»   » ಸಲ್ಮಾನ್ ಖಾನ್ ಚಿತ್ರದಲ್ಲಿ ಮಾಸ್ಟರ್ ಕಿಶನ್ ಗೆ ಚಾನ್ಸ್

ಸಲ್ಮಾನ್ ಖಾನ್ ಚಿತ್ರದಲ್ಲಿ ಮಾಸ್ಟರ್ ಕಿಶನ್ ಗೆ ಚಾನ್ಸ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ ಮಾಸ್ಟರ್ ಕಿಶನ್ ಅವರಿಗೆ ಬಾಲಿವುಡ್ ಚಿತ್ರದಲ್ಲಿ ಬಡಾ ಚಾನ್ಸ್ ಸಿಕ್ಕಿದೆ. ಅದೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಚಿತ್ರದಲ್ಲಿ ಎಂಬುದು ವಿಶೇಷ. 'ನೋ ಎಂಟ್ರಿ ಮೇ ಎಂಟ್ರಿ' ಚಿತ್ರದಲ್ಲಿ ಕಿಶನ್ ಅವರಿಗೆ ಜವಾಬ್ದಾರಿಯುತವಾದ ಕೆಲಸ ನೀಡಲಾಗಿದೆ.

ಇಷ್ಟಕ್ಕೂ ಕಿಶನ್ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ, ಆದರೆ ಚಿತ್ರದ ತಾಂತ್ರಿಕ ಬಳಗದಲ್ಲಿ ಇರುತ್ತಾರೆ. 2005ರಲ್ಲಿ ತೆರೆಕಂಡ ಬ್ಲ್ಯಾಕ್ ಬಸ್ಟರ್ ಚಿತ್ರ 'ನೋ ಎಂಟ್ರಿ' ಚಿತ್ರದ ಮುಂದಿನ ಅವತರಣಿಕೆಯೇ ಈ 'ನೋ ಎಂಟ್ರಿ ಮೇ ಎಂಟ್ರಿ'. ಅನೀಜ್ ಬಜ್ ಮಿ ನಿರ್ದೇಶಿಸುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ. [ಧೂಮ್ ಗರ್ಲ್ ಇಶಾ ಈಗ ಕೇರ್ ಆಫ್ ಫುಟ್ ಪಾತ್]

ಮಲ್ಟಿ ಸ್ಟಾರ್ ಚಿತ್ರವಾಗಿರುವ ಇದರಲ್ಲಿ ಸಲ್ಲು ಜೊತೆಗೆ ಅನಿಲ್ ಕಪೂರ್, ಫರ್ದೀನ್ ಖಾನ್, ಬಿಪಾಶಾ ಬಸು, ಇಶಾ ಡಿಯೋಲ್, ಲಾರಾ ದತ್ತ, ಸೆಲೀನಾ ಜೇಟ್ಲಿ ಮುಂತಾದವರು ಪ್ರಮುಖ ಪಾತ್ರಗಳನ್ನು ಪೋಷಿಸುತ್ತಿದ್ದಾರೆ. ಸದ್ಯಕ್ಕೆ ಕಿಶನ್ ಅವರು ದ್ವಿಭಾಷಾ ಚಿತ್ರವಾದ 'ಕೇರ್ ಆಫ್ ಫುಟ್ ಪಾತ್ 2' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಕಿಶನ್ ಪ್ರತಿಭೆಗೆ ಬೆರಗಾದ ನಿರ್ದೇಶಕರು

ಕೇರ್ ಆಫ್ ಫುಟ್ ಪಾತ್ ಚಿತ್ರ ಕನ್ನಡ ಹಾಗೂ ಹಿಂದಿಯಲ್ಲಿ ತೆರೆಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಗೊತ್ತೇ ಇದೆ. ಈ ಚಿತ್ರವನ್ನು ನೋಡಿರುವ ಅನೀಜ್ ಬಜ್ ಮಿ ಅವರು ಕಿಶನ್ ಅವರ ತಾಂತ್ರಿಕ ಬುದ್ಧಿಮತ್ತೆಗೆ ಬೆರಗಾಗಿದ್ದಾರೆ.

ತಾಂತ್ರಿಕ ಬಳಗದಲ್ಲಿ ಮಾಸ್ಟರ್ ಕಿಶನ್

ಈಗ ತಮ್ಮ ಮುಂದಿನ ಚಿತ್ರ ನೋ ಎಂಟ್ರಿ ಮೇ ಎಂಟ್ರಿ ಚಿತ್ರದಲ್ಲಿ ಅವರ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನರ್

ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿರುವ ನೋ ಎಂಟ್ರಿ ಮೇ ಎಂಟ್ರಿ ಚಿತ್ರದಲ್ಲಿ ಕಿಶನ್ ಅವರು ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಶೀಘ್ರದಲ್ಲೇ ಮುಂಬೈಗೆ ಹಾರಲಿರುವ ಕಿಶನ್

ಸದ್ಯಕ್ಕೆ ಅವರು ಕೇರ್ ಆಫ್ ಫುಟ್ ಪಾತ್ 2 ಚಿತ್ರದಲ್ಲಿ Master Kishenಬಿಜಿಯಾಗಿದ್ದಾರೆ. ಅದರ ಚಿತ್ರೀಕರಣ ಮುಗಿದ ಕೂಡಲೆ ಕಿಶನ್ ಮುಂಬೈಗೆ ಹಾರಲಿದ್ದಾರೆ.

ಎರಡೂ ಕಡೆ ಇಶಾ ಡಿಯೋಲ್ ಇದ್ದಾರೆ

ಇನ್ನು ಕೇರ್ ಆಫ್ ಫುಟ್ ಪಾತ್ ಚಿತ್ರದಲ್ಲಿ ಇಶಾ ಡಿಯೋಲ್ ಅವರು ವಕೀಲೆಯ ಪಾತ್ರ ಪೋಷಿಸಿದ್ದಾರೆ. ಅವರು ನೋ ಎಂಟ್ರಿ ಚಿತ್ರದಲ್ಲೂ ಇದ್ದರು. ಈಗ ನೋ ಎಂಟ್ರಿ ಮೇ ಎಂಟ್ರಿ ಚಿತ್ರದಲ್ಲೂ ಅಭಿನಯಿಸಲಿದ್ದಾರೆ.

English summary
Sandalwood multi-talented young filmmaker Master Kishen is in cloud nine. The reason behind his happiness is that the actor will shortly be working on Bollywood's Superstar Salman Khan starrer No Entry Mein Entry. However, Kishen will not be acting or directing the film, but he will be part of the technical team of No Entry Mein Entry.
Please Wait while comments are loading...