»   » ಫೆಬ್ರವರಿಯಲ್ಲಿ ಬಾಲಿವುಡ್ ಧಮಾಕಾ, 5 ಚಿತ್ರಗಳು ತೆರೆಗೆ

ಫೆಬ್ರವರಿಯಲ್ಲಿ ಬಾಲಿವುಡ್ ಧಮಾಕಾ, 5 ಚಿತ್ರಗಳು ತೆರೆಗೆ

Posted By:
Subscribe to Filmibeat Kannada

ಭಾರತದಲ್ಲಿ ಬಾಲಿವುಡ್ ಅಭಿಮಾನಿಗಳು ತಮ್ಮ ನೆಚ್ಚಿನ ಚಿತ್ರಗಳಿಗಾಗಿ ಕಾಯುತ್ತಿರುತ್ತಾರೆ. ಅವರಿಗಾಗಿ ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆ ಆಗಬಹುದಾದ ಹಲವು ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಫೆಬ್ರವರಿ ತಿಂಗಳು ಬಾಲಿವುಡ್ ಪ್ರೇಮಿಗಳ ಮನಸ್ಸು ತಣಿಸುವುದರಲ್ಲಿ ಅನುಮಾನವಿಲ್ಲ. ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಟಿಸಿರುವ 'ಶಮಿತಾಬ್‌'ನಿಂದ ವರುಣ್ ಧವನ್ ನಟಿಸಿರುವ 'ಬದ್ಲಾಪುರ'ದವರೆಗೆ ಹಲವು ಚಿತ್ರಗಳನ್ನು ಪ್ರೇಕ್ಷಕರು ಸವಿಯಬಹುದು.

ಶಮಿತಾಬ್‌ನಲ್ಲಿ ಅಮಿತಾಬ್ ಬಚ್ಚನ್, ಧನುಶ್, ಅಕ್ಷರಾ ಹಾಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪಾ ಹಾಗೂ ಚೀನಿ ಕಮ್‌ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಬಾಲ್ಕಿ ಅವರ ಆಕ್ಷನ್, ಕಟ್‌ನಲ್ಲಿ ಈ ಚಿತ್ರ ಮೂಡಿಬಂದಿದೆ. [ಧನುಷ್ ಜೊತೆ ಚಿಟ್ ಚಾಟ್]

'ಡರ್ಟಿ ಪಾಲಿಟಿಕ್ಸ್' ಒಂದು ಗಂಭೀರ ಕಥಾ ಹಂದರ ಹೊಂದಿದ್ದರೂ ಮಲ್ಲಿಕಾ ಶೆರಾವತ್‌ಳ ಮಾದಕತೆಗೇನೂ ಕಡಿಮೆ ಇಲ್ಲ. ಈ ಚಿತ್ರ ಫೆ. 13ರಂದು ದೊಡ್ಡ ತೆರೆಗೆ ಅಪ್ಪಳಿಸುವ ಅಂದಾಜಿದೆ.

ಜೊತೆಯಲ್ಲಿಯೇ ರಾಯ್ ಚಿತ್ರವೂ ಬಿಡುಗಡೆಯಾಗುತ್ತಿದೆ. ಇದರಲ್ಲಿ ರಣಬೀರ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಅರ್ಜುನ್ ರಾಮಪಾಲ್ ನಟಿಸಿದ್ದಾರೆ. ಇದೂ ಫೆ. 13ರಂದು ತೆರೆಗೆ ಅಪ್ಪಳಿಸಲಿದೆ. ಈ ಎಲ್ಲ ಚಿತ್ರಗಳ ಟ್ರೇಲರ್ ಈಗಾಗಲೇ ಜನ ಮನ ಗೆದ್ದಿವೆ.

ಶಮಿತಾಬ್

ಆರ್. ಬಾಲ್ಕಿ ನಿರ್ದೇಶನದಲ್ಲಿ ಅಮಿತಾಬ್ ಬಚ್ಚನ್, ಧನುಶ್ ಹಾಗೂ ಅಕ್ಷರಾ ಹಾಸನ್ ನಟಿಸಿದ್ದಾರೆ. ಫೆ. 6ರಂದು ತೆರೆ ಕಾಣಲಿದೆ.

ಡರ್ಟಿ ಪಾಲಿಟಿಕ್ಸ್

ಮಲ್ಲಿಕಾ ಶೆರಾವತ್ ಹಾಗೂ ಓಂ ಪುರಿ ಮುಖ್ಯ ಭೂಮಿಕೆಯಲ್ಲಿದ್ದು, ಫೆ. 13ರಂದು ಬಿಡುಗಡೆಯಾಗಲಿದೆ. ಮಲ್ಲಿಕಾ ಶೆರಾವತ್ ಇಲ್ಲಿಯೂ ತನ್ನ ಮೈಮಾಟ ಅನಾವರಣಗೊಳಿಸಿದ್ದಾರೆ.

ರಾಯ್

ರಣಬೀರ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಅರ್ಜುನ್ ರಾಮ್‌ಪಾಲ್ ನಟಿಸಿದ್ದು ಫೆ. 13ರಂದು ಬಿಡುಗಡೆಯಾಗಲಿದೆ. ಜಾಕ್ವೆಲಿನ್ ಡಬಲ್ ರೋಲ್‌ನಲ್ಲಿ ನಟಿಸಿರುವುದು ಮುಖ್ಯ.

ಬದ್ಲಾಪುರ್

ವರುಣ್ ಧವನ್ ಅವರ ಥ್ರಿಲ್ಲರ್ ಚಿತ್ರ ಬದ್ಲಾಪುರ್ ಫೆ. 20ರಂದು ತೆರೆಗೆ ಅಪ್ಪಳಿಸಲಿದೆ. ಹುಮಾ ಖುರೇಶಿ, ಯಾಮಿ ಗೌತಮ್ ಹಾಗೂ ನವಾಜುದ್ದೀನ್ ಸಿದ್ಧಿಕಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಹೇ ಬ್ರೊ

ಈ ಚಿತ್ರ 27ರಂದು ತೆರೆಕಾಣಲಿದೆ. ಗಣೇಶ್ ಆಚಾರ್ಯ, ಮಣಿಂದರ್ ಹಾಗೂ ನೂಪುರ್ ಶರ್ಮಾ ಮುಖ್ಯಭೂಮಿಕೆಯಲ್ಲಿದ್ದಾರೆ. ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಸಿಂಗ್, ಪ್ರಭುದೇವಾ ಹಾಗೂ ಗೋವಿಂದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವರು.

English summary
Bollywood industry has packed the month with five different and interesting films for you to watch for.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada