ಉದಯೋನ್ಮುಖ ಮರಾಠಿ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆ

ಮರಾಠಿ ಚಿತ್ರರಂಗದ ನಟ ಅಶುತೋಷ್ ಭಾಕ್ರೆ ಬುಧವಾರ ಮರಾಠಾವಾಡಾ ಪ್ರದೇಶ ನಾಂಡೇದ್ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣೇಶ್ ನಗರದಲ್ಲಿರುವ ಫ್ಲಾಟ್‌ನಲ್ಲಿ ಬುಧವಾರ ಮಧ್ಯಾಹ್ನ ಅಶುತೋಷ್ (32) ಶವ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಪೋಷಕರು ಕಂಡಿದ್ದಾರೆ.

Recommended Video

ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

ಮರಾಠಿ ಧಾರಾವಾಹಿ ಖುಲ್ತಾ ಕಾಲಿ ಖುಲೇನಾ ಧಾರಾವಾಹಿಯ ಪಾತ್ರದಿಂದ ಜನಪ್ರಿಯರಾಗಿದ್ದ ನಟಿ ಮಯೂರಿ ದೇಶ್ ಮುಖ್ ಅವರನ್ನು ಅಶುತೋಷ್ ಮದುವೆಯಾಗಿದ್ದರು. ಭಾಕರ್, ಇಚರ್ ತರ್ಲಾ ಪಕ್ಕಾ ಮುಂತಾದ ಚಿತ್ರಗಳಲ್ಲಿ ಅಶುತೋಷ್ ನಟಿಸಿದ್ದರು.

ಅಶುತೋಷ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಅವರು ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ವ್ಯಕ್ತಿಯೊಬ್ಬು ಏಕೆ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Marathi Actor Ashutosh Bhakre Commits Suicide

ನಾಂಡೇದ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶುತೋಷ್ ತಂದೆಯ ಹೇಳಿಕೆ ದಾಖಲಿಸಿದ್ದು, ಅವರು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಅವರು ಆಘಾತದಲ್ಲಿ ಇರುವುದರಿಂದ ಕುಟುಂಬದ ಇತರೆ ಸದಸ್ಯರಿಂದ ಹೇಳಿಕೆ ಪಡೆದುಕೊಳ್ಳಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.

ಅಶುತೋಷ್ ಮತ್ತು ಮಯೂರಿ (27) 2016ರ ಜನವರಿ 21ರಂದು ಮದುವೆಯಾಗಿದ್ದರು.

More from Filmibeat

English summary
Marathi actor, husband of actress Mayuri Deshmukh, Ashutosh Bhakre (32) has committed suicide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X