»   » ಆ ಕಿರೀಟದಲ್ಲಿದ್ದದ್ದು ಕೇವಲ ಗಾಜಿನ ಚೂರುಗಳಷ್ಟೇ

ಆ ಕಿರೀಟದಲ್ಲಿದ್ದದ್ದು ಕೇವಲ ಗಾಜಿನ ಚೂರುಗಳಷ್ಟೇ

Posted By:
Subscribe to Filmibeat Kannada

ವಿಶ್ವಸುಂದರಿ, ಭುವನಸುಂದರಿ, ಆ ಸುಂದರಿ ಈ ಸುಂದರಿ ಎಂದು ಆಯ್ಕೆ ಮಾಡಿ ಅವರ ತಲೆಮೇಲೆ ಫಳ ಫಳ ಎಂದು ಹೊಳೆಯುವ ಕಿರೀಟವನ್ನೂ ಇಡುತ್ತಾರೆ. ಎಲ್ಲರ ಕಣ್ಣು ಆ ಕಿರೀಟದ ಮೇಲೆ ಇರುತ್ತದೆ. ವಜ್ರ, ರತ್ನಖಚಿತ ಕಿರೀಟ ಎಂದೇ ಎಲ್ಲರೂ ಮೈಮರೆಯುತ್ತಾರೆ.

ಹೊಳೆಯುವುದೆಲ್ಲಾ ಚಿನ್ನ, ವಜ್ರವೆಂದೇ ಭಾವಿಸುತ್ತಾರೆ. ಆದರೆ ಈ ಸುದ್ದಿ ಓದಿದರೆ ನಿಮಗೇ ಆ ಕಿರೀಟದ ಅಸಲಿ ಬಣ್ಣ ಗೊತ್ತಾಗುತ್ತದೆ. ಮಿಸ್ ಏಷ್ಯಾ ಫೆಸಿಫಿಕ್ ಕಿರೀಟದಲ್ಲಿರುವುದು ವಜ್ರಗಳಲ್ಲ, ಸಾಧಾರಣ ಗಾಜಿನ ಚೂರುಗಳು ಎಂಬುದು ಸಾಬೀತಾಗಿದೆ.

Srishti Rana

ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ವಜ್ರಖಚಿತ ಕಿರೀಟವೆಂದೇ ಭಾವಿಸಿ ಈಗ ಇಂಗುತಿಂಗ ಮಂಗನಂತಾಗಿದೆ ಅವರ ಪರಿಸ್ಥಿತಿ. ಅಕ್ಟೋಬರ್ ತಿಂಗಳ 30ರಂದು ದಕ್ಷಿಣ ಕೊರಿಯಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಏಷ್ಯಾ ಫೆಸಿಫಿಕ್ ಆಗಿ ನಮ್ಮ ದೇಶದ 21ರ ಹರೆಯದ ಸೃಷ್ಟಿರಾಣಾ ಆಯ್ಕೆಯಾಗಿದ್ದರು.

ಅವರು ಸ್ವದೇಶಕ್ಕೆ ಆಗಮಿಸಿದಾಗ ತಮ್ಮ ಜೊತೆ ಕಿರೀಟವನ್ನೂ ತಂದಿದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳು ವಜ್ರಖಚಿತ ಕಿರೀಟ ಎಂದೇ ಭಾವಿಸಿ ತೆರಿಗೆ ಕಟ್ಟಬೇಕು ಎಂದು ಅದನ್ನು ಸ್ವಾಧೀನ ಪಡಿಸಿಕೊಂಡಿದ್ದರು.

ಬಳಿಕ ಕಿರೀಟವನ್ನು ತಜ್ಞರ ಬಳಿ ಪರೀಕ್ಷಿಸಿದಾಗ ಅದನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿತ್ತು. ಅದಕ್ಕೆ ಹುದುಗಿಸಿದ್ದ ಹರಳುಗಳು ಗಾಜಿನಿಂದ ತಯಾರಾಗಿದ್ದವು. ಇದರಿಂದ ಬೇಸ್ತುಬಿದ್ದ ಕಸ್ಟಮ್ಸ್ ಅಧಿಕಾರಿಗಳು ಕಡೆಗೆ ಕಿರೀಟವನ್ನು ಸೃಷ್ಟಿ ರಾಣಾಗೆ ಹಿಂತಿರುಗಿಸಿ ಕೈ ತೊಳೆದುಕೊಂಡಿದ್ದಾರೆ. (ಏಜೆನ್ಸೀಸ್)

English summary
The gorgeous Srishti Rana, who had won Miss Asia Pacific World 2013 pageant and brought home the coveted crown, has been duped it seems. The diamonds and gems studded tiara was nothing but fake!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada