For Quick Alerts
  ALLOW NOTIFICATIONS  
  For Daily Alerts

  ''ಆ ದೃಶ್ಯಗಳಲ್ಲಿ' ನಟಿಸಿದ್ದೀನಿ, ಇದ್ಯಾವ ಲೆಕ್ಕ?': ಬೆತ್ತಲೆ ಚಿತ್ರದ ಬಗ್ಗೆ ಮಿಲಿಂದ್ ಸ್ಪಷ್ಟನೆ:

  By ಫಿಲ್ಮೀಬೀಟ್ ಡೆಸ್ಕ್‌
  |

  ನಟ, ಮಾಡೆಲ್ ಮಿಲಿಂದ್ ಸೊಮನ್ ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿದ್ದರು. ಅವರು ತಮ್ಮ 55ನೇ ವರ್ಷದ ಹುಟ್ಟುಹಬ್ಬದಂದು ತಮ್ಮ ಬೆತ್ತಲೆ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

  ಕೂಡಲೇ ಆ ಚಿತ್ರವನ್ನು ಡಿಲೀಟ್ ಮಾಡಿ ಎಂದು ಹಲವರು ಮಿಲಿಂದ್ ಸೊಮನ್ ಅನ್ನು ಒತ್ತಾಯಿಸಿದ್ದರು. ವ್ಯಕ್ತಿಯೊಬ್ಬರು, ಚಿತ್ರದ ವಿರುದ್ಧ ದೂರು ಸಹ ನೀಡಿದ್ದರು. ಆದರೆ ಚಿತ್ರ ಹಂಚಿಕೊಂಡು ಒಂದು ತಿಂಗಳ ಬಳಿಕ ಈಗ ಆ ಬಗ್ಗೆ ಮಾತನಾಡಿದ್ದಾರೆ ಮಿಲಿಂದ್ ಸೊಮನ್.

  'ಇನ್‌ಸ್ಟಾಗ್ರಾಂ ಆ ಚಿತ್ರವನ್ನು ಡಿಲೀಟ್ ಮಾಡಿಲ್ಲ, ಅದು ಯಾವ ತಕರಾರನ್ನು ಎತ್ತಿಲ್ಲ, ಹಾಗಿದ್ದರೆ ಸಮಸ್ಯೆ ಏನು?' ಎಂದು ಮರುಪ್ರಶ್ನೆ ಹಾಕಿದ್ದಾರೆ ಮಿಲಿಂದ್.

  ನಾನು ಮಾಡೆಲ್ ಆಗಿ ಹಣ ಪಡೆದು ಹಲವು ಬೆತ್ತಲೆ ಫೊಟೊಶೂಟ್ ಮಾಡಿದ್ದೇನೆ. ಅಷ್ಟೇ ಅಲ್ಲ, ಕೆಲವು ಸೆಕ್ಸ್‌ ದೃಶ್ಯಗಳಲ್ಲಿ ಸಹ ನಟಿಸಿದ್ದೇನೆ, ಹಾಗಿದ್ದ ಮೇಲೆ ನನ್ನ ಬೆತ್ತಲೆ ಚಿತ್ರವನ್ನು ನಾನೇಕೆ ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು, ನಿಮಗೆ ಇಷ್ಟವಿಲ್ಲವೆಂದರೆ ನನ್ನನ್ನು ಫಾಲೊ ಮಾಡಬೇಡಿ' ಎಂದಿದ್ದಾರೆ ಮಿಲಿಂದ್.

  ''ನಿಮ್ಮ ತಾಯಿ ಸಹ ಇನ್‌ಸ್ಟಾಗ್ರಾಂ ನಲ್ಲಿದ್ದಾರೆ?' ಎಂದು ಕೆಲವರು ನನ್ನನ್ನು ಪ್ರಶ್ನೆ ಮಾಡಿದ್ದರು, ಹೌದು, ನನ್ನ ತಾಯಿ ಇನ್‌ಸ್ಟಾಗ್ರಾಂ ನಲ್ಲಿದ್ದಾರೆ. ಆದರೆ ಆಕೆ ಅಂಥಹಾ ಪೇಜ್‌ಗಳನ್ನು ತೆರೆಯಬಾರದು, ನೋಡಬಾರದು, ಅದು ಆಕೆಯ ಆಯ್ಕೆ ಎಂದಿದ್ದಾರೆ ಮಿಲಿಂದ್ ಸೊಮನ್.

  'ಜನಿಫರ್ ಲೊಪೇಜ್ ತನ್ನ 50ನೇ ವರ್ಷದ ಹುಟ್ಟುಹಬ್ಬಕ್ಕೆ ತನ್ನ ಬೆತ್ತಲೆ ಚಿತ್ರ ಪ್ರಕಟಿಸಿದ್ದರು, ಅದರ ಬಗ್ಗೆ ಜನ ಏನು ಹೇಳುತ್ತಾರೆ? ಆಕೆಯೇ ಪ್ರಕಟಿಸಿರುವಾಗ ನನ್ನದೇನು ಮಹಾ' ಎಂದಿದ್ದಾರೆ ಮಿಲಿಂದ್ ಸೊಮನ್.

  English summary
  Actor, Model Milind Soman talked about his beach photo which created controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X