twitter
    For Quick Alerts
    ALLOW NOTIFICATIONS  
    For Daily Alerts

    'ಮಿಸ್ ಇಂಡಿಯಾ 2020' ಪ್ರಶಸ್ತಿ ಗೆದ್ದ ತೆಲಂಗಾಣ ಸುಂದರಿ ಮಾನಸ

    |

    2020ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಪಟ್ಟವನ್ನು ತೆಲಂಗಾಣ ಮೂಲದ ಮಾನಸ ವಾರಣಾಸಿ ಮುಡಿಗೇರಿಸಿಕೊಂಡಿದ್ದಾರೆ. ಫೆಬ್ರವರಿ 11 ರಂದು ಸಂಜೆ ಮಿಸ್ ಇಂಡಿಯಾ ವಿನ್ನರ್ ಹೆಸರು ಪ್ರಕಟಿಸಲಾಯಿತು. 2019ರ ಮಿಸ್ ಇಂಡಿಯಾ ರಾಜಸ್ಥಾನದ ಸುಮನ್ ರತನ್ ಸಿಂಗ್ ರಾವ್ ಅವರು ನೂತನ ಮಿಸ್ ಇಂಡಿಯಾ ಮಾನಸ ಅವರಿಗೆ 'ಮಿಸ್ ಇಂಡಿಯಾ 2020' ಪಟ್ಟಾಭಿಷೇಕ ಮಾಡಿದರು.

    ಮಾನಸ ವಾರಣಾಸಿ ತೆಲಂಗಾಣದ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಬುಧವಾರ ರಾತ್ರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಇಂಜಿನಿಯರ್ ಪದವಿ ಮುಗಿಸಿರುವ ಮಾನಸ ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿ (financial information exchange analyst) ಆಗಿದ್ದಾರೆ. ಮುಂದೆ ಓದಿ...

    ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ

    ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ

    2021ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತದಿಂದ 23 ವರ್ಷದ ಮಾನಸ ವಾರಣಾಸಿ ಆಯ್ಕೆಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯುವ ಐತಿಹಾಸಿಕ 70ನೇ ವರ್ಷದ ಮಿಸ್‌ ವರ್ಲ್ಡ್ ವೇದಿಕೆಯಲ್ಲಿ ಮಾನಸ ಭಾರತವನ್ನು ಪ್ರತಿನಿಧಿಸಲಿದ್ದಾರೆ.

    'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ

    ಮಾನಸ ವಾರಣಾಸಿ ಕುರಿತು

    ಮಾನಸ ವಾರಣಾಸಿ ಕುರಿತು

    ಮಾನಸ ವಾರಣಾಸಿ ಪುಸ್ತಕಗಳನ್ನು ಓದುವುದು, ಸಂಗೀತ ಮತ್ತು ಯೋಗ ಅಭ್ಯಾಸ ಸೇರಿದಂತೆ ಹಲವು ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಾನಸಾ ಬಹಳ ನಾಚಿಕೆ ಸ್ವಭಾವದ ಮಗುವಾಗಿದ್ದಳು. ಬೆಳೆಯುತ್ತಿದ್ದಂತೆ ಭರತನಾಟ್ಯ ಮತ್ತು ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಿದರು. ಈ ಕಲಾ ಪ್ರಕಾರಗಳು ಮಾನಸಾ ಅವರ ಜೀವನದಲ್ಲಿ ಧೈರ್ಯ ಮತ್ತು ಸ್ವಯಂ ಆತ್ಮವಿಶ್ವಾಸ ಹೆಚ್ಚಾಗಲು ಸಹಕಾರಿಯಾಗಿದೆ ಹಾಗೂ ಪ್ರಮುಖ ಪಾಠಗಳನ್ನು ಕಲಿಸಿದೆ ಎಂದು ಮಿಸ್ ಇಂಡಿಯಾ ವರದಿ ಮಾಡಿದೆ.

    ರನ್ನರ್ ಅಪ್ ಯಾರು?

    ರನ್ನರ್ ಅಪ್ ಯಾರು?

    ಮಾನಸ ವಾರಣಾಸಿ ಮಿಸ್ ಇಂಡಿಯಾ ವಿನ್ನರ್ ಆಗಿದ್ದರೆ, ಹರಿಯಾಣದ ಮಾನಿಕಾ ಶಿಯೋಕಾಂಡ್ 'ಮಿಸ್ ಗ್ರ್ಯಾಂಡ್ ಇಂಡಿಯಾ 2020' ಪಟ್ಟ ಪಡೆದುಕೊಂಡರು. ಮತ್ತು ಉತ್ತರ ಪ್ರದೇಶದ ಮಾನ್ಯಾ ಸಿಂಗ್ 'ಮಿಸ್ ಇಂಡಿಯಾ 2020 ರನ್ನರ್ ಅಪ್' ಆಗಿ ಕಿರೀಟವನ್ನು ಪಡೆದುಕೊಂಡರು.

    ಟ್ರಾನ್ಸ್‌ಕ್ವೀನ್ 2020: ಶೈನ್ ಸೋನಿಗೆ ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ ಪಟ್ಟಟ್ರಾನ್ಸ್‌ಕ್ವೀನ್ 2020: ಶೈನ್ ಸೋನಿಗೆ ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ ಪಟ್ಟ

    Recommended Video

    ಸಲ್ಮಾನ್ ಖಾನ್ ಗೋಸ್ಕರ ದೇಶಬಿಟ್ಟು ಬಂದಿದ್ದ ನಟಿ | Filmibeat Kannada
    ಜ್ಯೂರಿಗಳು ಯಾರಿದ್ದರು?

    ಜ್ಯೂರಿಗಳು ಯಾರಿದ್ದರು?

    ಅಂದ್ಹಾಗೆ, ಮಿಸ್ ಇಂಡಿಯಾ 2020 ಸ್ಪರ್ಧೆಗೆ ತೀರ್ಪುಗಾರರಾಗಿ ನಟಿ ನೇಹಾ ಧೂಪಿಯಾ, ಚಿತ್ರಾಂಗದ ಸಿಂಗ್, ಪುಲ್ಕಿತ್ ಸಾಮ್ರಾಟ್ ಮತ್ತು ಖ್ಯಾತ ಡಿಸೈನರ್ ಡ್ಯೂ ಫಾಲ್ಗುನಿ ಮತ್ತು ಶೇನ್ ಪೀಕಾಕ್ ಅವರಂತಹ ಸೆಲೆಬ್ರಿಟಿಗಳನ್ನು ಒಳಗೊಂಡಿತ್ತು. ಈ ಐವರ ಸಮಿತಿಯೂ ಮಿಸ್ ಇಂಡಿಯಾ ಫಲಿತಾಂಶ ನಿರ್ಧರಿಸಿದೆ.

    English summary
    23-year-old Manasa Varanasi from Telangana was crowned the winner of Miss India 2020 on Feb 11.
    Thursday, February 11, 2021, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X