For Quick Alerts
  ALLOW NOTIFICATIONS  
  For Daily Alerts

  ಕಂಗನಾ ಮೊದಲಲ್ಲ, ಬಿಎಂಸಿ ಇಂದ ಮನೆ-ಕಚೇರಿ ಕಳೆದುಕೊಂಡ ಸೆಲೆಬ್ರಿಟಿಗಳು ಇವರು

  |

  ನಟಿ ಕಂಗನಾ ರಣಾವತ್ ಅವರ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮ ಮಾಡಿದೆ. ಈ ಪ್ರಕರಣ ದೇಶದಾದ್ಯಂತ ಮಾಧ್ಯಗಳಲ್ಲಿ ಚರ್ಚೆಯಾಗುತ್ತಿದೆ.

  ಕಂಗನಾ ಕಚೇರಿ ನೆಮಸಮ ಮಾಡುವುದಕ್ಕೂ ಕಂಗನಾ 'ರಾಜಕೀಯ ಆಸಕ್ತಿ'ಗೂ, ಕಂಗನಾರ 'ಮುಂಬೈ ಪಾಕ್‌ ಆಕ್ರಮಿತ ಕಾಶ್ಮೀರವಾಗಿದೆ' ಹೇಳಿಕೆಗೂ ಸಂಬಂಧವಿದೆ ಎಂಬ ಆರೋಪ ಮಾಡಲಾಗುತ್ತಿದೆ.

  ಕಂಗನಾ ರಣಾವತ್ ಕಚೇರಿ ಒಡೆದಿರುವುದರ ಹಿಂದೆ ರಾಜಕೀಯ ದುರುದ್ಧೇಶ, ಶಿವಸೇನಾ ಪಕ್ಷದ ದ್ವೇಷ ರಾಜಕಾರಣ ಕೆಲಸ ಮಾಡಿದೆ ಎಂದು ಆರೋಪಿಸಲಾಗುತ್ತಿದೆ. ಇನ್ನು ಕೆಲವರು, 'ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ ಗೆ ತಕ್ಕ ಶಾಸ್ತಿಯಾಗಿದೆ' ಎಂದು ಸಹ ಹೇಳುತ್ತಿದ್ದಾರೆ.

  ಕಂಗನಾ ರಣಾವತ್ ಬಳಿಕ ಮತ್ತೊಬ್ಬ ಸೆಲೆಬ್ರಿಟಿಗೆ ನೋಟಿಸ್ ನೀಡಿದ ಬಿಎಂಸಿಕಂಗನಾ ರಣಾವತ್ ಬಳಿಕ ಮತ್ತೊಬ್ಬ ಸೆಲೆಬ್ರಿಟಿಗೆ ನೋಟಿಸ್ ನೀಡಿದ ಬಿಎಂಸಿ

  ಒಟ್ಟಿನಲ್ಲಿ ಕಂಗನಾ ಕಚೇರಿ ನೆಲಸಮವಾಗಿರುವುದು ಮಾಧ್ಯಮಗಳ, ಜನರ ಗಮನ ಸೆಳೆದಿದೆ. ಆದರೆ ಮುಂಬೈ ಮಹಾನಗರ ಪಾಲಿಕೆ ಸೆಲೆಬ್ರಿಟಿಯೊಬ್ಬರ ಮನೆ ಅಥವಾ ಕಚೇರಿಯನ್ನು ನೆಲಸಮ ಮಾಡಿರುವುದು ಇದು ಮೊದಲೇನಲ್ಲ. ಹೌದು, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮನೆ, ಕಚೇರಿ, ಮನೆಯ ಭಾಗವನ್ನು ಕಳೆದುಕೊಂಡಿದ್ದಾರೆ.

  ಶಾರುಖ್ ಖಾನ್ ಮನೆ ಭಾಗ ಧ್ವಂಸ

  ಶಾರುಖ್ ಖಾನ್ ಮನೆ ಭಾಗ ಧ್ವಂಸ

  ಶಾರುಕ್ ಖಾನ್ ರ ಮನ್ನತ್ ಮನೆಯ ಒಂದು ಭಾಗವನ್ನು ಬಿಎಂಸಿ ಒಡೆದು ಹಾಕಿತ್ತು. ಶಾರುಖ್ ಮನೆಯ ಕಾಪೌಂಡ್ ಒಳಗೆ ರ್ಯಾಂಪ್ ಒಂದನ್ನು ಕಟ್ಟಿಸಿಕೊಂಡಿದ್ದರು. ತಮ್ಮ ವ್ಯಾನಿಟಿ ವ್ಯಾನ್ ನಿಲ್ಲಿಸಿಕೊಳ್ಳಲೆಂದು ಇದನ್ನು ನಿರ್ಮಿಸಿದ್ದರು. ಆದರೆ ಬಿಎಂಸಿಯು ಅದನ್ನು ಒಡೆದುಹಾಕಿದ್ದಲ್ಲದೆ, ಖಾನ್‌ ಗೆ 2 ಲಕ್ಷ ದಂಡ ಸಹ ವಿಧಿಸಿತು.

  ಕಂಗನಾ ಕಚೇರಿ ನೆಲಸಮ ಕಾರ್ಯಕ್ಕೆ ಚಾಲನೆ: 'ಇದು ಪ್ರಜಾಪ್ರಭುತ್ವದ ಸಾವು' ಎಂದ ನಟಿ

  ಟ್ವೀಟ್ ಮಾಡಿ ಕಚೇರಿ ಕಳೆದುಕೊಂಡ ಕಪಿಲ್ ಶರ್ಮಾ

  ಟ್ವೀಟ್ ಮಾಡಿ ಕಚೇರಿ ಕಳೆದುಕೊಂಡ ಕಪಿಲ್ ಶರ್ಮಾ

  ನಟ ಕಪಿಲ್ ಶರ್ಮಾ, ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ ತಮ್ಮ ಕಚೇರಿ ಕಳೆದುಕೊಂಡಿದ್ದರು! ಬಿಎಂಸಿ ಯವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶರ್ಮಾ, ಮೋದಿಗೆ ಟ್ವೀಟ್ ಮಾಡಿದ್ದರು. ಇದಾದ ಕೆಲವೇ ದಿನದಲ್ಲಿ ಕಪಿಲ್ ಶರ್ಮಾ ರ ಕಚೇರಿಯನ್ನು ಬಿಎಂಸಿಯವರು ಒಡೆದು ಹಾಕಿದರು. ಆಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿತ್ತು.

  ದಿವಂಗತ ಇರ್ಫಾನ್ ಖಾನ್ ಮನೆ

  ದಿವಂಗತ ಇರ್ಫಾನ್ ಖಾನ್ ಮನೆ

  ನಟ ಕಪಿಲ್ ಶರ್ಮಾ ಕಚೇರಿ ಇದ್ದ ಸ್ಥಳದಲ್ಲಿಯೇ ನಟ ಇರ್ಫಾನ್ ಖಾನ್ ಮನೆಯೂ ಇತ್ತು. ಬಿಎಂಸಿ ಇರ್ಫಾನ್ ಖಾನ್ ನಿವಾಸವನ್ನೂ ಧ್ವಂಸಗೊಳಿಸಿತು. ಕಪಿಲ್, ಮೋದಿಗೆ ಟ್ವೀಟ್ ಮಾಡಿದ್ದಕ್ಕೆ, ಪಾಪ ನಟ ಇರ್ಫಾನ್ ಖಾನ್ ಮನೆ ಕಳೆದುಕೊಳ್ಳಬೇಕಾಯಿತು.

  ನಟ, ರಾಜಕಾರಣಿ ಶತೃಘ್ನ ಸಿಂಹ ಮನೆ

  ನಟ, ರಾಜಕಾರಣಿ ಶತೃಘ್ನ ಸಿಂಹ ಮನೆ

  2018 ರಲ್ಲಿ ಹಿರಿಯ ನಟ ಶತೃಘ್ನ ಸಿಂಹ ತಮ್ಮ ಮನೆಯ ರಿನೋವೇಶನ್ ಮಾಡಿಸಿದರು. ಆ ವೇಳೆಗಾಗಲೇ ಅವರು ಮೋದಿ ವಿರುದ್ಧ ಬೆಂಕಿ ಉಂಡೆ ಉಗುಳಲು ಆರಂಭಿಸಿದ್ದರು. ಆಗ, ಬಿಎಂಸಿಯು ಅವರ ಮನೆಯ ಹಲವು ಭಾಗವನ್ನು ನಿಯಮಬಾಹಿರ ನಿರ್ಮಾಣವೆಂದು ಹೇಳಿ ಒಡೆದುಹಾಕಿತು.

  ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್

  ಅರ್ಜುನ್ ಕಪೂರ್ ಜಿಮ್ ಧ್ವಂಸ

  ಅರ್ಜುನ್ ಕಪೂರ್ ಜಿಮ್ ಧ್ವಂಸ

  ನಟ ಅರ್ಜುನ್ ಕಪೂರ್, ಜುಹುವಿನ ತಮ್ಮ ಮನೆಯ ಮೇಲೆ ಜಿಮ್ ಒಂದನ್ನು ನಿರ್ಮಿಸಿದ್ದರು. ಇದು ನಿಯಮಬಾಹಿರ ನಿರ್ಮಾಣವೆಂದು ಹೇಳಿ, ಹೊಸದಾಗಿ ಕಟ್ಟಿಸಿದ್ದ ಜಿಮ್ ಅನ್ನು ಬಿಎಂಸಿ ಒಡೆದು ಹಾಕಿತು.

  Sanjjana ಗೊಳಾಟಕ್ಕೆ full stop | Filmibeat Kannada
  ಅನಿಲ್ ಕಪೂರ್ ಕಚೇರಿ

  ಅನಿಲ್ ಕಪೂರ್ ಕಚೇರಿ

  ನಟ, ನಿರ್ಮಾಪಕ ಅನಿಲ್ ಕಪೂರ್ ಅವರ ಪ್ರೊಡಕ್ಷನ್ ಹೌಸ್ ಮತ್ತು ಕಚೇರಿ ಕೆಲವು ನಗರ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಬಿಎಂಸಿ ನೊಟೀಸ್ ಕಳಿಸಿತ್ತು. ಆದರೆ ಅನಿಲ್ ಕಪೂರ್ ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲವಾದ್ದರಿಂದ ಅದನ್ನು ಧ್ವಂಸಗೊಳಿಸಿತ್ತು ಬಿಎಂಸಿ.

  English summary
  Kangana not the first one to loose her office. Many celebrities office, house were demolished by BMC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X