»   » ಕೋಲಾರದ ಮಂಜುನಾಥ ಬಗ್ಗೆ ಬಾಲಿವುಡ್ ಸಿನಿಮಾ

ಕೋಲಾರದ ಮಂಜುನಾಥ ಬಗ್ಗೆ ಬಾಲಿವುಡ್ ಸಿನಿಮಾ

Posted By:
Subscribe to Filmibeat Kannada

ಬಾಲಿವುಡ್ ನಿರ್ದೇಶಕರಿಗೆ ಸತ್ಯ ಘಟನೆ ಇಟ್ಟುಕೊಂಡು ಸಿನಿಮಾ ಮಾಡುವುದು ಹೊಸದೇನಲ್ಲ. ಸದ್ಯ ಅಂತಹ ಒಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಉತ್ತರಪ್ರದೇಶದಲ್ಲಿ ಕಲಬೆರಕೆ ಪೆಟ್ರೋಲ್‌ ಮಾಫಿಯಾ ತಡೆಯಲು ಹೋಗಿ ಜೀವ ತೆತ್ತ ಕರ್ನಾಟಕದ ಕೋಲಾರ ಮೂಲದ ಐಐಎಂ ಪದವೀಧರ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಅಧಿಕಾರಿ ಮಂಜುನಾಥ ಷಣ್ಮುಗಂ ಅವರ ಜೀವನದ ಕಥೆ ಮೇ 9ರಂದು ತೆರೆಗೆ ಬರುತ್ತಿದೆ.

ಸಂದೀಪ್ ಮರ್ಮಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು 'ಮಂಜುನಾಥ್' ಎಂದು ಹೆಸರಿಡಲಾಗಿದೆ. ನಟಿ ಸೀಮಾ ಬಿಸ್ವಾಸ್‌ ಅವರು ಮಂಜುನಾಥ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದು, ಯಶಪಾಲ್‌ ಶರ್ಮಾ ಅವರು ಮಂಜುನಾಥರನ್ನು ಹತ್ಯೆ ಮಾಡಿದ ಗೋಲು ಆಗಿ ಅಭಿಯಿಸಿದ್ದಾರೆ. ಮಂಜುನಾಥ ಮುಗ್ಧರೇ ಅಥವಾ ಧೈರ್ಯಶಾಲಿ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ಚಿತ್ರ ಜನರ ಮುಂದಿಡಲಿದೆ.

Manjunath

ಮಂಜುನಾಥ ಅವರ ಜೀವನದ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡಿ ಸಂದೀಪ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಜಗತ್ತಿನಲ್ಲಿ ಭ್ರಷ್ಟಾಚಾರ, ಸ್ವೇಚ್ಛಾಚಾರ ಇದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಾವು ನಡೆಸಿದ ಅಧ್ಯಯನದ ವೇಳೆ ಮಂಜುನಾಥ ಅವರ ಅನೇಕ ಸ್ನೇಹಿತರು ತಿಳಿಸಿದ್ದಾರೆ ಎಂದು ವರ್ಮಾ ಹೇಳಿದ್ದಾರೆ. [2014ರ ಐಐಎಫ್ಎ ಪ್ರಶಸ್ತಿ ಪುರಸ್ಕೃತರು]

ಮಂಜುನಾಥ ಅವರನ್ನು ಹತ್ಯೆ ಮಾಡಿದ ಗೋಲು ಜಗತ್ತಿನಲ್ಲಿ ಎಲ್ಲವನ್ನೂ ಬೆಲೆ ಕಟ್ಟಿ ಕೊಂಡುಕೊಳ್ಳಬಹುದು ಎಂದು ತಿಳಿದುಕೊಂಡಿರುತ್ತಾನೆ. ಮಂಜುನಾಥ ಜತೆ ಬಾಂಧವ್ಯ ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಆದರೆ ಇದರಲ್ಲಿ ವೈಫ‌ಲ್ಯ ಅನುಭವಿಸುತ್ತಾನೆ. ನಂತರ ಆತನನ್ನು ಕೊಲೆ ಮಾಡುತ್ತಾನೆ ಎಂದು ನಿರ್ದೇಶಕರು ಹೇಳಿದ್ದಾರೆ.

ಯಾರು ಮಂಜುನಾಥ : ಕೋಲಾರದ ಮೂಲದವರಾದ ಮಂಜುನಾಥ ಭಾರತೀಯ ತೈಲ ನಿಗಮದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಕಲಬೆರಕೆ ಪೆಟ್ರೋಲ್‌ ಮಾರಾಟ ಮಾಡುತ್ತಿದ್ದ ಬಂಕ್‌ ಮೇಲೆ ದಾಳಿ ನಡೆಸಿ, ಕಾನೂನು ಕ್ರಮ ತೆಗೆದುಕೊಂಡಿದ್ದರು.

ಇದರ ಸೇಡು ತೀರಿಸಿಕೊಳ್ಳಲು 2005ರ ನ.19ರಂದು ಅವರನ್ನು ಪೆಟ್ರೋಲ್ ಕಲಬೆರಕೆ ಮಾಫಿಯಾ ಹತ್ಯೆ ಮಾಡಿತ್ತು. ಈ ಘಟನೆ ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಭ್ರಷ್ಟಾಚಾರ, ಅಕ್ರಮವನ್ನು ಬಯಲಿಗೆಳೆಯುವ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಎಲ್ಲರೂ ಆಗ್ರಹಿಸಿದ್ದರು.
[ಮಂಜುನಾಥ ಸಿನಿಮಾ ಟ್ರೈಲರ್ ನೋಡಿ]

<iframe width="640" height="360" src="//www.youtube.com/embed/7nPY6O8XDv8?feature=player_detailpage" frameborder="0" allowfullscreen></iframe>
English summary
Manjunath an uncommon story of common corruption based on Manjunath Shanmugam. Releases on 9th May 2014. The film is real life story of IIM graduate Manjunath Shanmugam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada