twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಹೇಳಿ ಲಸಿಕೆ ಪಡೆದ್ರಾ ದರ್ಶನ್ 'ಅರ್ಜುನ್' ಚಿತ್ರದ ನಾಯಕಿ? ಪ್ರತಿಕ್ರಿಯೆ ನೀಡಿದ ನಟಿ

    |

    ಕೊರೊನಾ ಅಟ್ಟಹಾಸದ ನಡುವೆಯೂ ಅನೇಕರು ಲಸಿಕೆ ಪಡೆಯತ್ತಿದ್ದಾರೆ. ಕೊರೊನಾದಿಂದ ರಕ್ಷಿಸಿಕೊಳ್ಳಲು ಈಗಾಗಲೇ ಅನೇಕರು ವ್ಯಾಕ್ಸಿನ್ ಪಡೆದಿದ್ದಾರೆ. ಅನೇಕ ಸಿನಿ ಸೆಲೆಬ್ರಿಟಿಗಳು ಸಹ ಲಸಿಕೆ ಪಡೆದು ಅಭಿಮಾನಿಗಳಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಜನ ವ್ಯಾಕ್ಸಿನ್ ಮೊರೆ ಹೋಗಿದ್ದಾರೆ. ಆದರೀಗ ಲಸಿಕೆ ಅಭಾವ ಉಂಟಾಗಿದೆ.

    ದೇಶದಲ್ಲಿ ಜನ ಲಸಿಕೆ ಸಿಗದೆ ಪರದಾಡುತ್ತಿದ್ದಾರೆ. ಈ ನಡುವೆ ದರ್ಶನ್ ನಟನೆಯ ಅರ್ಜುನ್ ಸಿನಿಮಾದ ನಟಿ, ಪ್ರಿಯಾಂಕಾ ಚೋಪ್ರಾ ಸಹೋದರಿ, ಮೀರಾ ಚೋಪ್ರಾ ಸುಳ್ಳು ಹೇಳಿ ಲಸಿಕೆ ಪಡೆದಿದ್ದಾರೆ ಎನ್ನುವ ಸುದ್ದಿ ಬೆಳಕಿಗೆ ಬಂದಿದೆ. ಆದರೆ ಇದನ್ನು ಮೀರಾ ತಳ್ಳಿ ಹಾಕಿದ್ದಾರೆ. ಮುಂದೆ ಓದಿ...

    ಫ್ರಂಟ್ ಲೈನ್ ವರ್ಕರ್ ಎಂದು ಲಸಿಕೆ ಪಡೆದ್ರಾ ಮೀರಾ?

    ಫ್ರಂಟ್ ಲೈನ್ ವರ್ಕರ್ ಎಂದು ಲಸಿಕೆ ಪಡೆದ್ರಾ ಮೀರಾ?

    ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರೂ ಸಲಿಕೆ ಪಡೆಯಬಹುದು ಎಂದು ಹೇಳಿದೆ. ನೋಂದಣಿ ಮಾಡಿಸಿ ಸರದಿಯಂತೆ ಲಸಿಕೆ ಪಡೆಯಬೇಕಾಗಿದೆ. ಆದರೆ ಮೀರಾ ಫ್ರಂಟ್ ಲೈನ್ ವರ್ಕರ್ ಎಂದು ಸುಳ್ಳು ಹೇಳಿ ಲಸಿಕೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಮುಂಬೈನ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಮೀರಾ ಲಸಿಕೆ ಪಡೆದಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    'ಬೆಂಗಳೂರಿನಲ್ಲಿ ಬೆಡ್ ಸಿಕ್ಕಿಲ್ಲ': ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಮೀರಾ ಚೋಪ್ರಾ'ಬೆಂಗಳೂರಿನಲ್ಲಿ ಬೆಡ್ ಸಿಕ್ಕಿಲ್ಲ': ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಮೀರಾ ಚೋಪ್ರಾ

    ಸಾಮಾಜಿಕ ಜಾಲತಾಣದಲ್ಲಿ ಮೀರಾ ಐಡಿ ವೈರಲ್

    ಸಾಮಾಜಿಕ ಜಾಲತಾಣದಲ್ಲಿ ಮೀರಾ ಐಡಿ ವೈರಲ್

    ಬಳಿಕ ಎಂ ಎಲ್ ಸಿ ನಿರಂಜನ್, ಮೀರಾ ಐಡಿ ಕಾರ್ಡ್ ಅನ್ನು ಹೊಂಚಿಕೊಂಡಿದ್ದಾರೆ. ಈ ಐಡಿಯಲ್ಲಿ ಮೀರಾ ಓಂ ಸಾಯಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ಇದೆ. ಈ ಕಾರ್ಡ್ ಮೂಲಕ ಲಸಿಕೆ ಪಡೆದಿದ್ದಾರೆ ಎಂದು ನಿರಂಜನ್ ಆರೋಪಿಸಿದ್ದಾರೆ. ಈ ಫೋಟೋ ಹಂಚಿಕೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಯಿತು. ಬಳಿಕ ನಿರಂಜನ್ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

    ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿದ್ದೀನಿ

    ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿದ್ದೀನಿ

    ಇದೀಗ ಪ್ರತಿಕ್ರಿಯೆ ನೀಡಿರುವ ನಟಿ ಮೀರಾ, 'ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಬಯಸುತ್ತೇವೆ. ನಾನು 1 ತಿಂಗಳ ಪ್ರಯತ್ನದ ನಂತರ ನೋಂದಾಯಿಸಿ ಆಧಾರ್ ಕಾರ್ಡ್ ನೀಡಿ ಲಸಿಕೆ ಪಡೆದಿದ್ದೀನಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ನನ್ನದಲ್ಲ. ನೋಂದಣಿಗಾಗಿ ನಾನು ಆಧಾರ್ ಮಾತ್ರ ನೀಡಿದ್ದೇನೆ. ಯಾವುದೇ ಐಡಿ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ಬಗ್ಗೆ ನನಗೆ ಗೊತ್ತಿಲ. ನಾನು ಮೊದಲು ನೋಡಿದ್ದು ಟ್ವಿಟ್ಟರ್ ನಲ್ಲಿ' ಎಂದಿದ್ದಾರೆ.

    ಕೋವಿಡ್ ನಿಂದ ಸಂಬಂಧಿಕರನ್ನು ಕಳೆದುಕೊಂಡಿರುವ ಮೀರಾ

    ಕೋವಿಡ್ ನಿಂದ ಸಂಬಂಧಿಕರನ್ನು ಕಳೆದುಕೊಂಡಿರುವ ಮೀರಾ

    ಇತ್ತೀಚಿಗೆ ಕೋವಿಡ್ ನಿಂದ ಇಬ್ಬರನ್ನು ಕಳೆದುಕೊಂಡ ಬಗ್ಗೆ ಮಾತನಾಡಿ ಮೀರಾ ಬೇಸರ ವ್ಯಕ್ತಪಡಿಸಿದ್ದರು. 'ಕೇವಲ ಹತ್ತು ದಿನದಲ್ಲಿ ನನ್ನ ಇಬ್ಬರು ಸಂಬಂಧಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಬ್ಬ ಸಹೋದರಿಗೆ ಎರಡು ದಿನಗಳಾದರೂ ಐಸಿಯು ಬೆಡ್ ಸಿಗಲಿಲ್ಲ. ಮತ್ತೊಬ್ಬರು ಆಕ್ಸಿಜನ್ ಮಟ್ಟ ಕುಸಿತಗೊಂಡು ಮೃತಪಟ್ಟಿದ್ದಾರೆ. ಇಬ್ಬರಿಗೂ ವಯಸ್ಸು ಸುಮಾರು 40 ವರ್ಷ ಆಗಿತ್ತು' ಎಂದು ಅಳಲು ತೋಡಿಕೊಂಡಿದ್ದರು.

    Recommended Video

    ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada
    ಮೀರಾ ಸಿನಿಮಾಗಳು

    ಮೀರಾ ಸಿನಿಮಾಗಳು

    ಕನ್ನಡದ ಅರ್ಜುನ್ ಸಿನಿಮಾ ಸೇರಿದಂತೆ ಮಿರಾ ಚೋಪ್ರಾ ತಮಿಳು ಮತ್ತು ತೆಲುಗಿನಲ್ಲಿ ಬಂಗಾರಂ, ಜಾಂಬವಂ, ಮರುಧಾಮಲೈ, ಕಲೈ, ವನಾ, ಜಗನ್ಮೋಹಿನಿ ಮತ್ತು ಕಿಲಾಡಿ ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ 'ಸೆಕ್ಷನ್-375' ವೆಬ್-ಸರಣಿ ನಟಿಸಿದರು. ಇದರಲ್ಲಿ ರಿಚಾ ಚಡ್ಡಾ, ಅಕ್ಷಯ್ ಖನ್ನಾ ಮತ್ತು ರಾಹುಲ್ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

    English summary
    Actress Meera Chopra denies allegations of got vaccine as Frontline worker.
    Sunday, May 30, 2021, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X