For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶ

  |

  ಚಿತ್ರರಂಗದಲ್ಲಿ ಸದ್ಯ ಡ್ರಗ್ಸ್ ಮಾಫಿಯಾದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಶೆಯ ಜಾಲ ಇಡೀ ಭಾರತೀಯ ಚಿತ್ರರಂಗವನ್ನೆ ಬೆಚ್ಚಿ ಬೀಳಿಸಿದೆ. ಇಡೀ ಸಿನಿಮಾರಂಗ ಅಂತ ಹೇಳುತ್ತಿರುವ ಬಗ್ಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಚಿತ್ರರಂಗ ಎಂದು ಧೂಷಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ.

  ಈ ಬಗ್ಗೆ ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರೋದ್ಯಮದ ವಿರುದ್ಧ ನಿರಂತವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಯಾರ ಹೆಸರನ್ನು ಉಲ್ಲೇಖಿಸದೆ ಜಯಾ ಬಚ್ಚನ್ ಕೆಲವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮುಂದೆ ಓದಿ..

  ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೇನೆ: ಕಂಗನಾ ರಣಾವತ್ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೇನೆ: ಕಂಗನಾ ರಣಾವತ್

  ಸಂಸತ್ ನಲ್ಲಿ ರವಿ ಕಿಶನ್ ಮಾತು

  ಸಂಸತ್ ನಲ್ಲಿ ರವಿ ಕಿಶನ್ ಮಾತು

  ಬಹುಭಾಷಾ ನಟ ಮತ್ತು ಬಿಜೆಪಿ ನಾಯಕ ರವಿ ಕಿಶನ್ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾದ ನಂಟಿನ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮಾದಕ ವಸ್ತು ನಿಯಂತ್ರಣ ಇಲಾಖೆಯನ್ನು ಹೊಗಳುವ ಮೂಲಕ ಚಿತ್ರರಂಗದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮತ್ತು ವ್ಯಸನದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

  ಜಯಾ ಬಚ್ಚನ್ ಪ್ರತಿಕ್ರಿಯೆ

  ಜಯಾ ಬಚ್ಚನ್ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯಾ ಬಚ್ಚನ್, "ಕೆಲವೇ ಜನರ ಕಾರಣದಿಂದ ಇಡೀ ಸಿನಿಮಾರಂಗವನ್ನು ದೂರುವುದು ಸರಿಯಲ್ಲ. ನಿನ್ನೆ ಲೋಕಸಭೆ ಸದಸ್ಯರರೊಬ್ಬರು, ಚಿತ್ರೋದ್ಯಮದ ವಿರುದ್ಧ ಮಾತನಾಡಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದು ಆಹಾರ ನೀಡಿದ ಕೈಯನ್ನೆ ಕಚ್ಚಿದಂತೆ" ಎಂದು ಖಡಕ್ ಉತ್ತರ ನೀಡಿದ್ದಾರೆ.

  ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು: ನಟಿ ಕಂಗನಾ ರಣಾವತ್ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು: ನಟಿ ಕಂಗನಾ ರಣಾವತ್

  ಕಂಗನಾ ವಿರುದ್ಧ ಅಸಮಾಧಾನ

  ಕಂಗನಾ ವಿರುದ್ಧ ಅಸಮಾಧಾನ

  ಅಷ್ಟೆಯಲ್ಲದೇ ನಟಿ ಕಂಗನಾ ರಣಾವತ್ ವಿರುದ್ಧವು ಜಯಾ ಬಚ್ಚನ್ ಗುಡುಗಿದ್ದಾರೆ. "ಚಿತ್ರೋದ್ಯಮದ ಮೇಲೆ ಸಾಮಾಜಿಕ ಮಾಧ್ಯಮದ ಹೊಡೆತ ಜಾಸ್ತಿ ಆಗುತ್ತಿದೆ. ಉದ್ಯಮದಲ್ಲಿ ಹೆಸರು ಮಾಡಿದ ಕೆಲವರು ಚಿತ್ರರಂಗವನ್ನು 'ಮೋರಿ' ಎಂದು ಕರೆಯುತ್ತಾರೆ. ನಾನು ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಈ ರೀತಿಯ ಭಾಷೆ ಬಳಸಬೇಡಿ ಎಂದು ಸರ್ಕಾರ ಅಂತವರಿಗೆ ಸೂಚಿಸುತ್ತದೆ ಎಂದು ಭಾವಿಸಿದ್ದೀನಿ" ಎಂದಿದ್ದಾರೆ.

  ಚಿತ್ರರಂಗವನ್ನು ಮೋರಿಗೆ ಹೋಲಿಸಿದ್ದ ಕಂಗನಾ

  ಚಿತ್ರರಂಗವನ್ನು ಮೋರಿಗೆ ಹೋಲಿಸಿದ್ದ ಕಂಗನಾ

  ಕೆಲವು ದಿನಗಳ ಹಿಂದೆ ನಟಿ ಕಂಗನಾ ರಣಾವತ್, ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ ಆಂಗಲ್ ಬಗ್ಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಚಿತ್ರರಂಗವನ್ನು 'ಮೋರಿ'ಗೆ ಹೋಲಿಸಿ ಟ್ವೀಟ್ ಮಾಡಿದ್ದರು "ಚಿತ್ರೋದ್ಯಮದಲ್ಲಿ ಮಾದಕ ವಸ್ತು ಸೇವನೆ ಬಗ್ಗೆ ಸುಳಿವು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದರೆ ಅನೇಕರು ಸ್ಟಾರ್ ನಟರು ಜೈಲಿಗೆ ಹೋಗುತ್ತಾರೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಬಾಲಿವುಡ್ ಎಂಬ 'ಮೋರಿ'ಯನ್ನು ಸ್ವಚ್ಛ ಮಾಡಬೇಕು" ಟ್ವೀಟ್ ಮಾಡುವ ಮೂಲಕ ಬಾಲಿವುಡ್ ಅನ್ನು ಮೋರಿಗೆ ಹೋಲಿದ್ದರು.

  English summary
  Senior Actress and MP Jaya Bachchan Expressed Her Displeasure Over Constant Remarks Being Made Against the Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X