»   » ಮನೆಯಿಂದ 'ಶಾಹೀದ್ ಕಪೂರ್'ರನ್ನ ಹೊರಹಾಕಿದ್ದರಂತೆ ಪತ್ನಿ.!

ಮನೆಯಿಂದ 'ಶಾಹೀದ್ ಕಪೂರ್'ರನ್ನ ಹೊರಹಾಕಿದ್ದರಂತೆ ಪತ್ನಿ.!

Posted By:
Subscribe to Filmibeat Kannada

ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ಬಾಲಿವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿದೆ. ಬಹುತೇಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಗಮನ ಸೆಳೆಯುತ್ತೆ. ಆದ್ರೆ, ಒಂದು ಸಮಯದಲ್ಲಿ ಪತ್ನಿ ಮೀರಾ ರಜಪೂತ್ ತನ್ನ ಗಂಡ ಶಾಹೀದ್ ಕಪೂರ್ ಅವರನ್ನ ಮನೆಯಿಂದ ಹೊರಗೆ ಹಾಕಿದ್ದರು ಎಂಬ ವಿಷ್ಯ ಈಗ ಬಹಿರಂಗವಾಗಿದೆ.

ನೇಹಾ ದುಪಾಡಿಯಾ ನಡೆಸಿಕೊಡುವ 'BFFs with Vogue' ಟಾಕ್ ಶೋನಲ್ಲಿ ಭಾಗವಹಿಸಿದ್ದ ಮೀರಾ ರಜಪೂತ್ ತನ್ನ ಪತಿಯನ್ನ ಮನೆಯಿಂದ ಹೊರಗೆ ಕಳುಹಿಸಿದ್ದರು ಎಂಬುದನ್ನ ಹೇಳಿಕೊಂಡಿದ್ದರು.

'ಪದ್ಮಾವತ್' ಸಿನಿಮಾದ ಶೂಟಿಂಗ್ ವೇಳೆ ಶಾಹೀದ್ ಕಪೂರ್ ಮನೆಗೆ ಬೆಳಿಗ್ಗೆ 8 ಗಂಟೆಗೆ ಬರುತ್ತಿದ್ದರಂತೆ. ಮಧ್ಯಾಹ್ನ 2 ಗಂಟೆ ವರೆಗೂ ನಿದ್ದೆ ಮಾಡುತ್ತಿದ್ದರಂತೆ. ಇನ್ನು ಅವರ ಮಗಳು ಮಿಶಾ ತುಂಬ ಆಟವಾಡಲು ಶುರು ಮಾಡುತ್ತಿದ್ದರು. ಆಗ ಶಾಹೀದ್ ಗೆ ತೊಂದರೆಯಾಗುತ್ತಿತ್ತು.

Mira Rajput Once Threw Hubby Shahid Kapoor Out Of Their House

ಆದ್ರೆ, ಶಾಹೀದ್ ಏನೂ ಮಾಡಲು ಆಗುತ್ತಿರಲಿಲ್ಲ. ಯಾಕಂದ್ರೆ ಪ್ರೀತಿಯ ಮಗಳ ತರಲೆ ಹೆಚ್ಚಾಗಿತ್ತು. ಇದನ್ನ ಗಮನಿಸಿದ ಪತ್ನಿ ಮೀರಾ, ಶಾಹೀದ್ ಕಪೂರ್ ಅವರನ್ನ ಸಿನಿಮಾ ಮುಗಿಯವರೆಗೂ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಸೂಚಿಸಿ ಹೋಟೆಲ್ ನಲ್ಲಿ ಉಳಿಯುವಂತೆ ಮಾಡಿದ್ದರಂತೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ 'ಪದ್ಮಾವತ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ದೀಪಿಕಾ ಪಡುಕೋಣೆ ಮತ್ತು ರಣ್ವಿರ್ ಸಿಂಗ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಶಾಹೀದ್ ಕಪೂರ್ ದೀಪಿಕಾ ಪತಿಯಾಗಿ ಕಾಣಿಸಿಕೊಂಡಿದ್ದರು.

English summary
Mira Rajput revealed how she made Shahid Kapoor live in a hotel while he was shooting for Sanjay Leela Bhansali's Padmaavat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X