»   » ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಮೊದಲ ಪತಿ(?) ಬರಲೇ ಇಲ್ಲ!

ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಮೊದಲ ಪತಿ(?) ಬರಲೇ ಇಲ್ಲ!

Posted By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ನಟಿ ಶ್ರೀದೇವಿಯ ಹಠಾತ್ ನಿಧನದಿಂದ ಇಡೀ ಭಾರತೀಯ ಚಿತ್ರರಂಗವೇ ಮಮ್ಮಲ ಮರುಗಿದೆ. ಮುಂಬೈನ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಿನ್ನೆ ಬೆಳಗ್ಗೆ 9.30 ರಿಂದ 12.30 ರವರೆಗೆ ನಟಿ ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಭಾರತೀಯ ಚಿತ್ರರಂಗದ ಹಲವು ತಾರೆಯರು ಹಾಗೂ ಸಾವಿರಾರು ಅಭಿಮಾನಿಗಳು ಶ್ರೀದೇವಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಮೆಗಾ ಸ್ಟಾರ್ ಚಿರಂಜೀವಿ, ಶಾರೂಖ್ ಖಾನ್, ಐಶ್ವರ್ಯ ರೈ ಬಚ್ಚನ್, ಜಯಾ ಬಚ್ಚನ್, ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್, ಹಿರಿಯ ನಟಿ ರೇಖಾ, ಕಾಜೋಲ್, ಅಜಯ್ ದೇವ್ಗನ್ ಸೇರಿದಂತೆ ಹಲವರು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿ, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಆದ್ರೆ, ಶ್ರೀದೇವಿಯ ಮೊದಲ ಪತಿ (?) ಮಾತ್ರ ಅತ್ತ ಕಾಣಿಸಿಕೊಳ್ಳಲೇ ಇಲ್ಲ.! ಮುಂದೆ ಓದಿರಿ....

ಮಿಥುನ್ ಚಕ್ರವರ್ತಿ ಗೈರು

ನಟಿ ಶ್ರೀದೇವಿ ಹಾಗೂ ಮಿಥುನ್ ಚಕ್ರವರ್ತಿ ಗುಟ್ಟಾಗಿ ಮದುವೆ ಆಗಿದ್ದರು ಎಂಬ ಸಂಗತಿ ಇದೀಗ ಗುಟ್ಟಾಗಿ ಉಳಿದಿಲ್ಲ. ಮೂರು ವರ್ಷಗಳ ಕಾಲ ನಟಿ ಶ್ರೀದೇವಿ ಜೊತೆಗೆ ಸಂಸಾರ ಮಾಡಿದ್ದ ಮಿಥುನ್ ಚಕ್ರವರ್ತಿ (?), ನಟಿ ಶ್ರೀದೇವಿ ಅವರ ಅಂತಿಮ ದರ್ಶನ ಪಡೆಯಲು ಬರಲೇ ಇಲ್ಲ.

ಶ್ರೀದೇವಿ-ಮಿಥುನ್ ಚಕ್ರವರ್ತಿ ಮಧ್ಯೆ ಪ್ರೀತಿ ಹುಟ್ಟಿದ್ದು ಹೇಗೆ.?

ಅದು, 1980 ರ ದಶಕ... ಬಾಲಿವುಡ್ ನಲ್ಲಿ ಮಿಥುನ್ ಚಕ್ರವರ್ತಿ ಹವಾ ಜೋರಾಗಿದ್ದ ಸಮಯ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ನೀಡುತ್ತಲೇ ಇದ್ದ ಮಿಥುನ್ ಚಕ್ರವರ್ತಿಗೆ ಶ್ರೀದೇವಿ ಜೋಡಿಯಾದರು. 'ಜಾಗ್ ಉಠಾ ಇನ್ಸಾನ್', 'ವತನ್ ಕೇ ರಾಖ್ ವಾಲೇ', 'ವಕ್ತ್ ಕಿ ಆವಾಝ್', 'ಗುರು' ಸಿನಿಮಾಗಳಲ್ಲಿ ಮಿಥುನ್ ಹಾಗೂ ಶ್ರೀದೇವಿ ಜೊತೆಯಾದರು. ಶೂಟಿಂಗ್ ಸೆಟ್ ನಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಕ್ರಮೇಣ ಇಬ್ಬರ ಮಧ್ಯೆ ಪ್ರೀತಿ ಚಿಗುರಿತು.

ಮಿಥುನ್ ಗಾಗಿ ಬೋನಿಗೆ ರಾಖಿ ಕಟ್ಟಿದ್ದ ಶ್ರೀದೇವಿ

ಒಂದ್ಕಡೆ, ಪ್ರೇಮದ ಅಮಲಿನಲ್ಲಿ ಶ್ರೀದೇವಿ ಹಾಗೂ ಮಿಥುನ್ ಚಕ್ರವರ್ತಿ ತೇಲುತ್ತಿದ್ದರೆ, ಮತ್ತೊಂದೆಡೆ ನಿರ್ಮಾಪಕ ಬೋನಿ ಕಪೂರ್ ಗೂ ಶ್ರೀದೇವಿ ಮೇಲೆ ಪ್ರೀತಿ ಇತ್ತು. ಇದನ್ನ ಗಮನಿಸಿದ ಮಿಥುನ್ ಚಕ್ರವರ್ತಿ, ಬೋನಿ ಕಪೂರ್ ಗೆ ರಾಖಿ ಕಟ್ಟುವಂತೆ ಶ್ರೀದೇವಿಗೆ ಸೂಚಿಸಿದರು. ಬೋನಿ ಕಪೂರ್ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದ ಶ್ರೀದೇವಿ, ಮಿಥುನ್ ನ ಮೆಚ್ಚಿಸಲು ಬೋನಿ ಕಪೂರ್ ಗೆ ರಾಖಿ ಕಟ್ಟಿದರು. ಹಾಗಂತ ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಮಾಗಝೀನ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದರು.

1985 ರಲ್ಲಿ ಮಿಥುನ್-ಶ್ರೀದೇವಿ ಮದುವೆ.?

ಬೋನಿ ಕಪೂರ್ ಗೆ ಶ್ರೀದೇವಿ ರಾಖಿ ಕಟ್ಟಿದ್ಮೇಲೆ, ಶ್ರೀದೇವಿ-ಮಿಥುನ್ ನಡುವಿನ ಆತ್ಮೀಯತೆ ಹೆಚ್ಚಾಯಿತು. ಅಂದಿನ ಕಾಲದ ಮ್ಯಾಗಝೀನ್ ಒಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, 1985 ರಲ್ಲಿ ಶ್ರೀದೇವಿ ಹಾಗೂ ಮಿಥುನ್ ಚಕ್ರವರ್ತಿ ಗುಟ್ಟಾಗಿ ಮದುವೆ ಆದರು. ಮ್ಯಾಗಝೀನ್ ವೊಂದರಲ್ಲಿ ಇವರಿಬ್ಬರ ಮ್ಯಾರೇಜ್ ಸರ್ಟಿಫಿಕೇಟ್ ಪ್ರಕಟ ಆಗಿತ್ತು.

ವಿಕಿಪಿಡಿಯಾದಲ್ಲಿ ಉಲ್ಲೇಖ

ಶ್ರೀದೇವಿ-ಮಿಥುನ್ ಚಕ್ರವರ್ತಿ ಮದುವೆ ಆಗಿದ್ದರು ಎಂಬುದರ ಬಗ್ಗೆ ವಿಕಿಪಿಡಿಯಾದಲ್ಲಿ ಉಲ್ಲೇಖಿಸಲಾಗಿದೆ.

ಅದಾಗಲೇ ಮಿಥುನ್ ಗೆ ಮದುವೆ ಆಗಿತ್ತು

ನಟಿ ಶ್ರೀದೇವಿಯನ್ನ ವರಿಸುವ ಮುನ್ನವೇ, 1979 ರಲ್ಲಿ ಯೋಗಿತಾ ಬಾಲಿ ಅವರನ್ನ ಮಿಥುನ್ ಚಕ್ರವರ್ತಿ ಮದುವೆ ಆಗಿದ್ದರು. ಹೆಂಡತಿ ಇದ್ದರೂ, ಶ್ರೀದೇವಿ ಪ್ರೇಮ ಪಾಶದಲ್ಲಿ ಸಿಲುಕಿದ್ದರು ಮಿಥುನ್.

ಮಿಥುನ್-ಯೋಗಿತಾ ಸಂಸಾರದಲ್ಲಿ ಬಿರುಗಾಳಿ.

ಮಿಥುನ್-ಶ್ರೀದೇವಿ ಮದುವೆ ಸುದ್ದಿ ಕೇಳಿ ಬಂದ್ಮೇಲೆ, ಮಿಥುನ್-ಯೋಗಿತಾ ಸಂಸಾರದಲ್ಲಿ ಬಿರುಗಾಳಿ ಬೀಸಿತು. ಆತ್ಮಹತ್ಯೆ ಮಾಡಿಕೊಳ್ಳಲು ಯೋಗಿತಾ ಬಾಲಿ ಯತ್ನಿಸಿದರು ಎಂಬ ಗುಸು ಗುಸು ಕೇಳಿಬಂತು.

1988 ರಲ್ಲಿ ಬ್ರೇಕಪ್

ಗುಟ್ಟಾಗಿ ಮದುವೆ ಆದ ಬಗ್ಗೆ ಮಿಥುನ್ ಆಗಲಿ, ಶ್ರೀದೇವಿ ಆಗಲಿ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದ್ರೆ, ಇಬ್ಬರ ಸಂಬಂಧ 1988 ರಲ್ಲಿ ಮುರಿದುಬಿತ್ತು ಅಂತಾರೆ ಬಾಲಿವುಡ್ ಪಂಡಿತರು.

ಬೋನಿ ಹಿಂದೆ ಶ್ರೀದೇವಿ

ಮಿಥುನ್ ಚಕ್ರವರ್ತಿ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಶ್ರೀದೇವಿ ಒಂಟಿಯಾದರು. ಈ ನಡುವೆ ಶ್ರೀದೇವಿಗೆ ಬೋನಿ ಕಪೂರ್ ಆಶ್ರಯ ನೀಡಿದರು. ಇಬ್ಬರ ನಡುವೆ ಮತ್ತೆ ಅನ್ಯೋನ್ಯತೆ ಬೆಳೆಯಿತು.

ತಾಯಿಯಾದ ಶ್ರೀದೇವಿ

ಬೋನಿ ಕಪೂರ್ ಜೊತೆಗಿನ ಪ್ರೀತಿಯ ಫಲವಾಗಿ ಶ್ರೀದೇವಿ ಗರ್ಭಿಣಿ ಆದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ಅದಾಗಲೇ ಮದುವೆಯಾಗಿ ಮನೆಯಲ್ಲಿ ಪತ್ನಿ ಮೋನಾ ಕಪೂರ್ ಇದ್ದರೂ 1996 ರಲ್ಲಿ ಶ್ರೀದೇವಿಯನ್ನ ಬೋನಿ ಕಪೂರ್ ಕೈಹಿಡಿದರು.

ಮಕ್ಕಳ ಜೊತೆಗೆ ಶ್ರೀದೇವಿ

ಬೋನಿ ಕಪೂರ್ ಜೊತೆ ಮದುವೆ ಆದ್ಮೇಲೆ, ಗಂಡ-ಮನೆ-ಮಕ್ಕಳು ಅಂತಲೇ ಶ್ರೀದೇವಿ ಬಿಜಿಯಾದರು. ವರ್ಷಗಳ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಶ್ರೀದೇವಿ ಸುಖಿ ಜೀವನ ನಡೆಸುತ್ತಿದ್ದಾರೆ ಅಂತ ಎಲ್ಲರೂ ಭಾವಿಸುತ್ತಿರುವಾಗಲೇ, ಆಕೆ ಹಠಾತ್ತಾಗಿ ನಿಧನರಾದರು. ಶ್ರೀದೇವಿ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯಿತು. ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಆದ್ರೆ, ಮಿಥುನ್ ಚಕ್ರವರ್ತಿ ಮಾತ್ರ ಅತ್ತ ಸುಳಿಯಲೇ ಇಲ್ಲ.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದ ಶ್ರೀದೇವಿ.!

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

English summary
Bollywood Actor Mithun Chakraborthy did not attend Sridevi's funeral.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada