For Quick Alerts
  ALLOW NOTIFICATIONS  
  For Daily Alerts

  ಮರ್ಡರ್' ಮಾಡಲು ಬರುತ್ತಿದ್ದಾರೆ ಅದಿತಿ ರಾವ್

  By Rajendra
  |

  ಎಂಟು ವರ್ಷಗಳ ಹಿಂದೆ ಅನುರಾಗ್ ಬಸು ಆಕ್ಷನ್ ಕಟ್‌ನಲ್ಲಿ 'ಮರ್ಡರ್' ಚಿತ್ರ ಬಂದಿದ್ದು ನೆನಪಿರಬಹುದು. ಇಮ್ರಾನ್ ಹಸ್ಮಿ, ಮಲ್ಲಿಕಾ ಶೆರಾವತ್ ಜೊತೆಯಾಗಿ ಅಭಿನಯಿಸಿದ್ದ ಈ ರೋಮಾಂಚಕ ಚಿತ್ರದ ರೋಚಕ ಸನ್ನಿವೇಶಗಳನ್ನು ಯುವ ಪ್ರೇಕ್ಷಕರು ಇನ್ನೂ ಮರೆತಿರಕ್ಕಿಲ್ಲ.

  ಯುವ ಜನತೆಯನ್ನು ಅಪಾರವಾಗಿ ಸೆಳೆದಿದ್ದ ಈ ಚಿತ್ರದ ಮುಂದುವರಿದ ಭಾಗವಾಗಿ ಕಳೆದ ವರ್ಷ 'ಮರ್ಡರ್ 2' ಚಿತ್ರ ಬಂದಿತ್ತು. ಈ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಅದೇ ಉತ್ಸಾಹದಲ್ಲಿ ಮತ್ತೊಂದು 'ಮರ್ಡರ್' ಚಿತ್ರ ಬರುತ್ತಿದೆ.

  ಆದರೆ ಪಾರ್ಟ್ 2 ಚಿತ್ರದಲ್ಲಿ ನಾಯಕಿ ಸ್ಥಾನ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಲಭಿಸಿತ್ತು. ಆಕ್ಷನ್ ಕಟ್ ಹೇಳಿದ್ದದ್ದು ಮೋಹಿತ್ ಸೂರಿ. ಈಗ ಇವೆರಡೂ ಚಿತ್ರಗಳನ್ನೂ ಮೀರಿಸುವಂತಹ 'ಮರ್ಡರ್ 3' ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ರಣದೀಪ್ ಹೂಡಾ, ಅದಿತಿ ರಾವ್ ಈ ಬಾರಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಲಿದ್ದಾರೆ.

  ಈ ಬಾರಿ ನಿರ್ದೇಶನದ ಜವಾಬ್ದಾರಿ ಮುಖೇಶ್ ಭಟ್ ಮಗ ವಿಶೇಷ್ ಭಟ್ ಹೊತ್ತಿದ್ದಾರೆ. ವಿಶೇಷ್ ಫಿಲಂಸ್ ಸ್ಥಾಪಿಸಿ 25 ವರ್ಷಗಳು ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಖೇಶ್ ಭಟ್ ತಮ್ಮ ಪುತ್ರರತ್ನನನ್ನು ನಿರ್ದೇಶಕನಾಗಿ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.

  ಈ ಸಂದರ್ಭರಲ್ಲಿ ಅವರು ಮಾತನಾಡುತ್ತಾ, "ನನ್ನ ಸಹೋದರ ಮಹೇಶ್ ಭಟ್ ಅವರೊಂದಿಗೆ ಕೈಜೋಡಿಸಿ 25 ವರ್ಷಗಳ ಹಿಂದೆ ವಿಶೇಷ್ ಫಿಲಂಸ್ ಸ್ಥಾಪಿಸಿದೆ. 'ದಿಲ್ ವಾಲೆ ದುಲ್ಹನಿಯಾ ಲೇಜಾಯೇಂಗೆ' ಯಶ್ ಫಿಲಂಸ್‌ಗೆ, 'ಮೈನೆ ಪ್ಯಾರ್ ಕಿಯಾ' ರಾಜಶ್ರೀ ಸಂಸ್ಥೆಗೆ ಹೇಗೋ ಹಾಗೆ ನಮ್ಮ ಸಂಸ್ಥೆಗೆ 'ಮರ್ಡರ್ 3' ಚಿತ್ರ ಉಳಿಯಲಿದೆ. ಹಾಗಾಗಿಯೇ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Bollywood producer Mukesh Bhatt's son will be making his foray into direction.Mukesh Bhatt production house is set to launch his son Vishesh as a director with his production venture 'Murder 3'. He will be directing Murder 3 starring Randeep Hooda and Aditi Rao Hydari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X