For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಬಗ್ಗೆ ಕಾಲೆಳೆದವರಿಗೆ ಮಲೈಕಾ ಖಡಕ್ ಪ್ರಶ್ನೆ.? ಉತ್ತರಿಸಿ

  By Bharath Kumar
  |
  ಬಿಕಿನಿ ತೊಟ್ಟಿದ್ದಕ್ಕೆ ಟ್ರೊಲ್ ಆದ ಮಲೈಕಾ ಹೇಳಿದ್ದೇನು ಗೊತ್ತಾ ?? | Oneindia Kannada

  'ಮುನ್ನಿ ಬದ್ನಾಮ್', 'ಕಾಲ್ ಧಮಾಲ್', 'ಚೈಯ್ಯ ಚೈಯ್ಯ' ಸೇರಿದಂತೆ ಬಾಲಿವುಡ್ ನ ಹಲವು ಹಿಟ್ ನಂಬರ್ ಗಳಲ್ಲಿ ಜಬರ್ದಸ್ತ್ ಡ್ಯಾನ್ಸ್ ಮಾಡಿರುವ ಮಲೈಕಾ ಅರೋರ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಚಾರದಲ್ಲಿ ಟ್ರೋಲ್ ಗೆ ಒಳಗಾಗಿದ್ದರು.

  ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಮಾಡ್ತಿರೋ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಮಲೈಕಾ ಅರೋರ ಅವರನ್ನ ನೆಟ್ಟಿಗರು ಕಾಲೆಳೆದಿದ್ದರು. ಅವರಿಗೆಲ್ಲ ಈಗ ಬಾಲಿವುಡ್ ನಟಿ ಖಡಕ್ ಪ್ರಶ್ನೆಯೊಂದನ್ನ ಮುಂದಿಟ್ಟಿದ್ದಾರೆ.

  ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.!ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.!

  ''ಒಂದು ಮಗುವಿನ ತಾಯಿಯಾಗಿ ನಟಿ ಮಲೈಕಾ ಈ ರೀತಿ ಬಟ್ಟೆ ತೊಡುವುದು ಸರಿಯಲ್ಲ. ಮಲೈಕಾ ಈ ರೀತಿ ಇರುವುದಕ್ಕೆ ವಿಚ್ಛೇದನ ಸಿಕ್ಕಿರುವುದು. ಆಕೆಗೆ ಸ್ವಲ್ಪ ಕೂಡ ನಾಚಿಕೆ ಇಲ್ಲ. ಮಲೈಕಾ, ಮನೆನೂ ಬೇಡ, ಮಕ್ಕಳು ಬೇಡ. ಹೊರಗಡೆ ಸುತ್ತಾಡಿಕೊಂಡು ಪಾರ್ಟಿ ಮಾಡುತ್ತಾರೆ, ಪತಿಗೆ ಡಿವೋರ್ಸ್‌ ಕೊಟ್ಟು ತಮಗೆ ಬೇಕಾದಂತೆ ಬದುಕುತ್ತಿದ್ದಾರೆ'' ಎಂದೆಲ್ಲಾ ನೆಟ್ಟಿಗರು ಟೀಕಿಸಿದ್ದರು.

  Summer lovin...take me backkk #fridayflashback #sun#sea#surf

  A post shared by Malaika Arora Khan (@malaikaarorakhanofficial) on

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲೈಕಾ ''ಇದು ನನ್ನ ಹಳೆಯ ಫೋಟೋಗಳಲ್ಲಿ ಒಂದು. ಮಾಲ್ಡೀವ್ಸ್ ಗೆ ಈ ಹಿಂದೆ ಹೋಗಿದ್ದಾಗ ಸೆರೆಹಿಡಿದಿರುವ ಚಿತ್ರ. ನಾನು ಸ್ವಿಮ್ ಸೂಟ್‌ ಧರಿಸಿದ್ದನ್ನು ಟೀಕಿಸುವವರಿಗೆ ನನ್ನ ಪ್ರಶ್ನೆ: ನಿಮ್ಮ ಪ್ರಕಾರ, ಸ್ವಿಮ್ಮಿಂಗ್‌ ಮಾಡುವಾಗ ಅಥವಾ ಸಮುದ್ರದಲ್ಲಿ ಡೈವಿಂಗ್ ಮಾಡುವಾಗ ಸೂಕ್ತವಾಗುವ ಉಡುಪು ಯಾವುದು? ಎಂದು ಪ್ರಶ್ನಿಸಿದ್ದಾರೆ.

  ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!

  ''ನನಗೆ ತಿಳಿದಂತೆ ಅದು ಸ್ವಿಮ್ ಸೂಟ್‌. ನೀರಿನಲ್ಲಿ ಕಾಲ ಕಳೆಯುವಾಗ ಇಡೀ ಜಗತ್ತೇ ಇದನ್ನು ಉಪಯೋಗಿಸುತ್ತದೆ. ಇದನ್ನು ಬಿಟ್ಟು ಬೇರೆ ಯಾವುದಾದರೂ ಉಡುಪು ಇದ್ದರೆ, ದಯವಿಟ್ಟು ನನಗೆ ತಿಳಿಸಿ'' ಎಂದು ತಿರುಗೇಟು ನೀಡಿದ್ದಾರೆ.

  ಸಲ್ಮಾನ್ ಸಹೋದರ ಅರ್ಬಾಝ್ ಖಾನ್ ರಿಂದ ವಿಚ್ಛೇದನ ಪಡೆದ್ಮೇಲೆ, ಬೇಡದ ವಿಚಾರಕ್ಕೆ ಮಲೈಕಾ ಅರೋರ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ನಟ ಅರ್ಜುನ್ ಕಪೂರ್ ಜೊತೆಗಿನ ಬಾಂಧವ್ಯದಿಂದಾಗಿ ಗಾಸಿಪ್ ಕಾಲಂನಲ್ಲಿ ಸದ್ದು ಮಾಡ್ತಿದ್ದಾರೆ ಮಲೈಕಾ ಅರೋರ.

  English summary
  What do they expect me to wear while swimming, asks Malaika Arora on getting trolled for bikini pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X