»   » ಹಿಂದಿ ಚಿತ್ರರಂಗ ಮೇರು ನಟ ಮನೋಜ್ ಕುಮಾರ್ ಗೆ ಫಾಲ್ಕೆ ಪ್ರಶಸ್ತಿ

ಹಿಂದಿ ಚಿತ್ರರಂಗ ಮೇರು ನಟ ಮನೋಜ್ ಕುಮಾರ್ ಗೆ ಫಾಲ್ಕೆ ಪ್ರಶಸ್ತಿ

Posted By:
Subscribe to Filmibeat Kannada

ಹಿಂದಿ ಚಿತ್ರರಂಗ ಮೇರು ನಟ ಮನೋಜ್ ಕುಮಾರ್ ಅವರಿಗೆ 2015ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಶುಕ್ರವಾರ (ಮಾರ್ಚ್ 04) ಪ್ರಕಟಿಸಿದೆ.

47ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ. ಸಿನಿಮಾರಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಗಣ್ಯರನ್ನು ಈ ಉನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು ಸ್ವರ್ಣ ಕಮಲ ಪ್ರಶಸ್ತಿ, 10 ಲಕ್ಷ ರು ನಗದು, ಶಾಲು ಹೊಂದಿರುತ್ತದೆ.

manoj-kumar-receive-dadasaheb-phalke-award-2015

ಮೇರು ಗಾಯಕಿಯರಾದ ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಸಲೀಂ ಖಾನ್, ನಿತಿನ್ ಮುಕೇಶ್ ಹಾಗೂ ಅನೂಪ್ ಜಲೋಟಾ ಅವರಿದ್ದ ಸಮಿತಿ ಈ ವರ್ಷದ ಪ್ರಶಸ್ತಿಗಾಗಿ ಮನೋಜ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಹರಿಯಾಳಿ ಔರ್ ರಾಸ್ತಾ, ವೋ ಕೌನ್ ಥಿ, ಹಿಮಾಲಯ ಕಿ ಗಾಡ್ ಮೈ, ರೋಟಿ ಕಪಡಾ ಔರ್ ಮಕಾನ್, ಕ್ರಾಂತಿ, ಉಪಕಾರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನೋಜ್ ಕುಮಾರ್ ಅವರು ನಟಿಸಿದ್ದಾರೆ. ಉಪಕಾರ್ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿದ್ದರು. ಕೇಂದ್ರ ಸರ್ಕಾರ ಇವರಿಗೆ ಪದ್ಮ ಶ್ರೀ ನೀಡಿ ಗೌರವಿಸಿದೆ.

ಶಶಿ ಕುಮಾರ್, ಗುಲ್ಜಾರ್, ಪ್ರಾಣ್, ಸೌಮಿತ್ರಾ ಚಟರ್ಜಿ, ಕೆ ಬಾಲಚಂದರ್, ಡಿ ರಾಮನಾಯ್ಡು, ವಿಕೆ ಮೂರ್ತಿ, ಮನ್ನಾಡೇ ಸೇರಿದಂತೆ ಅನೇಕ ಜನ ಗಣ್ಯರ ಸಾಲಿಗೆ ಮನೋಜ್ ಕುಮಾರ್ ಸೇರಿದ್ದಾರೆ. ಹೆಚ್ಚಿನ ಮಾಹಿತಿಗೆ ವಾರ್ತಾ ಇಲಾಖೆಗೆ ವೆಬ್ ಸೈಟ್ ನೋಡಿ

English summary
Veteran film actor and director Manoj Kumar is to be conferred the 47th Dadasaheb Phalke Award for the year 2015. MIB India tweeted on Friday: “Veteran film actor Shri Manoj Kumar to be conferred Dadasaheb Phalke Award for the year 2015”
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada