For Quick Alerts
  ALLOW NOTIFICATIONS  
  For Daily Alerts

  Real Hero Sonu Sood: ಸಹಾಯಕ್ಕಾಗಿ 'ಸೋನು ಸೂದ್' ಮನೆ ಮುಂದೆ ಜನರ ದಂಡು!

  |

  ಚಿತ್ರರಂಗದಲ್ಲಿ ಕೋಟಿ, ಕೋಟಿ ಹಣ ಸಂಪಾದಿಸುವ ಅನೇಕ ನಟ, ನಟಿಯರು ಇದ್ದಾರೆ. ಆದರೆ ಎಲ್ಲರೂ ದಾನ ಧರ್ಮಕ್ಕೆ ಮುಂದೆ ಬರುವುದಿಲ್ಲ. ಇತ್ತೀಚೆಗೆ ಅಸಹಾಯಕರಿಗೆ ಸಹಾಯ ಹಸ್ತ ಚಾಚಿ ಗಮನ ಸೆಳೆದಿರುವ ನಟ ಅಂದರೆ ಅದು ಸೋನು ಸೂದ್. ಕೊವಿಡ್ ಬಂದ ಸಮಯದಿಂದ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ತಮ್ಮ ಕೈಲಾದ ಸಹಾಯವನ್ನು ಜನರಿಗೆ ಮಾಡುತ್ತಾ ಇದ್ದಾರೆ.

  ಸೋನು ಸೂದ್ ಸಹಾಯ ಕೇವಲ ಕೋವಿಡ್ ಸಮಯಕ್ಕೆ ಮಾತ್ರ ಸೀಮಿತ ಆಗಿಲ್ಲ. ಅವರು ಕೋವಿಡ್ ಬಿಟ್ಟು ಬೇರೆ, ಬೇರೆ ವಿಚಾರಗಳಲ್ಲೂ ಕೂಡ ಜನರಿಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ನಿಜ ಜೀವನದ ಹೀರೋ ಎಂದು ಮತ್ತೆ ಸಾಬೀತು ಮಾಡಿದ ಸೋನು ಸೂದ್! ವಿಡಿಯೋ ನೋಡಿನಿಜ ಜೀವನದ ಹೀರೋ ಎಂದು ಮತ್ತೆ ಸಾಬೀತು ಮಾಡಿದ ಸೋನು ಸೂದ್! ವಿಡಿಯೋ ನೋಡಿ

  ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ ಸೋನು ಸೂದ್, ಹಲವು ಜನರ ಪಾಲಿಗೆ ದೆವರೇ ಆಗಿ ಬಿಟ್ಟಿದ್ದಾರೆ. ಆದರೆ ಕೊರೊನಾ ಮಾತ್ರ ಜನರಿಗೆ ಕಷ್ಟದ ಸಮಯ ಆಗಿರಲಿಲ್ಲ. ಕೊರೊನಾ ಬಳಿಕವೂ ಜನರನ್ನು ಹತ್ತಿ ಹಲವು ಸಮಸ್ಯೆಗಳು ಕಾಡುತ್ತಿವೆ. ಸರ್ಕಾರದಿಂದ ಯಾವುದೆ ನೆರವು ಸಿಗದ ಮಂದಿ ಸೋನು ಸೋದ್ ಮೊರೆ ಹೋಗುತ್ತಾ ಇದ್ದಾರೆ.

  ಸಹಾಯ ಬೇಡಿ ಸೋನು ಸೂದ್ ಮನೆಗೆ ಜನರ ದಂಡು!

  ಸಹಾಯ ಬೇಡಿ ಸೋನು ಸೂದ್ ಮನೆಗೆ ಜನರ ದಂಡು!

  ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಕೇಳಿಕೊಂಡು ಹತ್ತಾರು ಜನ ಸೋನು ಸೂದ್ ಮನೆಯ ಬಳಿಯ ಬಳಿ ನೆರೆದಿದ್ದಾರೆ. ಸೋನು ಸೂದ್ ಕೂಡ ತಮ್ಮ ಸಮಯವನ್ನು ಜನರಿಗೆ ಕೊಟ್ಟು ಸಹನೆಯಿಂದ ಎಲ್ಲಾ ಸಮಸ್ಯೆಗಳನ್ನು ಆಲಿಸುತ್ತಾ ಇದ್ದಾರೆ. ಈ ಕುರಿತ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ.

  ಸೋನು ಸೂದ್ ಬಳಿ ಗೋಳು ಹೇಳಿಕೊಂಡ ಜನ!

  ದೆಹಲಿಯಿಂದ ಸೋನು ಸೂದ್ ಮನೆ ಮುಂದೆ ಬಂದು ನಿಂತ ಮಹಿಳೆ ಒಬ್ಬರು ತಮ್ಮ ಕೈಯಲ್ಲಿ ಹಸುಗೂಸನ್ನು ಇಟ್ಟುಕೊಂಡು, ತಾನು ತುಂಬಾ ಕಷ್ಟದಲ್ಲಿ ಇರುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಕಾಲು, ಕೈ ಇಲ್ಲದ ಅಂಗವಿಕಲರು ತಮ್ಮ ಕಷ್ಟಗಳನ್ನು ಸೋನು ಸೂದ್ ಬಳಿ ಹೇಳಿಕೊಂಡಿದ್ದಾರೆ.

  ಜನರ ಕಷ್ಟಗಳನ್ನು ಆಲಿಸಿದ ಸೋನು ಸೂದ್!

  ಇನ್ನು ತನ್ನನ್ನು ನಂಬಿ ಬಂದ ಜನರಿಗೆ ಸೋನು ಸೂದ್ ಸಹಾಯ ಮಾಡಲು ಮುಂದಾಗಿದ್ದಾರೆ. ಯಾರಿಗೆ ಏನು ಅವಶ್ಯಕತೆ ಇದೆ. ಏನೇನು ಸಹಾಯ ಬೇಡಿ ಬಂದಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದೊಕೊಂಡಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಗಳನ್ನು ಜನರಿಗಾಗಿ ಮಾಡಲು ಸೋನು ಸೂದ್ ಮುಂದೆ ಬಂದಿದ್ದಾರೆ.

  ಸಾಮಾಜಿಕ ಸೇವೆಗೆ ಸೋನು ಸೂದ್ ಸದಾ ಮುಂದು!

  ಸಾಮಾಜಿಕ ಸೇವೆಗೆ ಸೋನು ಸೂದ್ ಸದಾ ಮುಂದು!

  2020ರಿಂದ ಸೋನು ಸೂದ್ ಸತತವಾಗಿ ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದಾರೆ. ಮೊದಲ ಲಾಕ್‌ಡೌನ್‌ನಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದ ಸೋನು ಸೂದ್ ಹಲವು ಮಂದಿಗೆ ಲಾಕ್‌ಡೌನ್ ಮುಗಿವ ವರೆಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ ವಿತರಣೆ, ಆಕ್ಸಿಜನ್ ಕಾನ್‌ಸಂಟ್ರೇಟರ್‌ಗಳ ವಿತರಣೆ ಮಾಡಿದ್ದರು. ಹಾಗೆ ಸಹಾಯಕ್ಕಾಗಿ ತಮ್ಮ ಬಳಿಗೆ ಬರುವ ಜನರಿಗೆ ಒಂದಲ್ಲಾ ಒಮದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ.

  English summary
  Many people Gathered At Sonu Sood House For Help, He Met All Of Them And listen to their problem
  Sunday, April 17, 2022, 11:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X