For Quick Alerts
  ALLOW NOTIFICATIONS  
  For Daily Alerts

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ: ಕಂಗನಾ ವಿವಾದ

  |

  ಸಿನಿಮಾಗಳ ಬದಲಾಗಿ ವಿವಾದಗಳಿಂದಷ್ಟೆ ಸುದ್ದಿಯಾಗಿರುತ್ತಿರುವ ನಟಿ ಕಂಗನಾ ರನೌತ್, ಈಗ ಮತ್ತೊಂದು ಗುರುತರ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಭಾರತದ ಹೃದಯ ಎನಿಸಿಕೊಳ್ಳುವ ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದಾರೆ ಈ ನಟಿ.

  Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Filmibeat Kannada

  'ಮುಂಬೈ ಪೊಲೀಸರು, ಮಾಫಿಯಾ ಗೂಂಡಾಗಳಿಗಿಂತಲೂ ಭಯ ಹುಟ್ಟಿಸುತ್ತಾರೆ' ಎಂದು ಕಂಗನಾ ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಆಡಳಿತ ಪಕ್ಷ ಶಿವಸೇನಾ ಹಾಗೂ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

  ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

  ಮುಂಬೈ ಪೊಲೀಸರ ಬಗ್ಗೆ ಕಂಗನಾ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ, ಶಿವಸೇನಾ ಪಕ್ಷದ ಮುಖ್ಯಸ್ಥ, ಸಂಜಯ್ ರಾವತ್, 'ಮುಂಬೈ ಪೊಲೀಸರ ಬಗ್ಗೆ ಅಷ್ಟೋಂದು ಭಯವಿದ್ದರೆ, ಮುಂಬೈ ಗೆ ಹಿಂದಿರುಗಿ ಬರಬೇಡಿ' ಎಂದು ಕಂಗನಾ ಗೆ ಹೇಳಿದ್ದರು.

  ಮುಂಬೈ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ: ಕಂಗನಾ

  ಮುಂಬೈ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ: ಕಂಗನಾ

  ಸಂಜಯ್ ರಾವತ್ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಕಂಗನಾ, 'ಸಂಜಯ್ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮೊದಲಿಗೆ 'ಆಜಾದಿ ಗ್ಯಾಂಗ್‌'ಗಳು ಮುಂಬೈ ರಸ್ತೆಗಳಲ್ಲಿ ಅಬ್ಬರಿಸಿದವು, ಈಗ ಬಹಿರಂಗ ಬೆದರಿಕೆ ಹಾಕಲಾಗುತ್ತಿದೆ. ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ' ಎಂದಿದ್ದಾರೆ ಕಂಗನಾ ರನೌತ್.

  ಕಂಗನಾ ವಿರುದ್ಧ ಟ್ವೀಟ್‌ಗೆ ಪೊಲೀಸ್ ಅಧಿಕಾರಿ ಲೈಕ್?

  ಕಂಗನಾ ವಿರುದ್ಧ ಟ್ವೀಟ್‌ಗೆ ಪೊಲೀಸ್ ಅಧಿಕಾರಿ ಲೈಕ್?

  ಕೆಲವು ದಿನಗಳ ಹಿಂದೆ ಕಂಗನಾ ಕುರಿತ ಋಣಾತ್ಮಕ ಟ್ವೀಟ್ ಒಂದಕ್ಕೆ ಮುಂಬೈ ಪೊಲೀಸ್ ನ ಉನ್ನತ ಅಧಿಕಾರಿಯೊಬ್ಬರು ಲೈಕ್ ಒತ್ತಿದ್ದು ಸುದ್ದಿಯಾಗಿತ್ತು. ಹಾಗಾಗಿ ಕಂಗನಾ ಮುಂಬೈ ಪೊಲೀಸರ ವಿರುದ್ಧ ಟ್ವೀಟ್ ವಾಗ್ದಾಳಿ ನಡೆಸುತ್ತಿದ್ದಾರೆ. ಕಂಗನಾ ವಿರುದ್ಧ ಟ್ವೀಟ್‌ಗೆ ಲೈಕ್ ಒತ್ತಿದ್ದನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.

  ಬಾಲಿವುಡ್ ನಟರ ಮೇಲೆ ಕಂಗನಾ ನೇರ ಆರೋಪ

  ಬಾಲಿವುಡ್ ನಟರ ಮೇಲೆ ಕಂಗನಾ ನೇರ ಆರೋಪ

  ಇತ್ತೀಚೆಗಷ್ಟೆ ಕಂಗನಾ, ಬಾಲಿವುಡ್‌ನ ಪ್ರಮುಖ ನಟರಾದ, ರಣ್ವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೊಕೇನ್ ಮಾದಕ ವಸ್ತು ವ್ಯಸನಿಗಳು ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.

  'ಇಬ್ಬರು Below Average....,ಅವರ ಟೈಂ ಮುಗಿತು': 'ಲವ್‌ಬರ್ಡ್ಸ್' ಕಾಲೆಳೆದ ಕಂಗನಾ

  English summary
  Mumbai seems like Pakistan occupied Kashmir said actress Kangana Ranaut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X