಅಭಿಪ್ರಾಯದ ಪ್ರಕಾರ ನನ್ನ ಜೀವನವನ್ನು ನಾನು ಬದುಕಲಾರೆ. ಉಡುಪು ತೊಡುವುದು ತುಂಬಾ ವೈಯಕ್ತಿಕ ಆಯ್ಕೆಯಾಗಿದೆ. ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸಬಹುದು. ಆದರೆ, ಅದು ನನಗೆ ಆಗದಿರಬಹುದು. ನಾನು ಅದನ್ನು ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ನನ್ನ ಆಯ್ಕೆಗಳು ನನ್ನ ವೈಯಕ್ತಿಕ ಆಯ್ಕೆಗಳಾಗಿರಬೇಕು". ಎಂದಿದ್ದಾರೆ.

  ಭಾರಿ ಸದ್ದು ಮಾಡಿತ್ತು ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಸುದ್ದಿ!

  ಭಾರಿ ಸದ್ದು ಮಾಡಿತ್ತು ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಸುದ್ದಿ!

  ಇನ್ನೂ ಇದಕ್ಕೂ ಮುನ್ನ ಅರ್ಜುನ್ ಕಪೂರ್ ಮತ್ತು ಮಲೈಕಾ ಅವರು ಬೇರೆ ಆಗಿದ್ದಾರೆ. ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಆದರೆ ಅದಕ್ಕೂ ಕೂಡ ಮಲೈಕಾ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಬ್ರೇಕಪ್ ಆಗಿಲ್ಲ ಎಂದು ಸ್ಪಷ್ಟ ಪಡಿಸುವ ಗೋಜಿಗೆ ಹೋಗಿಲ್ಲ. ಆದರೆ, ಅದು ಕೇವಲ ಗಾಸಿಪ್ ಎಂದು ಅರ್ಜುನ್ ಕಪೂರ್ ಸ್ಪಷ್ಟಪಡಿಸಿದರು. ಬಳಿಕ ಮಲೈಕಾ ಅರ್ಜುನ್ ಕಪೂರ್ ಒಟ್ಟಿಗೆ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

  English summary
  Malaika Arora Reply For People Trolling And Being Judged On Her Dressing Choices,
  Monday, January 24, 2022, 11:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X