For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಸಿನಿ ತಾರೆಯರಿಗೆ ಶಾಕ್ ನೀಡಿದ ಮಾಲ್ಡೀವ್ಸ್

  |

  ಭಾರತೀಯ ಸಿನಿ ತಾರೆಯರ ಸ್ವರ್ಗ ಎಂದೇ ಮಾಲ್ಡೀವ್ಸ್ ಅನ್ನು ಕರೆಯಲಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಲ್ಲಿ ಭಾರತದ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪ್ರಯಾಣ ಬೆಳೆಸಿದ್ದರು. ಬಾಲಿವುಡ್ ತಾರೆಯರಿಗಂತೂ ಮಾಲ್ಡೀವ್ಸ್ ತವರು ಮನೆಯಾಗಿದೆ.

  ಆಗಾಗ ಮಾಲ್ಡೀವ್ಸ್ ಕಡೆ ಪಯಣ ಬೆಳೆಸುವ ಮೂಲಕ ಮಸ್ತ್ ಮಜಾ ಮಾಡುತ್ತಿದ್ದರು. ಮುಂಬೈನಲ್ಲಿ ಜನತಾ ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಅನೇಕ ಕಲಾವಿದರು ಮಾಲ್ಡೀವ್ಸ್‌ಗೆ ಹಾರಿದ್ದರು. ರಣಬೀರ್ ಕಪೂರ್, ಅಲಿಯಾ ಭಟ್, ಜಾಹ್ನವಿ ಕಪೂರ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್ ಸೇರಿದಂತೆ ಬಹುತೇಕ ಬಾಲಿವುಡ್ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.

  ಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್‌ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್‌ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆ

  ಇದೀಗ ಸೆಲೆಬ್ರಿಟಿಗಳಿಗೆ ಶಾಕ್ ನೀಡಿದೆ ಮಾಲ್ಡೀವ್ಸ್. ಅಲ್ಲಿನ ಸರ್ಕಾರ ಮಾಲ್ಡೀವ್ಸ್ ದ್ವೀಪಕ್ಕೆ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾದಿಂದ ಈಗಾಗಲೇ ಜರ್ಮನಿ, ಇಟಲಿ, ಸಿಂಗಾಪುರ್ ಸೇರಿದಂತೆ ಕೆಲವು ದೇಶಗಳು ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದೀಗ ಮಾಲ್ಡೀವ್ಸ್ ಕೂಡ ನಿರ್ಬಂಧಿಸಿದೆ.

  ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯವು ಭಾರತೀಯರ ಪ್ರವಾಸವನ್ನು ನಿರ್ಬಂಧಿಸುವುದಾಗಿ ಹೇಳಿ ಟ್ವೀಟ್ ಮಾಡಿದೆ. 'ಏಪ್ರಿಲ್ 27ರಿಂದ ಭಾರತದಿಂದ ಮಾಲ್ಡೀವ್ಸ್ ದ್ವೀಪಗಳಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳುವ ಸೌಲಭ್ಯವನ್ನು ನಿರ್ಬಂಧಿಸಿದೆ. ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸಲು ನೀಡಿದ ಬೆಂಬಲಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದೆ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

  ಮಾಲ್ಡೀವ್ಸ್ ಸರ್ಕಾರ ಈ ಟ್ವೀಟ್ ಮಾಡುತ್ತಿದ್ದಂತೆ ಭಾರತೀಯ ನೆಟ್ಟಿಗರು ಸಿನಿ ಕಲಾವಿದರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಸಿಟ್ಟಾಪಟ್ಟೆ ಮೀಮ್‌ಗಳು ಹರಿದಾಡುತ್ತಿವೆ. ಈಗಾಗಲೇ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಇನ್ನು ಉಳಿದ ಕಲಾವಿದರು ಸದ್ಯದಲ್ಲೇ ವಾಪಸ್ ಆಗಲಿದ್ದಾರೆ.

  English summary
  Maldives bans Indian tourists due to Coronavirus. Netizens trolled after maldives bans Indian tourists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X